
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಐದು ರನ್‌ಗಳ ರೋಚಕ ಗೆಲುವು ಸಂಪಾದಿಸಿತು. 185ರನ್ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶಕ್ಕೆ ಮಳೆಯಿಂದಾಗಿ 16 ಓವರ್‌ಗಳಲ್ಲಿ 151ರನ್ ಗುರಿ ನೀಡಲಾಯಿತು. ಆದ್ರೆ ಬಾಂಗ್ಲಾ ಹುಲಿಗಳು ಗುರಿ ಮುಟ್ಟಲಾಗದೇ ಸೋಲನ್ನ ಅನುಭವಿಸಿದ್ದಾರೆ.
ಅದಾಗಲೇ 7 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 66ರನ್ ಕಲೆಹಾಕಿದ್ದ ಬಾಂಗ್ಲಾದೇಶ ಸುಲಭವಾಗಿ ಗೆದ್ದು ಬಿಡಬಹುದೇ ಎಂದು ಗೋಚರಿಸುತ್ತಿತ್ತು. ಇದಕ್ಕೆ ಕಾರಣ ಬಾಂಗ್ಲಾ ಓಪನರ್ ಲಿಟ್ಟನ್ ದಾಸ್ ಸ್ಫೋಟಕ ಆರಂಭ. ಟೀಂ ಇಂಡಿಯಾದ ಎಲ್ಲಾ ಬೌಲರ್‌ಗಳನ್ನ ಬೆಂಡೆತ್ತಿದ ಲಿಟ್ಟನ್ ದಾಸ್ ಪವರ್‌ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದರು.
21 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ ಲಿಟ್ಟನ್ ದಾಸ್ ಬಾಂಗ್ಲಾದೇಶದ ಪರ ಟಿ20 ಕ್ರಿಕೆಟ್‌ನಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದರು. ಜೊತೆಗೆ ಟೀಂ ಇಂಡಿಯಾ ವಿರುದ್ಧ ದಾಖಲಾದ ಮೂರನೇ ವೇಗದ ಅರ್ಧಶತಕ ಇದಾಗಿದೆ.
27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾ ಪರ ಎರಡನೇ ವೇಗದ ಅರ್ಧಶತಕ ಇದಾಗಿದೆ. ಇದಕ್ಕೂ ಮುನ್ನ 2007ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊಹಮ್ಮದ್ ಅಶ್ರಫುಲ್ 20 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಆದ್ರೆ 15 ವರ್ಷಗಳ ಬಳಿಕ ಬಾಂಗ್ಲಾ ಬ್ಯಾಟರ್ ಅಂತಹದ್ದೇ ಇನ್ನಿಂಗ್ಸ್ ಆಡಿದ್ದು, ಸೋಲಿನಿಂದ ಕೊನೆಗೊಂಡಿದೆ.
ಭಾರತದ ವಿರುದ್ಧ ವೇಗದ ಅರ್ಧಶತಕಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಜಂಟಿ ಸ್ಥಾನ ಪಡೆದಿರುವ ಲಿಟ್ಟನ್ ದಾಸ್ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದೇ ವರ್ಷ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ರು. ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಜಾನ್ಸನ್ ಚಾರ್ಲ್ಸ್ ಕಾಣಬಹುದು.
2016ರಲ್ಲಿ ಭಾರತ ವರ್ಸಸ್ ವೆಸ್ಟ್ ಇಂಡೀಸ್ ಟಿ20 ಸರಣಿಯು ಲೌಡರ್‌ಹಿಲ್‌ನಲ್ಲಿ ನಡೆಯಿತು. ಈ ಪಂದ್ಯದ್ಲಿ ಚಾರ್ಲ್ಸ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಡಿ ಮುಟ್ಟಿದ್ರು.
ಇದೀಗ ಲಿಟ್ಟನ್ ದಾಸ್ ಶ್ರೀಲಂಕಾದ ಲೆಜೆಂಡ್ ಕುಮಾರ ಸಂಗಕ್ಕಾರ 2009ರಲ್ಲಿ ನಾಗ್ಪುರದಲ್ಲಿ ಸಿಡಿಸಿದ ಸ್ಫೋಟಕ ಅರ್ಧಶತಕ (21 ಎಸೆತ) ಸಾಧನೆಗೆ ಜಂಟಿ ಸ್ಥಾನ ಪಡೆದಿದ್ದಾರೆ.
ಅದಾಗಲೇ 7 ಒವರ್‌ಗೆ 66ರನ್ ಕಲೆಹಾಕಿದ್ದ ಬಾಂಗ್ಲಾ ತಂಡಕ್ಕೆ ಮಳೆಯಿಂದಾಗಿ ಓವರ್ ಕಡಿತಗೊಂಡು 16 ಓವರ್‌ಗೆ 151 ರನ್ ಗುರಿ ನೀಡಲಾಯಿತು. ಪರಿಣಾಮ ಉಳಿದಿದ್ದ 9 ಓವರ್‌ಗಳಲ್ಲಿ ಬಾಂಗ್ಲಾಕ್ಕೆ 84ರನ್ ಬೇಕಿತ್ತು. 10 ವಿಕೆಟ್‌ಗಳು ತಂಡದ ಕೈನಲ್ಲಿತ್ತು.
ಆದ್ರೆ 27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್, ಕೆ.ಎಲ್ ರಾಹುಲ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆಗುತ್ತಿದ್ದಂತೆ, ಗೆಲುವಿನ ಟ್ರೆಂಡ್ ಬಾಂಗ್ಲಾ ಕಡೆಯಿಂದ ಭಾರತದ ಕಡೆಗೆ ಶಿಫ್ಟ್ ಆಯಿತು. ನಂತರ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ಐದು ರನ್‌ಗಳಿಂದ ಸೋಲನ್ನ ಅನುಭವಿಸಿತು.