Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಕೆ.ಎಲ್ ರಾಹುಲ್ , ಬಲಿಷ್ಠ ತಂಡಗಳೆದುರು ಠುಸ್ ಪಟಾಕಿ

KL RAHUL

ಅಡಿಲೇಡ್‌ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತವಾಗಿದೆ. ಓಪನರ್ ಕೆ.ಎಲ್ ರಾಹುಲ್ ಮತ್ತೊಮ್ಮೆ ಟೀಂ ಇಂಡಿಯಾಗೆ ಕೈ ಕೊಟ್ಟಿದ್ದಾರೆ.

5 ಎಸೆತಗಳನ್ನ ಎದುರಿಸಿದ ಕೆ.ಎಲ್ ರಾಹುಲ್ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಜಾಸ್ ಬಟ್ಲರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿ ಉತ್ತಮ ಆರಂಭ ನೀಡುವ ಲಕ್ಷಣ ತೋರಿದ್ದ ಕೆ.ಎಲ್ ರಾಹುಲ್ ಆಟ 5ರನ್‌ಗೆ ಕೊನೆಗೊಂಡಿತು.

ಇಡೀ ಟೂರ್ನಮೆಂಟ್‌ನಲ್ಲಿ ಏಕೈಕ ಅರ್ಧಶತಕ ದಾಖಲಿಸಿರುವ ಕೆ.ಎಲ್ ರಾಹುಲ್ ಕಳೆದ ಜಿಂಬಾಬ್ವೆ ವಿರುದ್ಧದ ಅರ್ಧಶತಕ ದಾಖಲಿಸಿ ಫಾರ್ಮ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ ಇಂಗ್ಲೆಂಡ್ ವಿರುದ್ಧ ಸಿಂಗಲ್ ಡಿಟಿಟ್‌ಗೆ ಔಟಾಗುವ ಮೂಲಕ ಕೆ.ಎಲ್ ನಿರಾಸೆ ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಪವರ್‌ಪ್ಲೇ ಓವರ್‌ಗಳಲ್ಲಿ ಭಾರತವು ಒತ್ತಡಕ್ಕೆ ಒಳಗಾಗುವಂತೆ ಮಾಡಿದ್ದಾರೆ.

ಕೆ.ಎಲ್ ರಾಹುಲ್ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳ ಎದುರು ಉತ್ತಮ ಇನ್ನಿಂಗ್ಸ್ ಆಡಿರುವ ಉದಾಹರಣೆ ತುಂಬಾ ಕಡಿಮೆಯಿದೆ. ಐಸಿಸಿ ಅಗ್ರ 8 ರ್ಯಾಂಕಿಂಗ್‌ ಹೊಂದಿರುವ ತಂಡಗಳ ಎದುರು ರಾಹುಲ್ ರನ್ ಬರ ಎದುರಿಸಿದ್ದಾರೆ. ಆ ಕುರಿತಾದ ಉದಾಹರಣೆ ಈ ಕೆಳಗಿದೆ.

ಟಿ20 ವಿಶ್ವಕಪ್‌ನಲ್ಲಿ ಅಗ್ರ 8 ತಂಡಗಳ ವಿರುದ್ಧ ಕೆ.ಎಲ್ ರಾಹುಲ್ ಇನ್ನಿಂಗ್ಸ್‌
3 ರನ್ vs ಪಾಕಿಸ್ತಾನ, ದುಬೈ
18 ರನ್ vs ನ್ಯೂಜಿಲೆಂಡ್, ದುಬೈ
4 ರನ್ vs ಪಾಕಿಸ್ತಾನ, ಮೆಲ್ಬರ್ನ್
9 ರನ್ vs ದಕ್ಷಿಣ ಆಫ್ರಿಕಾ, ಪರ್ತ್‌
5 ರನ್ vs ಇಂಗ್ಲೆಂಡ್, ಅಡಿಲೇಡ್

ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್

Story first published: Thursday, November 10, 2022, 14:17 [IST]
Other articles published on Nov 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+