
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ 10ನೇ ಪಂದ್ಯದ ಗ್ರೂಪ್ A ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಯುಎಇ 7 ರನ್‌ಗಳಿಂದ ಗೆಲ್ಲುವ ಮೂಲಕ ವಿಶ್ವಕಪ್ ಅಭಿಯಾನ ಕೊನೆಗೊಳಿಸಿದೆ. ಮತ್ತೊಂದೆಡೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಪಂದ್ಯ ಬಿಟ್ಟುಕೊಟ್ಟ ನಮೀಬಿಯಾ ವಿಶ್ವಕಪ್ ಸೂಪರ್ 12 ಹಂತವನ್ನ ತಲುಪಲು ವಿಫಲಗೊಂಡಿದೆ.
ಗೀಲಾಂಗ್ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗ್ರೂ A ನಲ್ಲಿ ನಮೀಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಯುಎಇ ಬ್ಯಾಟಿಂಗ್ ಆಯ್ದುಕೊಂಡಿದ್ದು, ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿತು.
ಉತ್ತಮವಾಗೇ ಬ್ಯಾಟಿಂಗ್ ಮಾಡುತ್ತಿದ್ದ ಯುಎಇ ಎದುರಾಳಿ ಬೌಲಿಂಗ್ ದಾಳಿಗೆ ವೇಗವಾಗಿ ರನ್ ಕಲೆಹಾಕಲು ಎಡವಿತು. ವಿಕೆಟ್ ಕೀಪರ್ ಬ್ಯಾಟರ್ ವಿ. ಅರವಿಂದ್ 32 ಎಸೆತಗಳಲ್ಲಿ 21 ರನ್ ಕಲೆಹಾಕುವ ಮೂಲಕ ಭಾರೀ ಕಡಿಮೆ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಕೂಡ ಯುಎಗೆ ಕೊಂಚ ಹಿನ್ನಡೆಯಾಯಿ. ಈ ಬ್ಯಾಟರ್ ಔಟಾದ ಬಳಿಕ ಎರಡನೇ ವಿಕೆಟ್‌ಗೆ ಮೊಹಮ್ಮದ್ ವಾಸಿಂ ಮತ್ತು ಸಿ ರಿಜ್ವಾನ್ ಜೊತೆಯಾದ್ರು.
ಮೊಹಮ್ಮದ್ ವಾಸಿಂ 41 ಎಸೆತಗಳಲ್ಲಿ 50 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಧಾರವಾದ್ರು. ಇವರ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿದ್ದವು. ಇವ್ರ ಇನ್ನಿಂಗ್ಸ್ ಜೊತೆಗೆ ರಿಜ್ವಾನ್ 29 ಎಸೆತಗಳಲ್ಲಿ 43ರನ್ ಕಲೆಹಾಕುವ ಮೂಲಕ ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ್ರು. ಅಲಿಶಾನ್ ಶರಫು 4ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಬೇಸಿಲ್ ಹಮೀದ್ 14 ಎಸೆತಗಳಲ್ಲಿ 25ರನ್ ಕಲೆಹಾಕುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದ್ರು
15 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 97 ರನ್ ಕಲೆಹಾಕಿದ್ದ ಯುಎಇ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿದೆ. ನಮೀಬಿಯಾ ಗೆಲುವಿಗೆ 149ರನ್ ಗುರಿ ನೀಡಿದೆ.
ಆದ್ರೆ ಈ ಗುರಿ ಬೆನ್ನತ್ತಿದ ನಮೀಬಿಯಾ ಮೊದಲ 5 ಓವರ್‌ನಲ್ಲೇ 3 ವಿಕೆಟ್ ಕಳೆದುಕೊಂಡಿತು. ಎಲ್ಲಿಯೂ ಚೇತರಿಸಿಕೊಳ್ಳದೆ ಸತತವಾಗಿ ವಿಕೆಟ್ ಕಳೆದುಕೊಂಡಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು. 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ ಕಲೆಹಾಕಿದ್ದ ಯುಎಇ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ್ದು ಡೇವಿಡ್ ವೀಸ್.
36 ಎಸೆತಗಳಲ್ಲಿ 55 ರನ್ ಸಿಡಿಸಿದ ಡೇವಿಡ್ 3 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದ್ರು. ಆದ್ರೆ ತಂಡವನ್ನು ಗೆಲುವಿನ ದಡ ತಲುಪಿಸಲು ಇವರಿಗೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ಸಾಥ್ ನೀಡದ ಪರಿಣಾಮ ನಮೀಬಿಯಾ 7ರನ್‌ಗಳಿಸಿ ಸೋಲನ್ನ ಒಪ್ಪಿಕೊಂಡಿತು.
ಈ ಮೂಲಕ 149ರನ್‌ಗಳ ಗುರಿ ಬೆನ್ನತ್ತಿದ ನಮೀಬಿಯಾ ಗುರಿ ತಲುಪಲಾಗದೆ ಸೋಲುವ ಮೂಲಕ ಟಿ20 ವಿಶ್ವಕಪ್ ಸೂಪರ್ 12 ತಲುಪಲು ವಿಫಲಗೊಂಡಿದೆ. ಗ್ರೂಪ್ ಎನಿಮದ ಸೂಪರ್ 12 ಹಂತಕ್ಕೆ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಲುಪಿದೆ. ಒಂದು ವೇಳೆ ನಮೀಬಿಯಾ ಈ ಪಂದ್ಯ ಜಯಿಸಿದ್ರೆ, ನೆದರ್ಲೆಂಡ್ಸ್ ಹಿಂದಿಕ್ಕಿ ಮುಂದಿನ ಹಂತವನ್ನ ತಲುಪುತ್ತಿದ್ದರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ನಮೀಬಿಯಾ:
ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಜಾನ್ ನಿಕೋಲ್ ಲೋಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ಫ್ರಿಲಿಂಕ್, ಜೆಜೆ ಸ್ಮಿಟ್, ಡೇವಿಡ್ ವೈಸ್, ಜೇನ್ ಗ್ರೀನ್ (ವಿಕೆಟ್ ಕೀಪರ್), ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ಬೆಂಚ್: ದಿವಾನ್ ಲಾ ಕಾಕ್, ಪಿಕ್ಕಿ ಯಾ ಫ್ರಾನ್ಸ್, ಲೋಹಾಂಡ್ರೆ ಲೌರೆನ್ಸ್, ತಂಗೇನಿ ಲುಂಗಮೆನಿ, ಕಾರ್ಲ್ ಬಿರ್ಕೆನ್‌ಸ್ಟಾಕ್
ಯುನೈಟೆಡ್ ಅರಬ್ ಎಮಿರೇಟ್ಸ್:
ಮುಹಮ್ಮದ್ ವಸೀಮ್, ವೃತ್ಯ ಅರವಿಂದ್ (ವಿಕೆಟ್ ಕೀಪರ್), ಚುಂಡಂಗಪೊಯಿಲ್ ರಿಜ್ವಾನ್ (ನಾಯಕ), ಅಲಿಶನ್ ಶರಾಫು, ಅಯಾನ್ ಅಫ್ಜಲ್ ಖಾನ್, ಬಾಸಿಲ್ ಹಮೀದ್, ಫಹಾದ್ ನವಾಜ್, ಕಾರ್ತಿಕ್ ಮೆಯ್ಯಪ್ಪನ್, ಅಹ್ಮದ್ ರಜಾ, ಜುನೈದ್ ಸಿದ್ದಿಕ್, ಜಹೂರ್ ಖಾನ್
ಬೆಂಚ್: ಜವಾರ್ ಫರೀದ್, ಸಬೀರ್ ಅಲಿ, ಕಾಶಿಫ್ ದೌದ್, ಚಿರಾಗ್ ಸುನಿ, ಆರ್ಯನ್ ಲಕ್ರ