ಬೃಹತ್ ಸಿಕ್ಸರ್ ಬಾರಿಸಲು MS ಧೋನಿ ಸಲಹೆ ಪಡೆದ ಹಾರ್ದಿಕ್ ಪಾಂಡ್ಯ, KL ರಾಹುಲ್

ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಭಾರತವು ನೆದರ್ಲೆಂಡ್ಸ್ ವಿರುದ್ಧ 56 ರನ್‌ಗಳಿಂದ ಗೆದ್ದಿತು. ಈ ಎರಡು ಪಂದ್ಯಗಳ ಜಯದೊಂದಿಗೆ ಮುಂದಿನ ಪಂದ್ಯವನ್ನ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿದ್ರೆ, ಭಾರತದ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತವಾಗಲಿದೆ.
ಭಾನುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಭಾರತಕ್ಕೆ ನಿರ್ಣಾಯಕವಾಗಿದೆ. ಈ ಅಡೆತಡೆಯನ್ನು ದಾಟಿದ್ರ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಭಾರತ ಸೆಮಿಫೈನಲ್ ತಲುಪಬಹುದು.
ಭಾರತ ತಂಡ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚುತ್ತದೆ. ವಿರಾಟ್ ಕೊಹ್ಲಿ ಅವರ ಅಮೋಘ ಫಾರ್ಮ್ ತಂಡಕ್ಕೆ ಬಲ ತುಂಬಿದೆ. ನೆದರ್ಲೆಂಡ್ಸ್ ವಿರುದ್ಧ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೆ.ಎಲ್ ರಾಹುಲ್ ಫಾರ್ಮ್‌ಗೆ ಮರಳುವುದು ಮಾತ್ರ ಭಾರತಕ್ಕೆ ಬಹಳ ಮುಖ್ಯವಾಗಿದೆ. ಇದೀಗ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ದೊಡ್ಡ ಸಿಕ್ಸರ್ ಬಾರಿಸಲು ಎಂಎಸ್ ಧೋನಿ ನೀಡಿದ ಸಲಹೆ ಪಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಧೋನಿ ನೀಡಿದ ಸಲಹೆ ಪಾಲಿಸಿದ ಹಾರ್ದಿಕ್ ಪಾಂಡ್ಯ
ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಳಸಿದ ಬ್ಯಾಟ್ ಅನ್ನು ನೋಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಇದರ ಕೆಳಭಾಗದ ಆಕಾರವು ಇತರ ಬ್ಯಾಟ್‌ಗಳಂತಿಲ್ಲ. ಹಾರ್ದಿಕ್ ಬ್ಯಾಟ್‌ನ ಕೆಳಭಾಗ ಯು ಆಕಾರದಲ್ಲಿದೆ. ಇದು ಟಿ20 ವಿಶ್ವಕಪ್‌ನಲ್ಲಿ ಧೋನಿ ಬಳಸಿದ ಬ್ಯಾಟ್‌ನಂತೆಯೇ ಇದೆ. ಈ ರೀತಿಯ ಬ್ಯಾಟ್ ಇದ್ದಾಗ ಆಟಗಾರರಿಗೆ ಹೆಚ್ಚು ಟೈಮಿಂಗ್ ಸಿಗುತ್ತದೆ. ಬ್ಯಾಟ್‌ನ ಈ ಆಕಾರವು ಚೆಂಡಿನ ಮೇಲೆ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಧೋನಿ ಸಲಹೆಯಂತೆ ಹಾರ್ದಿಕ್ ಈ ರೀತಿಯ ಬ್ಯಾಟ್ ಬಳಸುತ್ತಾರೆ. ಟಿ20 ವಿಶ್ವಕಪ್ 2019 ರ ಮೊದಲು, ಧೋನಿ ಬ್ಯಾಟ್‌ನ ಕೆಳಭಾಗದಲ್ಲಿ ವ್ಯತ್ಯಾಸದೊಂದಿಗೆ ಬ್ಯಾಟ್‌ಗಳನ್ನು ಬಳಸಲು ಪ್ರಾರಂಭಿಸಿದರು. ಅದರ ನಂತರ, ಈಗ ಅನೇಕ ಭಾರತೀಯ ಆಟಗಾರರು ಈ ರೀತಿಯ ಬ್ಯಾಟ್ ತಯಾರಿಸಲು ಕೇಳುತ್ತಿದ್ದಾರೆ ಎಂದು ಎಸ್‌ಜಿ ಬ್ಯಾಟ್ ಮ್ಯಾನುಫ್ಯಾಕ್ಚರರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಾರಸ್ ಆನಂದ್ ಹೇಳಿದರು.
T20 ವಿಶ್ವಕಪ್: ಭಾರತ vs ದಕ್ಷಿಣ ಆಫ್ರಿಕಾ ಪ್ರಿವ್ಯೂ, ಹೆಡ್ ಟು ಹೆಡ್ ರೆಕಾರ್ಡ್, ಪಿಚ್ ರಿಪೋರ್ಟ್, ಪ್ಲೇಯಿಂಗ್ 11

