
ಭಾನುವಾರ, ನವೆಂಬರ್ 6ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಸೂಪರ್ 12ರ ನಿರ್ಣಾಯಕ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಇಲ್ಲಿ ಗೆದ್ದ ತಂಡ ಸೆಮಿಫೈನಲ್ ತಲುಪಲಿದೆ.
ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದ್ದು, ಎದುರಾಳಿ ಪಾಕಿಸ್ತಾನಕ್ಕೆ 128 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ 22 ರನ್ ನೀಡಿ 4 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟಿಂಗ್ ಬಲವನ್ನು ಮುರಿದರು. ನಜ್ಮುಲ್ ಹಸನ್ ಶಾಂಟೊ ಅವರು ಅರ್ಧಶತಕ ದಾಖಲಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದು, ಅವರ ಸಹಾಯದಿಂದ 20 ಓವರ್‌ಗಳಲ್ಲಿ 127/8 ಕ್ಕೆ ನಿರ್ಬಂಧವಾಯಿತು.
ಶಕಿಬ್ ಅಲ್ ಹಸನ್ ಔಟ್ ಸಾಕಷ್ಟು ವಿವಾದಾತ್ಮಕದಿಂದ ತುಂಬಿತ್ತು, ಅವರು ಎಲ್‌ಬಿಡಬ್ಲ್ಯು ಔಟ್ ಮರುವೀಕ್ಷಣೆಯಲ್ಲಿ ಗೊಂದಲಮಯವಾಗಿತ್ತು ಮತ್ತು ಮೂರನೇ ಅಂಪೈರ್ ತೀರ್ಪಿನಿಂದ ಅಸಮಾಧಾನಗೊಂಡು ಹೊರನಡೆದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಪ್ರಸ್ತುತ 4 ಅಂಕಗಳನ್ನು ಹೊಂದಿದ್ದು, ಇಲ್ಲಿ ಗೆದ್ದ ತಂಡವನ್ನು 6 ಅಂಕಗಳಿಗೆ ಕೊಂಡೊಯ್ಯುತ್ತದೆ. ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಆಘಾತಕಾರಿ ಸೋಲನ್ನು ಅನುಭವಿಸಿದ ಕಾರಣ, ಈ ತಂಡಗಳಿಗೆ ಸೆಮಿಫೈನಲ್‌ಗೆ ಹೋಗಲು ಈಗ ಒಂದು ಗೆಲುವು ಸಾಕಾಗಿದೆ.
ಒಂದು ವೇಳೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ಉತ್ತಮ ನಿವ್ವಳ ರನ್ ರೇಟ್ ಆಧಾರದ ಮೇಲೆ ಮುನ್ನಡೆಯಲ್ಲಿರಲಿದೆ. ಆದರೆ ಉಭಯ ತಂಡಗಳಲ್ಲಿ ಯಾವುದಾದರೂ ಒಂದು ತಂಡ ಗೆದ್ದರೆ, ಆ ತಂಡ ಸೆಮಿಫೈನಲ್‌ನಲ್ಲಿ ಭಾರತದ ಜೊತೆ ಸೆಮಿಫೈನಲ್ ಪ್ರವೇಶಿಸಲಿದೆ.
ಪಾಕಿಸ್ತಾನ vs ಬಾಂಗ್ಲಾದೇಶ ಆಡುವ 11ರ ಬಳಗ
ಪಾಕಿಸ್ತಾನ ಆಡುವ 11ರ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ.
ಬಾಂಗ್ಲಾದೇಶ ಆಡುವ 11ರ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್.