For Quick Alerts
ALLOW NOTIFICATIONS  
For Daily Alerts
 

IND vs PAK: ಕೊನೆಯವರೆಗೂ ನಿಂತು ಭಾರತ ಗೆಲ್ಲಿಸಿದ ಕೊಹ್ಲಿಯನ್ನು ಗುಣಗಾನ ಮಾಡಿದ ಪಾಕ್ ಲೆಜೆಂಡ್ಸ್

T20 World Cup 2022: Pakistan Legend Cricketers Praises Virat Kohli For India Win Against Pakistan

ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡರು. ಮಾತ್ರವಲ್ಲದೇ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಗಳಿಸಲು ಭಾರತ ತಂಡಕ್ಕೆ ನೆರವಾದರು.

ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ಟೂರ್ನಿಯನ್ನು ಅದ್ಧೂರಿಯಾಗಿ ಶುಭಾರಂಭ ಮಾಡಿದೆ. ಭಾರತದ ಗೆಲುವಿಗೆ ವೀರೋಚಿತ ಗೆಲುವಿಗೆ ಸಹಾಯ ಮಾಡಿದ ನಂತರ ಪಾಕಿಸ್ತಾನದ ಹಲವು ಮಾಜಿ ಕ್ರಿಕೆಟಿಗರು ಭಾರತದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ.

ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್ ಗಳಿಸಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ನಿರ್ಣಾಯಕ ಗೆಲುವಿಗೆ ಮುನ್ನುಡಿ ಬರೆದರು. ಪಾಕಿಸ್ತಾನದ ವಿರುದ್ಧ ವೀರೋಚಿತ ಗೆಲುವಿನ ನಂತರ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನ ಮಾಜಿ ಆಟಗಾರರೇ ಅಭಿನಂದಿಸಿದರು.

ನಾನು ನೋಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು

ನಾನು ನೋಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು

ಎ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್, ಕೊಹ್ಲಿಯನ್ನು "ಅನ್ಯಗ್ರಹ ಜೀವಿ' ಎಂದು ಕರೆದರು ಮತ್ತು ಅವರು ನೋಡಿದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಹೇಳಿದರು.

"ಏಲಿಯನ್‌ಗಳು ನಮ್ಮ ನಡುವೆ ನಡೆಯುತ್ತಾರೆ, ವಿರಾಟ್ ಕೊಹ್ಲಿ ಇತ್ತೀಚಿನ ಅಥವಾ ಆಧುನಿಕ ಶ್ರೇಷ್ಠರಲ್ಲಿ ನಾನು ನೋಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ಕಳೆದ 15 ವರ್ಷಗಳಿಂದ ಸ್ಕೋರ್ ಮಾಡುತ್ತಿದ್ದಾರೆ ಮತ್ತು ಚೇಸಿಂಗ್ ಮಾಡುವಾಗ ಅವರು ಅತ್ಯುತ್ತಮ ಸರಾಸರಿ ಹೊಂದಿದ್ದಾರೆ," ಎಂದು ವಾಸಿಂ ಅಕ್ರಮ್ ಶ್ಲಾಘಿಸಿದರು.

ವಿಶೇಷ ಆಟಗಾರ ವಿರಾಟ್ ಕೊಹ್ಲಿ ಅವರಿಂದ ವಿಶೇಷ ಇನ್ನಿಂಗ್ಸ್

ವಿಶೇಷ ಆಟಗಾರ ವಿರಾಟ್ ಕೊಹ್ಲಿ ಅವರಿಂದ ವಿಶೇಷ ಇನ್ನಿಂಗ್ಸ್

ಪಾಕಿಸ್ತಾನದ ಮಾಜಿ ಬ್ಯಾಟರ್ ಮೊಹಮ್ಮದ್ ಹಫೀಜ್ ಕೂಡ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಟ್ವಿಟ್ಟರ್‌ನಲ್ಲಿ ಹೊಗಳಿದ್ದು, ಇದು ವಿರಾಟ್ ಕೊಹ್ಲಿಯ ವಿಶೇಷ ಇನ್ನಿಂಗ್ಸ್, ಪಂದ್ಯವನ್ನು ಪಾಕಿಸ್ತಾನದಿಂದ ದೂರವಿಟ್ಟಿತು ಎಂದು ಹೇಳಿದರು.

"ಪಾಕಿಸ್ತಾನ ತಂಡ ಪರವಾಗಿಲ್ಲ, ನೀವು ಅತ್ಯುತ್ತಮವಾಗಿ ಪ್ರಯತ್ನಿಸಿದ್ದೀರಿ. ಆದರೆ ಇದು ವಿಶೇಷ ಆಟಗಾರ ವಿರಾಟ್ ಕೊಹ್ಲಿ ಅವರಿಂದ ವಿಶೇಷ ಇನ್ನಿಂಗ್ಸ್. ಭಾರತ ತಂಡಕ್ಕೆ ಅಭಿನಂದನೆಗಳು," ಎಂದು ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿದ್ದಾರೆ.

ಕೊಹ್ಲಿಯನ್ನು ರನ್ ಮೃಗ ಎಂದು ಕರೆದ ಶೋಯೆಬ್ ಮಲಿಕ್

ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಕೂಡ ಟ್ವಿಟರ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಗೆಲುವಿಗೆ ಅಭಿನಂದನೆಗಳು ಮತ್ತು ಕೊಹ್ಲಿಯನ್ನು ರನ್ ಮೃಗ ಎಂದು ಕರೆದಿದ್ದಾರೆ.

"ನಾವು ಎಂತಹ ಕ್ರಿಕೆಟ್ ಆಟಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಈ ವ್ಯಕ್ತಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಮೃಗ!! ಬಿಳಿ ಬಾಲ್ ಕ್ರಿಕೆಟ್‌ನಲ್ಲಿ ನೀವು ಅವನ ಕ್ಲಾಸ್ ಆಟವನ್ನು ವಿಶ್ವದ ಯಾವುದೇ ಆಟಗಾರನಿಗೆ ಹೋಲಿಸಲಾಗುವುದಿಲ್ಲ. ಅವನು ಪಂದ್ಯದ ದಿಕ್ಕು ಬದಲಿಸುವ ಆಟಗಾರ. ಕೊಹ್ಲಿ ಸ್ಟ್ರೈಕ್ ತಿರುಗಿಸುತ್ತಾನೆ, ಅಲ್ಲದೆ ಸಿಕ್ಸರ್‌ಗಳನ್ನು ಬಾರಿಸಬಲ್ಲರು ಮತ್ತು ಆಟವನ್ನು ಹೇಗೆ ಮುಗಿಸಬೇಕು ಎಂದು ಅವರಿಗೆ ತಿಳಿದಿದೆ," ಎಂದು ಶೋಯೆಬ್ ಮಲಿಕ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಗೆ ವಿಶೇಷ ಹೊಗಳಿಕೆ ಕಾಯ್ದಿರಿಸಿದ ವಹಾಬ್ ರಿಯಾಜ್

ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಹಾಬ್ ರಿಯಾಜ್ ಅವರು ಟ್ವಿಟ್ಟರ್‌ನಲ್ಲಿ ಪಂದ್ಯದ ಚಮತ್ಕಾರಕ್ಕಾಗಿ ಉಭಯ ತಂಡಗಳನ್ನು ಅಭಿನಂದಿಸಿದ್ದಾರೆ, ಆದರೆ ವಿರಾಟ್ ಕೊಹ್ಲಿಗೆ ವಿಶೇಷ ಹೊಗಳಿಕೆಯನ್ನು ಕಾಯ್ದಿರಿಸಿದ್ದಾರೆ.

"ಗೆಲುವು ಅಥವಾ ಸೋಲು ಆಟದ ಭಾಗವಾಗಿದೆ. ಎರಡೂ ತಂಡಗಳು ಚೆನ್ನಾಗಿ ಆಡಿದವು. ತೀವ್ರವಾದ ಪಂದ್ಯ ಮತ್ತು ಉತ್ತಮ ತಂಡವು ಗೆದ್ದಿದೆ. ಆದರೆ ವಿರಾಟ್ ಕೊಹ್ಲಿ Naam hi kaaafii haa," ಎಂದು ರಿಯಾಜ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನವನ್ನು ಸೋಲಿಸಿದ ನಂತರ, ಮೆನ್-ಇನ್-ಬ್ಲ್ಯೂ ತಂಡ ತಮ್ಮ ಸೂಪರ್-12 ಗುಂಪಿನಲ್ಲಿ ಅಕ್ಟೋಬರ್ 27ರಂದು ಸಿಡ್ನಿಯಲ್ಲಿ ಎದುರಿಸುವ ನೆದರ್ಲ್ಯಾಂಡ್ಸ್ ತಂಡದ ಕಡೆಗೆ ತಮ್ಮ ಗಮನವನ್ನು ಹರಿಸಲಿದ್ದಾರೆ.

Story first published: Monday, October 24, 2022, 12:25 [IST]
Other articles published on Oct 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+