ಕೆ.ಎಲ್ ರಾಹುಲ್ ಕೂಡ ಧೋನಿ ಸಲಹೆ ಪಡೆದಿದ್ದಾರೆ
ಕೆಎಲ್ ರಾಹುಲ್ ಕೂಡ ಇದೇ ಬ್ಯಾಟ್ ಬಳಸುತ್ತಾರೆ. ಈ ಬ್ಯಾಟ್ ಬ್ಯಾಟ್ಸ್‌ಮನ್‌ಗೆ ಹೇಗೆ ಸಹಾಯ ಮಾಡುತ್ತದೆ ಹಾಗೂ ಈ ಬ್ಯಾಟ್‌ನ ಆಕಾರವು ಮೈದಾನದ ಎಲ್ಲಾ ಭಾಗಗಳಿಗೆ ಹೊಡೆತವನ್ನು ಹೊಡೆಯಲು ಸಹಾಯ ಮಾಡುತ್ತದೆ. ಈ ಆಕಾರವು ವೇಗದ ಬೌಲಿಂಗ್‌ಗೆ ತ್ವರಿತವಾಗಿ ಉತ್ತರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಕಾರವು ಬ್ಯಾಟ್‌ನ ತುದಿಯಲ್ಲಿ ಹೆಚ್ಚಿನ ಶಕ್ತಿಯನ್ನು ಉತ್ಪಾಸಿದಲು ಸಹಾಯ ಮಾಡುತ್ತದೆ. ಜೊತೆಗೆ ಬ್ಯಾಟ್ ಆಕಾರವು ಬ್ಯಾಟ್ಸ್‌ಮನ್‌ಗೆ ಟಿ20ಯಲ್ಲಿ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯಲು ಸಹಾಯ ಮಾಡುತ್ತದೆ.

ಎಂಎಸ್ ಧೋನಿ ಈ ಬ್ಯಾಟ್ ಬಳಸಿದ್ದರು
ಎಂಎಸ್ ಧೋನಿ ಈ ಆವೃತ್ತಿಯ ಬ್ಯಾಟ್ ಅನ್ನು ಮೊದಲು ಬಳಸಿದ್ದರು. ಧೋನಿ ಅವರ ಬ್ಯಾಟ್ 1.1 ಕೆಜಿ ಮತ್ತು 1.25 ಕೆಜಿ ನಡುವೆ ತೂಗುತ್ತದೆ. ಧೋನಿ ಸಾಮಾನ್ಯವಾಗಿ ಸ್ವಲ್ಪ ಭಾರವಾದ ಬ್ಯಾಟ್ ಬಳಸುತ್ತಾರೆ. ದೊಡ್ಡ ಹೊಡೆತಗಳನ್ನು ಆಡುವಾಗ ಇದು ಧೋನಿಗೆ ಸಹಾಯ ಮಾಡುತ್ತದೆ. ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಈಗ ಧೋನಿಯ ಬ್ಯಾಟ್‌ನ ಆಕಾರವನ್ನೇ ಬಳಸುತ್ತಿದ್ದಾರೆ. ಇದು ದೊಡ್ಡ ಹೊಡೆತಗಳನ್ನು ಆಡಲು ಸಹಾಯ ನೀಡುತ್ತದೆ. ಆದರೆ ಧೋನಿ ಬ್ಯಾಟ್‌ನ ಈ ತಂತ್ರವನ್ನು ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಧ್ಯವೇ ಎಂಬುದು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications