PAK vs NED: ಅಂತೂ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದ ಪಾಕಿಸ್ತಾನ; ಸೆಮಿಫೈನಲ್ ಆಸೆ ಜೀವಂತ

ಭಾನುವಾರ, ಅಕ್ಟೋಬರ್ 30ರಂದು ನಡೆದ ಟಿ20 ವಿಶ್ವಕಪ್‌ನ ತನ್ನ ಸೂಪರ್ 12, ಗ್ರೂಪ್ 2ರ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಸತತ ಎರಡು ಪಂದ್ಯ ಸೋತ ನಂತರ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ.
ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲ್ಯಾಂಡ್ಸ್ ತಂಡವನ್ನು 6 ವಿಕೆಟ್ ಅಂತರದಿಂದ ಸೋಲಿಸಿದ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ, ಈ ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ಗೆಲುವು ಕಂಡಿದೆ ಮತ್ತು ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲ್ಯಾಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ನಂತರ 92 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಾಕಿಸ್ತಾನ, ಮೊಹಮ್ಮದ್ ರಿಜ್ವಾನ್ ಅವರ 49 ರನ್ ಸಹಾಯದಿಂದ 13.5 ಓವರ್‌ಗಳಲ್ಲಿ 4 ನಷ್ಟಕ್ಕೆ 95 ರನ್ ಗಳಿಸಿ, ಗೆಲುವಿನ ನಗೆ ಬೀರಿತು.

ನೆದರ್ಲ್ಯಾಂಡ್ಸ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ
ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪವರ್‌ಪ್ಲೇಯಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ನೆದರ್ಲ್ಯಾಂಡ್ಸ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಶಾಹೀನ್ ಶಾ ಆಫ್ರಿದಿ ಅವರು ಮೂರನೇ ಓವರ್‌ನಲ್ಲಿ ಆರಂಭಿಕ ಆಟಗಾರ ಸ್ಟೀಫನ್ ಮೈಬರ್ಗ್ ಅವರನ್ನು ಔಟ್ ಮಾಡಿದರು. ನಂತರ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಬಾಸ್ ಡಿ ಲೀಡೆ ಅವರ ತಲೆಗೆ ಪೆಟ್ಟು ಬಿದ್ದು ನಿವೃತ್ತಿಯಾಗಿ ಮೈದಾನದಿಂದ ಹೊರನಡೆದರು. ಸ್ಪಿನ್ನರ್ ಶಾದಾಬ್ ಖಾನ್ ನಂತರ ಸತತವಾಗಿ ಮ್ಯಾಕ್ಸ್ ಒ'ಡೌಡ್ ಮತ್ತು ಟಾಮ್ ಕೂಪರ್ ಅವರ ವಿಕೆಟ್ ಪಡೆದು ನೆದರ್ಲ್ಯಾಂಡ್ಸ್ ತಂಡದ ಬ್ಯಾಟಿಂಗ್ ಶಕ್ತಿ ಮುರಿದರು.

ನೆದರ್ಲ್ಯಾಂಡ್ಸ್ 20 ಓವರ್‌ಗಳ ನಂತರ ಬೋರ್ಡ್‌ನಲ್ಲಿ 91/9
ಕಾಲಿನ್ ಅಕರ್‌ಮನ್ ಉತ್ತಮವಾಗಿ ಆಡುತ್ತಿದ್ದರು, ಆದರೆ ಅವರ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅವರ ವಿಕೆಟ್ ಪಡೆಯುವ ಮೂಲಕ ಶಾದಾಬ್ ಖಾನ್ ಪಂದ್ಯದಲ್ಲಿ ತಮ್ಮ ಮೂರನೇ ವಿಕೆಟ್ ಪಡೆದರು. ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ 20 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಹಿಂತಿರುಗಿದರು.
ಮೊಹಮ್ಮದ್ ವಾಸಿಂ ಸತತ ಎಸೆತಗಳಲ್ಲಿ ಟಿಮ್ ಪ್ರಿಂಗಲ್ ಮತ್ತು ಫ್ರೆಡ್ ಕ್ಲಾಸೆನ್ ಅವರ ವಿಕೆಟ್ ಪಡೆದರು. ಇದಕ್ಕೂ ಮೊದಲು ಹ್ಯಾರಿಸ್ ರೌಫ್ ರೋಲೋಫ್ ವ್ಯಾನ್ ಡೆರ್ ಮೆರ್ವೆಯ ವಿಕೆಟ್ ಪಡೆದರು. ಕೊನೆಗೆ ನೆದರ್ಲ್ಯಾಂಡ್ಸ್ 20 ಓವರ್‌ಗಳ ನಂತರ ಬೋರ್ಡ್‌ನಲ್ಲಿ 91/9 ನೊಂದಿಗೆ ಇನಿಂಗ್ಸ್ ಅನ್ನು ಕೊನೆಗೊಳಿಸಿತು.

ಬಾಬರ್ ಅಜಂ ಮತ್ತೆ ಅವರ ಕೆಟ್ಟ ಫಾರ್ಮ್ ಮುಂದುವರೆಸಿದರು
ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತೆ ಅವರ ಕೆಟ್ಟ ಫಾರ್ಮ್ ಮುಂದುವರೆಸಿದರು. 5 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ ನಂತರ ಬಾಬರ್ ಅಜಂ ಅವರು ವ್ಯಾನ್ ಡೆರ್ ಮೆರ್ವೆ ಅವರಿಂದ ರನೌಟ್ ಆದರು. ಹೈದರ್ ಅಲಿ ಬದಲಿಯಾಗಿ ಬಂದ ಫಖರ್ ಜಮಾನ್ ಉತ್ತಮ ಪ್ರದರ್ಶನ ತೋರಿದರೂ 16 ಎಸೆತಗಳಲ್ಲಿ ಮೂರು ಬೌಂಡರಿ ಸೇರಿದಂತೆ 20 ರನ್ ಗಳಿಸಿ ಬ್ರಾಂಡನ್ ಗ್ಲೋವರ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮೊಹಮ್ಮದ್ ರಿಜ್ವಾನ್ ನೆದರ್ಲ್ಯಾಂಡ್ಸ್ ಬೌಲಿಂಗ್ ದಾಳಿಯ ವಿರುದ್ಧ ಆರಾಮದಾಯಕವಾಗಿ ಆಡುತ್ತಿದ್ದರು. 38 ಎಸೆತಗಳಲ್ಲಿ 49 ರನ್ ಗಳಿಸಿ ಪಾಕಿಸ್ತಾನವನ್ನು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ 6 ವಿಕೆಟ್‌ಗಳ ಜಯಕ್ಕೆ ಕಾರಣವಾದರು.

ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಆಡುವ 11ರ ಬಳಗ
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಂ (ನಾಯಕ), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಖರ್ ಜಮಾನ್ (ಹೈದರ್ ಅಲಿ ಬದಲಾಗಿ), ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ವಾಸಿಮ್.
ನೆದರ್ಲ್ಯಾಂಡ್ಸ್: ಸ್ಟೀಫನ್ ಮೈಬರ್ಗ್ (ವಿಕ್ರಮಜಿತ್ ಸಿಂಗ್ ಬದಲಾಗಿ), ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ರೋಲೋಫ್ ವ್ಯಾನ್ ಡೆರ್ ಮೆರ್ವೆ (ಲೋಗನ್ ವ್ಯಾನ್ ಬದಲಾಗಿ), ಬ್ರಾಂಡನ್ ಗ್ಲೋವರ್ (ಶರೀಜ್ ಅಹ್ಮದ್ ಬದಲಾಗಿ), ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications