ಸರಿಯಾಗಿ ಧ್ವಜ ಹಿಡಿಯೋಕೆ ಬರಲ್ಲ, ಕಾಶ್ಮೀರ ಬೇಕಂತೆ: ಪಾಕ್ ಅಭಿಮಾನಿ ಕಾಲೆಳೆದ ಟೀಮ್ ಇಂಡಿಯಾ ಅಭಿಮಾನಿಗಳು

ಮೆಲರ್ಬ್‌ನ ಎಂಸಿಜಿ ಮೈದಾನದಲ್ಲಿ ಭಾರತ-ಪಾಕಿಸ್ತಾನ ರಣರೋಚಕ ಕಾದಾಟವನ್ನು ಕ್ರಿಕೆಟ್ ಲೋಕ ಕಣ್ತುಂಬಿಕೊಂಡಿದೆ. ಟೀಂ ಇಂಡಿಯಾ ಪಾಕ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯವನ್ನು ಬರೋಬ್ಬರಿ 90 ಸಾವಿರಕ್ಕೂ ಅಧಿಕ ಜನರು ಸ್ಟೇಡಿಯಂನಲ್ಲಿ ಲೈವ್ ನೋಡುವ ಮೂಲಕ ಕಣ್ತುಂಬಿಕೊಂಡರು.
ಸ್ಟೇಡಿಯಂನಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ರೋಚಕ ಪಂದ್ಯಕ್ಕೆ ಸಾಕ್ಷಿಯಾದ್ರು. ಇನ್ನು ಡಿಸ್ನಿ+ಹಾಟ್‌ಸ್ಟಾರ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ನಲ್ಲಿ ದಾಖಲೆಯ 18 ಮಿಲಿಯನ್ ವೀಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ.
ಎಂಸಿಜಿ ಮೈದಾನದಲ್ಲಿ ಪಂದ್ಯ ವೀಕ್ಷಣೆಯ ವೇಳೆಯಲ್ಲಿ ಪಾಕಿಸ್ತಾನ ಅಭಿಮಾನಿಯೊಬ್ಬ ಪಾಕ್ ರಾಷ್ಟ್ರಧ್ವಜವನ್ನ ಉಲ್ಟಾ ಹಿಡಿದುಕೊಂಡಿರುವ ವೇಳೆಯಲ್ಲಿ ಭಾರತೀಯ ಅಭಿಮಾನಿಗಳು ಸರಿಯಾಗಿ ಹಿಡಿದುಕೊಳ್ಳುವಂತೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟೀಂ ಇಂಡಿಯಾ ಪಾಕಿಸ್ತಾನ ನೀಡಿದ್ದ 160ರನ್ ಟಾರ್ಗೆಟ್ ಬೆನ್ನತ್ತುವ ವೇಳೆಯಲ್ಲಿ ಪಾಕ್ ಅಭಿಮಾನಿಯು ತನ್ನ ದೇಶದ ಧ್ವಜವನ್ನು ಹಾರಿಸುತ್ತಾ ತನ್ನ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದರು. ಈ ವೇಳೆಯಲ್ಲಿ ಹತ್ತಿರದಲ್ಲೇ ಕುಳಿತಿದ್ದ ಟೀಂ ಇಂಡಿಯಾ ಅಭಿಮಾನಿಗಳು ಆತ ಉಲ್ಟಾ ಹಿಡಿದಿದ್ದ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳವಂತೆ ಹೇಳಿದ್ದಾರೆ. ಆರಂಭದಲ್ಲಿ ಆತನಿಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯಲಿಲ್ಲ. ಆದ್ರೆ ನಂತರದಲ್ಲಿ ತಾನು ರಾಷ್ಟ್ರಧ್ವಜವನ್ನು ಉಲ್ಟಾ ಹಿಡಿದಿದ್ದೇನೆ ಎಂದು ಅರಿವಾಗಿದೆ.
ಈ ಘಟನೆ ವೇಳೆಯಲ್ಲಿ ಪಾಕ್ ಅಭಿಮಾನಿಯ ಕಾಳೆದಿರುವ ಟೀಂ ಇಂಡಿಯಾ ಅಭಿಮಾನಿಗಳು 'ಸರಿಯಾಗಿ ಧ್ವಜವನ್ನೇ ಹಿಡಿಯೋಕೆ ಬರಲ್ಲ, ಇವರಿಗೆ ಕಾಶ್ಮೀರ ಬೇಕಂತೆ' ಎಂದು ಕಾಲೆಳೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವೀಡಿಯೋ ಶೇರ್ ಆಗಿದೆ.
ಪಾಕ್ ನೀಡಿದ್ದ 160ರನ್‌ಗಳ ಗುರಿ ಬೆನ್ನತ್ತಿದ ಭಾರತ ಅಂತಿಮ ಎಸೆತದಲ್ಲಿ ಗೆಲುವಿನ ಗೆರೆ ದಾಟುವ ಮೂಲಕ ಅದ್ಭುತ ಗೆಲುವನ್ನ ಸಂಪಾದಿಸಿತು. ಅದ್ರಲ್ಲೂ ವಿರಾಟ್ ಕೊಹ್ಲಿ ಆಟ ನೋಡಿದ ಅಭಿಮಾನಿಗಳು ಕಣ್ತುಂಬಿಕೊಂಡರು. ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದಾದ ಕೊಹ್ಲಿ ಆಟದ ಸೊಬಗನ್ನು ವರ್ಣಿಸಲು ಪದಗಳೇ ಕಡಿಮೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.
53 ಎಸೆತಗಳಲ್ಲಿ ಅಜೇಯ 82ರನ್ ಕಲೆಹಾಕಿದ ವಿರಾಟ್ ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಶತಕದ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಹಾರ್ದಿಕ್ ಪಾಂಡ್ಯ ಕೂಡ ಭಾರತದ ಗೆಲುವಿನಲ್ಲಿ 40ರನ್‌ಗಳ ಮಹತ್ವದ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ 3 ವಿಕೆಟ್ ಸಂಪಾದಿಸಿದರು. ಬ್ಯಾಟಿಂಗ್‌ನಲ್ಲೂ ನೆರವಾದ ಹಾರ್ದಿಕ್ ಆಟವನ್ನು ಕ್ರಿಕೆಟ್ ದಿಗ್ಗಜರು ಮೆಚ್ಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications