T20 ವಿಶ್ವಕಪ್: ಭಾರತ vs ದಕ್ಷಿಣ ಆಫ್ರಿಕಾ ಪ್ರಿವ್ಯೂ, ಹೆಡ್ ಟು ಹೆಡ್ ರೆಕಾರ್ಡ್, ಪಿಚ್ ರಿಪೋರ್ಟ್, ಪ್ಲೇಯಿಂಗ್ 11

ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12ನ ಮೊದಲೆರಡು ಪಂದ್ಯಗಳಲ್ಲಿ ಈಗಾಗಲೇ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲು ರೆಡಿಯಾಗಿದೆ. ಮುಂಬರುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದೇ ಆದಲ್ಲಿ, ರೋಹಿತ್ ಪಡೆಯ ಸೆಮಿಫೈನಲ್ ಹಾದಿ ಸುಗಮಗೊಳ್ಳಲಿದೆ.
ಪರ್ತ್‌ನ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಫಲಿತಾಂಶದ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದೆ. ಟೀಂ ಇಂಡಿಯಾ ಪರ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ದಾಖಲಿಸುವ ಮೂಲಕ ಟಾಪ್ ಆರ್ಡರ್ ಜವಾಬ್ದಾರಿ ಪ್ರದರ್ಶಿಸಿದ್ರು. ದ.ಆಫ್ರಿಕಾ ವಿರುದ್ಧ ಅಂತಹದ್ದೇ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.
ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 104ರನ್‌ಗಳ ಗೆಲುವಿನೊಂದಿಗೆ ಮಿಂಚಿರುವ ದ.ಆಫ್ರಿಕಾ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ.

ಪಿಚ್ ರಿಪೋರ್ಟ್
ಪರ್ತ್ ಸ್ಟೇಡಿಯಂನಲ್ಲಿ ನಾವು ಹೆಚ್ಚಾಗಿ ಬೌನ್ಸ್ ಹಾಗೂ ಸೀಮ್ ಚಲನೆಯನ್ನು ಕಾಣಬಹುದಾಗಿದೆ. ಬೌಲರ್‌ಗಳಿಗೆ ಸ್ವರ್ಗವಾಗಿರುವ ಈ ಪಿಚ್‌ನಲ್ಲಿ ಬ್ಯಾಟರ್‌ಗಳು ಕಠಿಣ ಪರೀಕ್ಷೆಗೆ ಒಳಗಾಗಲಿದ್ದಾರೆ. ಆದ್ರೆ ಒಮ್ಮೆ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಸೆಟ್ ಆದ ಕೂಡಲೇ ರನ್ ಕಲೆಹಾಕಲು ಸಾಧ್ಯವಿದೆ.
ಸಂಜೆಯ ವೇಳೆಯಲ್ಲಿ ಇಬ್ಬನಿ ಅಂಶವು ಪರಿಣಾಮ ಬೀರುತ್ತದೆ. ಹೀಗಾಗಿ ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಮಾಡಲು ಬಯಸುತ್ತಾನೆ.
ನಾನು ಸಾರ್ವಕಾಲಿಕ ಶ್ರೇಷ್ಟನಲ್ಲ ಎಂದ ವಿರಾಟ್ ಕೊಹ್ಲಿ: ಟ್ವಿಟ್ಟರ್‌ನಲ್ಲಿ ಫ್ಯಾನ್ಸ್ ಪ್ರತಿಕ್ರಿಯೆ

ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11
ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡು ಪಂದ್ಯ ಜಯಿಸಿ 4 ಅಂಕ ಕಲೆಹಾಕಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಹೆಚ್ಚು ಬದಲಾವಣೆ ಮಾಡಲು ಬಯಸುವುದಿಲ್ಲ.
ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ದಕ್ಷಿಣ ಆಫ್ರಿಕಾ ತಂಡವು ಆಡಿರುವ 2 ಪಂದ್ಯಗಳಿಂದ 3 ಪಾಯಿಂಟ್ಸ್ ಕಲೆಹಾಕಿದ್ದು, ಭರ್ಜರಿ ರನ್ ರೇಟ್ +5.200 ಹೊಂದಿದ್ದು ಎಲ್ಲಾ ತಂಡಗಳಿಗಿಂತ ಹೆಚ್ಚಿನ್ ನೆಟ್ ರನ್‌ರೇಟ್ ಹೊಂದಿದೆ.
ಹರಿಣಗಳ ತಂಡದಲ್ಲಿ ನಾಯಕನೇ ಫ್ಲಾಪ್ ಆಗಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಹೆಚ್ಚು ಬದಲಾವಣೆ ಇರದು.
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಎರ್ನಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ

ಹೆಡ್ ಟು ಹೆಡ್ ರೆಕಾರ್ಡ್
ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಪ್ರಾರಂಭಗೊಳ್ಳಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯ ಇತಿಹಾಸವನ್ನು ತೆಗೆದು ನೋಡಿದ್ರೆ, ಭಾರತವೇ ಮೇಲುಗೈ ಸಾಧಿಸಿದೆ. ಅದ್ರಲ್ಲೂ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡವು ಭಾರತದ ಪ್ರವಾಸ ಕೈಗೊಂಡಿತ್ತು. ಈ ವೇಳೆಯಲ್ಲಿ ಟಿ20 ಸರಣಿ ಜೊತೆಗೆ ಏಕದಿನ ಸರಣಿಯನ್ನು ಸೋತು ತವರಿಗೆ ಬರಿಗೈನಲ್ಲಿ ವಾಪಸ್ಸಾಗಿತ್ತು.
ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 23 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 13 ಪಂದ್ಯವನ್ನ ಜಯಸಿದ್ರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳನ್ನ ಗೆದ್ದು ಬೀಗಿತು. 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications