
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಐರ್ಲೆಂಡ್‌ನ ಜೋಶ್ ಲಿಟಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಐರ್ಲೆಂಡ್ ಪೇಸರ್ ದಾಳಿಯಿಂದಾಗಿ ಕಿವೀಸ್ 200ರ ಗಡಿ ಮುಟ್ಟುವ ಕನಸು ನನಸಾಗಲಿಲ್ಲ.
ಫಿನ್ ಅಲೆನ್ 32, ಡೆವೊನ್ ಕಾನ್ವೆ 28, ನಾಯಕ ಕೇನ್ ವಿಲಿಯಮ್ಸನ್ 61, ಗ್ಲೆನ್ ಫಿಲಿಪ್ಸ್ 17, ಡೆರಿಲ್ ಮಿಚೆಲ್ ಅಜೇಯ 31ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿತು.
ಕೇನ್ ವಿಲಿಯಮ್ಸನ್ 34 ಎಸೆತಗಳಲ್ಲಿ 64 ರನ್ ಕಲೆಹಾಕಿ, ತಂಡವನ್ನು 200ರ ಗಡಿ ಮುಟ್ಟಿಸಬೇಕೆಂದು ಪಣತೊಟ್ಟಿದ್ದರು. ಆದ್ರೆ 19ನೇ ಓವರ್‌ನಲ್ಲಿ ಜೋಶ್ ಲಿಟಲ್ ಕಿವೀಸ್ ಆಸೆಗೆ ತಣ್ಣೀರೆರಚಿದ್ರು. ತನ್ನ ಅಂತಿಮ ಓವರ್‌ನ 2 ಎಸೆತದಲ್ಲಿ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸಿದ್ರು. ಕಿವೀಸ್ ನಾಯಕ ಡೆಲ್ನಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ವಿಲಿಯಮ್ಸನ್ ಔಟಾದ ಬಳಿಕ ಕ್ರೀಸ್‌ಗಿಳಿದ ಮೊದಲ ಎಸೆತದಲ್ಲೇ ಜೇಮ್ಸ್ ನೀಶಮ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವಲ್ಲಿ ಜೋಶ್ ಲಿಟಲ್ ಯಶಸ್ವಿಯಾದ್ರು. ಹ್ಯಾಟ್ರಿಲ್ ವಿಕೆಟ್ ನೀಡಬಾರದೆಂದು ಕ್ರೀಸ್‌ಗಿಳಿದಿದ್ದ ಮಿಚೆಲ್ ಸ್ಯಾಂಟ್ನರ್ ಕೂಡ ಜೋಸ್ ಲಿಟಲ್‌ಗೆ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ಕಿವೀಸ್‌ಗೆ ಆಘಾತ ನೀಡಿದ್ರೆ, ಜೋಸ್ ಲಿಟರ್ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
4 ಓವರ್‌ಗೆ 22ರನ್ ನೀಡಿ 3 ವಿಕೆಟ್ ಪಡೆದ ಜೋಶ್ ಲಿಟಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಸೇರಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಯುಎಇ ತಂಡದ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಶ್ರೀಲಂಕಾ ತಂಡದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಯಾವ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ? ಯಾವ ತಂಡದ ವಿರುದ್ಧ ಎಂಬುದನ್ನು ಈ ಕೆಳಗೆ ಕಾಣಬಹುದು.
ಬ್ರೆಟ್ ಲೀ vs ಬಾಂಗ್ಲಾದೇಶ, ಕೇಪ್‌ಟೌನ್ (2007)
ಕರ್ಟಿಸ್ ಕ್ಯಾಂಪರ್ vs ನೆದರ್ಲ್ಯಾಂಡ್ಸ್, ಅಬು ದಾಬಿ (2021)
ವಹಿಂದು ಹಸರಂಗ vs ದಕ್ಷಿಣ ಆಫ್ರಿಕಾ, ಶಾರ್ಜಾ (2021)
ಕಗಿಸೊ ರಬಾಡ vs ಇಂಗ್ಲೆಂಡ್, ಶಾರ್ಜಾ (2021)
ಕಾರ್ತಿಕ್ ಮೇಯಪ್ಪನ್ vs ಶ್ರೀಲಂಕಾ, ಗೀಲಾಂಗ್ (2022)
ಜೋಶ್ ಲಿಟ್ಟಲ್ vs ನ್ಯೂಜಿಲೆಂಡ್ ಅಡಿಲೇಡ್ (2022)