For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಅಂಪೈರ್ಸ್ ಎಡವಟ್ಟು, ಓವರ್‌ನಲ್ಲಿ 5 ಎಸೆತ

Australia

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಕೇವಲ 4 ರನ್‌ಗಳಲ್ಲಿ ಪಂದ್ಯವನ್ನು ಜಯಿಸುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ಸ್ವಲ್ಪ ಯಾಮಾರಿದ್ರೂ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಆಸೆ ಶುಕ್ರವಾರವೇ ಕೊನೆಗೊಳ್ಳುತ್ತಿತ್ತು.

ಗ್ಲೆನ್‌ ಮ್ಯಾಕ್ಸ್‌ವೆಲ್‌ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ 168 ರನ್ ಕಲೆಹಾಕಿದ್ದು, ಅಫ್ಘಾನಿಸ್ತಾನ ಗೆಲುವಿಗೆ 169ರನ್ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನದ ಟಾಪ್ ಆರ್ಡರ್‌ ವೈಫಲ್ಯಗೊಂಡರೂ ಸಹ ಕೊನೆಯಲ್ಲಿ ರಶೀದ್ ಖಾನ್ ಅಬ್ಬರಕ್ಕೆ ಕಾಂಗರೂ ಪಡೆ ತತ್ತರಿಸಿತು. 23 ಎಸೆತಗಳಲ್ಲಿ ಅಜೇಯ 48ರನ್ ಕಲೆಹಾಕಿದ ರಶೀದ್‌ ಖಾನ್ ಗೆಲುವಿನಂಚಿಗೆ ತಂಡವನ್ನು ತೆಗೆದುಕೊಂಡರು ಹೋದರೂ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಆದ್ರೆ ಈ ಪಂದ್ಯದಲ್ಲಿ ಅಂಪೈರ್ ಮಾಡಿದ್ದ ದೊಡ್ಡ ತಪ್ಪು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಟಾಸ್‌ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನ ಪರ ನವೀನ್ ಉಲ್‌ ಹಕ್ ಒಂದು ಓವರ್‌ನಲ್ಲಿ ಕೇವಲ ಐದು ಎಸೆತಗಳನ್ನಷ್ಟೇ ಮಾಡಿದ್ದರೂ ಅಂಪೈರ್‌ ಸರಿಯಾಗಿ ಪರಿಶೀಲಿಸದೆ ಓವರ್ ಮುಕ್ತಾಯಗೊಳಿಸಿದ್ದಾರೆ.

ಈ ಘಟನೆ ನಡೆದಿರುವುದು ಪಂದ್ಯದ ನಾಲ್ಕನೇ ಓವರ್‌ನಲ್ಲಿ. ಪರಿಪೂರ್ಣಗೊಳ್ಳದ ಈ ಓವರ್‌ನಲ್ಲಿ ಆಸ್ಟ್ರೇಲಿಯಾ 9 ರನ್‌ ಕಲೆಹಾಕಿತು. ಈ ವಿಶ್ವಕಪ್‌ನಲ್ಲಿ ಸಾಕಷ್ಟು ಅಂಪೈರ್‌ ತೀರ್ಪುಗಳು ವಿವಾದಕ್ಕೆ ಕಾರಣವಾದ್ರೂ ಸಹ ಇದು ಪಟ್ಟಿಯಲ್ಲಿ ಅಗ್ರಸ್ಥಾನವಾಗಿದೆ. ಏಕೆಂದರೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಂಪೈರ್‌ ಈ ರೀತಿಯ ಪ್ರಮಾದವನ್ನು ಅಷ್ಟು ಸುಲಭವಾಗಿ ಕ್ಷಮಿಸಲು ಸಾಧ್ಯವಾಗುವುದಿಲ್ಲ.

ಅದ್ರಲ್ಲೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ 4 ರನ್‌ಗಳಿಂದಷ್ಟೇ ಗೆಲ್ಲಲು ಸಾಧ್ಯವಾಗಿದೆ. ಒಂದು ವೇಳೆ ಪಂದ್ಯ ಸೋತಿದ್ದೇ ಆದಲ್ಲಿ, ಈ ಅಂಪೈರ್ ವಿವಾದವು ಮತ್ತಷ್ಟು ತಾರಕಕ್ಕೆ ಏರುತ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಫ್ಘಾನಿಸ್ತಾನ ವಿರುದ್ಧ ಗೆಲ್ಲುವ ಮೂಲಕ ಆಸ್ಟ್ರೇಲಿಯಾ 7 ಪಾಯಿಂಟ್ಸ್ ಕಲೆಹಾಕಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಆದ್ರೆ ನೆಟ್‌ ರನ್‌ರೇಟ್‌ನಲ್ಲಿ ಹಿಂದಿರುವ ಆಸ್ಟ್ರೇಲಿಯಾ -0.173 ರಷ್ಟಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 7 ಪಾಯಿಂಟ್ಸ್ ಹೊಂದಿದ್ದರೂ, ನೆಟ್‌ ರನ್‌ರೇಟ್‌ನಲ್ಲಿ ಹಿಂದಿರುವ ಕಾರಣ ಸೆಮಿಫೈನಲ್ ಪ್ರವೇಶ ಕಷ್ಟಸಾಧ್ಯವಾಗಿದೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಸೋಲನ್ನ ಅನುಭವಿಸಿದ್ರೆ ಮಾತ್ರ ಆಸಿಸ್ ಸೆಮಿಫೈನಲ್‌ ಪ್ರವೇಶಿಸಲಿದೆ.

Story first published: Saturday, November 5, 2022, 11:34 [IST]
Other articles published on Nov 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+