
ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 42 ರನ್‌ಗಳ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸಿಸ್ ತಂಡವು 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತ್ತು. ಆದ್ರೆ ಈ ಗುರಿ ಬೆನ್ನತ್ತಿದ ಐರ್ಲೆಂಡ್ 137 ರನ್‌ಗಳಿಗೆ ಸರ್ವಪತನಗೊಂಡಿದೆ.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದ್ರೆ, ಮಾರ್ಕಸ್ ಸ್ಟೋಯ್ನಿಸ್ 1 ವಿಕೆಟ್ ಪಡೆದರು. ಇನ್ನು ಐರ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ಲೊರ್ಕನ್ ಟಕರ್ 48 ಎಸೆತಗಳಲ್ಲಿ ಅಜೇಯ 71 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪರ ನಾಯಕ ಆ್ಯರೋನ್ ಫಿಂಚ್ 63, ಮಿಚೆಲ್ ಮಾರ್ಷ್ 28, ಮಾರ್ಕಸ್ ಸ್ಟೋಯ್ನಿಸ್ 35ರನ್‌ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದ್ರು. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ 3 ವಿಕೆಟ್ ಉರುಳಿಸಿದರು.
42 ರನ್‌ಗಳ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್ ಆಸೆ ಜೀವಂತವಾಗಿದೆ. ಗ್ರೂಪ್ 1 ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೆ ನೆಟ್ ರನ್‌ರೇಟ್ ಕೂಡ ಸುಧಾರಿಸಿದೆ.
ಆಸ್ಟ್ರೇಲಿಯಾ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು, 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್ ಹೊಂದಿದ್ದು, ನೆಟ್ ರನ್‌ರೇಟ್ -0.304 ನಷ್ಟಿದೆ. ಇನ್ನು ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಮತ್ತು 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್ ರನ್‌ರೇಟ್ +3.850 ರಷ್ಟಿದೆ.
ಟಾಪ್ 2 ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಬಳಿಕ 3ನೇ ಸ್ಥಾನದಲ್ಲಿರುವ ಇಂಗ್ಲೆಂಡ್ 3 ಪಂದ್ಯಗಳಿಂದ ತಲಾ ಒಂದು ಸೋಲು ಗೆಲುವಿನ ಜೊತೆಗೆ ಫಲಿತಾಂಶವಿಲ್ಲ ಒಂದು ಪಂದ್ಯ ಸೇರಿ 3 ಪಾಯಿಂಟ್ಸ್ ಹೊಂದಿದೆ. ಆಂಗ್ಲರ ನೆಟ್ ರನ್‌ರೇಟ್ ಉತ್ತಮವಾಗಿದ್ದು +0.239 ಆಗಿದೆ.
ಕೊನೆಯ ಮೂರು ಸ್ಥಾನದಲ್ಲಿ ಐರ್ಲೆಂಡ್ 4 ಪಂದ್ಯಗಳಿಂದ 3 ಪಾಯಿಂಟ್ಸ್, ಅಫ್ಘಾನಿಸ್ತಾನ 3 ಪಂದ್ಯಗಳಿಂದ 2 ಪಾಯಿಂಟ್ಸ್, ಶ್ರೀಲಂಕಾ 3 ಪಂದ್ಯಗಳಿಂದ 2 ಪಾಯಿಂಟ್ಸ್ ಕಲೆಹಾಕಿದೆ.
ಗ್ರೂಪ್ 1 ಮತ್ತು 2ರ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇನ್ನು ಗ್ರೂಪ್ 2ರಲ್ಲಿ ಭಾರತ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಅಲಂಕರಿಸಿದ್ದು, 3 ಪಂದ್ಯಗಳಿಂದ 5 ಪಾಯಿಂಟ್ಸ್ (+2.772), ಭಾರತ 3 ಪಂದ್ಯಗಳಿಂದ 4 ಪಾಯಿಂಟ್ಸ್ (+0.844), ಬಾಂಗ್ಲಾದೇಶ 3 ಪಂದ್ಯಗಳಿಂದ 4 ಪಾಯಿಂಟ್ಸ್ (-1.533) ಹೊಂದಿದ್ದು, ಕೊನೆಯ ಮೂರು ಸ್ಥಾನವನ್ನ ಜಿಂಬಾಬ್ವೆ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಅಲಂಕರಿಸಿವೆ.