ಟಿ20 ವಿಶ್ವಕಪ್: ಆಸೀಸ್ ವಿರುದ್ಧ ಶಮಿ ಅಂತಿಮ ಓವರ್ ಎಸೆದ ಕಾರಣ ತಿಳಿಸಿದ ರೋಹಿತ್ ಶರ್ಮಾ

ಟಿ20 ವಿಶ್ವಕಪ್ 2022 ರಲ್ಲಿ ಭಾರತ ತಂಡಕ್ಕಾಗಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಯಾಗಿ ಆಸ್ಟ್ರೇಲಿಯಾವನ್ನು ತಲುಪಿದ ಕೆಲವೇ ದಿನಗಳಲ್ಲಿ, ಮೊಹಮ್ಮದ್ ಶಮಿ ಸೋಮವಾರ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉಸಿರುಕಟ್ಟುವ ಬೌಲಿಂಗ್ ಪ್ರದರ್ಶನವನ್ನು ನೀಡಿ, ಭಾರತದ ಗೆಲುವಿಗೆ ಕಾರಣರಾದರು.
ಅನುಭವಿ ವೇಗಿಗೆ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲ್ ಮಾಡಲು ಅವಕಾಶ ಸಿಕ್ಕಿತು, ಅದೂ ಅಂತಿಮ ಓವರ್. ಆದರೆ ಆ 6 ಎಸೆತಗಳಲ್ಲಿ ಅವರು ತೋರಿದ ಪ್ರದರ್ಶನ ಎಲ್ಲರ ಉಸಿರುಗಟ್ಟಿಸಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಲು ಕೇಳಲಾದ ಟ್ರಿಕಿ ಸನ್ನಿವೇಶದ ಹೊರತಾಗಿಯೂ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಪ್ರದರ್ಶನದಿಂದ ನಿಬ್ಬೆರಗಾಗಿದ್ದರು.
ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಆಶ್ಚರ್ಯಕರವಾಗಿ ಮೊಹಮ್ಮದ್ ಶಮಿಯನ್ನು ಪಂದ್ಯದ ವೇಳೆ ಬೌಲಿಂಗ್ ದಾಳಿಯಿಂದ ದೂರವಿಟ್ಟರು. ಆದರೆ, 20ನೇ ಓವರ್‌ನಲ್ಲಿ ಚೆಂಡನ್ನು ಮೊಹಮ್ಮದ್ ಶಮಿ ಕೈಗೆ ನೀಡಿದ ಹಿಟ್‌ಮ್ಯಾನ್ ದೊಡ್ಡ ಅಚ್ಚರಿ ಮೂಡಿಸಿದರು. ಅದು ಕೇವಲ 11 ರನ್ ಬೇಕಾಗಿದ್ದಾಗ.

ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಒಂದೇ ಕೈಯಿಂದ ಹಿಡಿದ ಅದ್ಭುತ್ ಕ್ಯಾಚ್
ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾದ ಎರಡು ಅಭ್ಯಾಸ ಪಂದ್ಯಗಳಲ್ಲಿ ಅನುಭವಿ ವೇಗಿ ಒಂದೇ ಒಂದು ಚೆಂಡನ್ನು ಎಸೆದಿರಲಿಲ್ಲ. ಆದರೆ, ಬಲಿಷ್ಠ ಆಸ್ಟ್ರೇಲಿಯನ್ನರ ವಿರುದ್ಧ ಕೊನೆಯ ಓವರ್‌ನಲ್ಲಿ 11 ರನ್‌ಗಳನ್ನು ರಕ್ಷಿಸುವ ಕೆಲಸವನ್ನು ನೀಡಲಾಯಿತು. 11 ರನ್‌ಗಳನ್ನು ಡಿಫೆಂಡ್ ಮಾಡುವಾಗ 20ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ 2,2,W,W,W,W ಹೀಗೆ ಅವರ ಓವರ್ ಕಂಡುಬಂದಿತು.
ಪ್ಯಾಟ್ ಕಮಿನ್ಸ್ ಅವರನ್ನು ಔಟ್ ಮಾಡುವ ಮೊದಲು ಬಲಗೈ ವೇಗಿ ಮೊಹಮ್ಮದ್ ಶಮಿ ಮೊದಲ ಎರಡು ಎಸೆತಗಳಲ್ಲಿ 4 ರನ್ ನೀಡಿದರು. ನಂತರ ವಿರಾಟ್ ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಒಂದೇ ಕೈಯಿಂದ ಹಿಡಿದ ಅದ್ಭುತ್ ಕ್ಯಾಚ್‌ಗೆ ಪ್ಯಾಟ್ ಕಮಿನ್ಸ್ ಔಟಾದರು. ನಂತರ ಆಶ್ಟನ್ ಅಗರ್ ರನೌಟ್ ಆದರು.

ಭಾರತವು 6 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು
ಮೊಹಮ್ಮದ್ ಶಮಿ ನಂತರದ ಎರಡು ಎಸೆತಗಳಲ್ಲಿ ಜೋಶ್ ಇಂಗ್ಲಿಸ್ ಮತ್ತು ಕೇನ್ ರಿಚರ್ಡ್‌ಸನ್ ಅವರ ವಿಕೆಟ್‌ಗಳನ್ನು ಪಡೆದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯ 180 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತವು 6 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಶಮಿಗೆ ಕೇವಲ ಒಂದು ಓವರ್ ಏಕೆ ನೀಡಿದರು, ಅದೂ ಅಂತಿಮ ಓವರ್ ಎಂಬುದನ್ನು ವಿವರಿಸಿದರು.

ಶಮಿಗೆ ಸವಾಲು ನೀಡಲು ಬಯಸಿದ್ದೆವು
"ಮೊಹಮ್ಮದ್ ಶಮಿ ಬಹಳ ಸಮಯದ ನಂತರ ಹಿಂತಿರುಗುತ್ತಿದ್ದಾರೆ, ಆದ್ದರಿಂದ ನಾವು ಅವರಿಗೆ ಓವರ್ ನೀಡಲು ಬಯಸಿದ್ದೇವೆ. ಅವರಿಗೆ ಸವಾಲು ನೀಡಲು ಬಯಸಿದ್ದೆವು ಮತ್ತು ಅಂತಿಮ ಓವರ್ ಅನ್ನು ಬೌಲ್ ಮಾಡಲು ಅವಕಾಶ ನೀಡಿದೆವು ಮತ್ತು ಅವರು ಏನು ಮಾಡಿದರು ಎಂಬುದನ್ನು ನೀವು ನೋಡಿದ್ದೀರಿ," ಎಂದು ಅವರು ಹೇಳಿದರು.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ವೇಗದ ದಾಳಿಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನುಮೊಹಮ್ಮದ್ ಶಮಿ ಅವರ ಹೆಗಲ ಮೇಲಿರುತ್ತದೆ. ಅಭ್ಯಾಸ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಮಾಡಿದ ರೀತಿಯನ್ನು ಪರಿಗಣಿಸಿದರೆ, ತಂಡದ ನಿರ್ವಹಣೆ ಅವರ ಮೇಲಿನ ವಿಶ್ವಾಸವು ಖಂಡಿತವಾಗಿಯೂ ಹೆಚ್ಚಾಗಿರುತ್ತೆದ ಎಂಬುದಕ್ಕೆ ಸಾಕ್ಷಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications