IND vs PAK ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಕಾಟವೇ?; ಮೆಲ್ಬೋರ್ನ್ ಹವಾಮಾನ ಮುನ್ಸೂಚನೆ ಇಲ್ಲಿದೆ

ಐಸಿಸಿ ಟಿ20 ವಿಶ್ವಕಪ್ 2022 ಪ್ರಾರಂಭವಾಗಿದ್ದು, ಗುಂಪು 1 ಹಂತದ ಪಂದ್ಯಗಳು ನಡೆಯುತ್ತಿವೆ. ಆದರೆ ಎರಡು ಕ್ರಿಕೆಟ್ ರಾಷ್ಟ್ರಗಳ ಅಭಿಮಾನಿಗಳು ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 23ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಆದಾಗ್ಯೂ, ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಕಾದಿದೆ. ಕಳೆದ ಕೆಲವು ದಿನಗಳಿಂದ ಮೆಲ್ಬೋರ್ನ್ ಮತ್ತು ಸುತ್ತಮುತ್ತ ಮಳೆಯಾಗುತ್ತಿದೆ. ಮೆಲ್ಬೋರ್ನ್ ಹವಾಮಾನ ಮುನ್ಸೂಚನೆಯ ಪ್ರಕಾರ, ರಾಜ್ಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆಯಲ್ಲಿ ಮಳೆಯ ಮುನ್ಸೂಚನೆ ಇದೆ. ಪಂದ್ಯವು ಮಳೆಗಾಹುತಿಯಾದರೆ ಆ ಪಂದ್ಯಕ್ಕೆ ಯಾವುದೇ ಕಾಯ್ದಿರಿಸಿದ ದಿನವಿಲ್ಲ ಮತ್ತು ಹೀಗಾಗಿ ಎರಡೂ ತಂಡಗಳು ಪಾಯಿಂಟ್‌ಗಳನ್ನು ಹಂಚಕೊಳ್ಳಬೇಕಾಗುತ್ತದೆ.

ಶೀಘ್ರದಲ್ಲಿ ಟಿಕೆಟ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು
ಈ ಮಧ್ಯೆ, ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪ್ರಮುಖ ಐಸಿಸಿ ಟೂರ್ನಿಗೆ ಹಾಜರಾಗಲು 5,00,000ಕ್ಕೂ ಹೆಚ್ಚು ಅಭಿಮಾನಿಗಳು ಈಗಾಗಲೇ ತಮ್ಮ ಟಿಕೆಟ್ ಅನ್ನು ಕಾಯ್ದಿರಿಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿದೆ.
"ಟೂರ್ನಿಗೆ ಸಮೀಪದರಲ್ಲಿ ಅಧಿಕೃತ ಮರು-ಮಾರಾಟ ವೇದಿಕೆಯನ್ನು ಪ್ರಾರಂಭಿಸಲಾಗುವುದು, ಅಲ್ಲಿ ಅಭಿಮಾನಿಗಳು ಮುಖಬೆಲೆಯಲ್ಲಿ ಟಿಕೆಟ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು," ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 27ರಂದು ಭಾರತ v ಗ್ರೂಪ್ ಎ ರನ್ನರ್-ಅಪ್
82 ವಿವಿಧ ದೇಶಗಳ ಅಭಿಮಾನಿಗಳು 16 ಅಂತಾರಾಷ್ಟ್ರೀಯ ತಂಡಗಳಿಂದ ವಿಶ್ವದ ಅತ್ಯುತ್ತಮ ಆಟಗಾರರನ್ನು ವೀಕ್ಷಿಸಲು ಟಿಕೆಟ್ ಖರೀದಿಸಿದ್ದಾರೆ. 2020ರಲ್ಲಿ ಮಹಿಳಾ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ಐಸಿಸಿ ಈವೆಂಟ್‌ಗಳಲ್ಲಿ ಪೂರ್ಣ ಕ್ರೀಡಾಂಗಣಗಳ ಮರಳುವಿಕೆಯನ್ನು ಗುರುತಿಸಲಾಗಿದೆ. ಇದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಫೈನಲ್‌ಗಾಗಿ 86,174 ಅಭಿಮಾನಿಗಳೊಂದಿಗೆ ಕೊನೆಗೊಂಡಿತು.
"ಅಕ್ಟೋಬರ್ 27ರಂದು ದಕ್ಷಿಣ ಆಫ್ರಿಕಾ v ಬಾಂಗ್ಲಾದೇಶ ಮತ್ತು ಭಾರತ v ಗ್ರೂಪ್ ಎ ರನ್ನರ್-ಅಪ್ ಅನ್ನು ಒಳಗೊಂಡಿರುವ SCG ನಲ್ಲಿ ಡಬಲ್-ಹೆಡರ್‌ಗಾಗಿ ಪ್ರಸ್ತುತ ಟಿಕೆಟ್ ಹಂಚಿಕೆಗಳನ್ನು ಮಾರಾಟ ಮಾಡಲಾಗಿದೆ. ಹೆಚ್ಚುವರಿ ಟಿಕೆಟ್‌ಗಳು ಲಭ್ಯವಾದ ಸಂದರ್ಭದಲ್ಲಿ ಅಭಿಮಾನಿಗಳು ಕಾಯುವಿಕೆ ಪಟ್ಟಿಗೆ ಸೇರಲು ಪ್ರೋತ್ಸಾಹಿಸಲಾಗುತ್ತದೆ," ಎಂದು ಐಸಿಸಿ ಹೇಳಿದೆ.

ಅಕ್ಟೋಬರ್ 22ರಂದು ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ
ಐಸಿಸಿ ಆಡಳಿತ ಮಂಡಳಿಯು "ಅಕ್ಟೋಬರ್ 22ರಂದು SCG ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಆಸ್ಟ್ರೇಲಿಯಾದ ಆರಂಭಿಕ ಸೂಪರ್ 12 ಪಂದ್ಯಕ್ಕೆ ಬಹಳ ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಉಳಿದಿವೆ. ಅಕ್ಟೋಬರ್ 30ರಂದು ಡಬಲ್-ಹೆಡರ್ ಪರ್ತ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ಗ್ರೂಪ್ ಎ ರನ್ನರ್ ಅಪ್ ಮತ್ತು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ಒಳಗೊಂಡಿದೆ. ನವೆಂಬರ್ 3 ರಂದು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ SCG ನಲ್ಲಿ ಪಂದ್ಯ ನಡೆಯಲಿದ್ದು, ಇವುಗಳಿಗೂ ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಉಳಿದಿವೆ," ಎಂದು ಐಸಿಸಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications