
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ವಿಂಟನ್ ಡಿಕಾಕ್
80 ರನ್‌ಗಳ ಗುರಿ ಬೆನ್ನಟ್ಟಿದ ದ.ಆಫ್ರಿಕಾ ಪರ ಓಪನರ್ ಕ್ವಿಂಟನ್ ಡಿಕಾಕ್ ಸ್ಫೋಟಕ ಆರಂಭ ನೀಡಿದ್ರು. ಮೊದಲ ಓವರ್‌ನಲ್ಲೇ ಕ್ವಿಂಟನ್ ಡಿಕಾಕ್ 23ರನ್ ಸಿಡಿಸಿ ಅಬ್ಬರಿಸಿದ್ರು. ದ.ಆಫ್ರಿಕಾ 3 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 47 ರನ್ ಕಲೆಹಾಕಿದ್ದ ವೇಳೆಯಲ್ಲಿ ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಮ ಪಂದ್ಯವು 7 ಓವರ್‌ಗೆ ಕಡಿತಗೊಂಡಿದ್ದಲ್ಲದೆ ಟಾರ್ಗೆಟ್ 64ರನ್ ನೀಡಲಾಯಿತು.
ಒಂದೆಡೆ ಮಳೆಯ ನಡುವೆ ಗುಡುಗಿದ ಡಿಕಾಕ್ ಶತ ಪ್ರಯತ್ನ ನಡೆಸಿ ತಂಡಕ್ಕೆ ಗೆಲುವು ತಂದುಕೊಡುವ ಪ್ರಯತ್ನ ನಡೆಸಿದ್ರು. ಆದ್ರೆ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಂ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಸ್ಥಗಿತಗೊಂಡಿತು. ಪಂದ್ಯ ನಿಲ್ಲುವ ಮುನ್ನ ದ. ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ ಕೇವಲ 13ರನ್‌ಗಳು ಬೇಕಿತ್ತು. ಆದ್ರೆ ಮಳೆ ನಿಲ್ಲದ ಕಾರಣ ಮ್ಯಾಚ್ ರೆಫರಿ ಪಂದ್ಯವನ್ನು ಕೊನೆಗೊಳಿಸಿದ ಪರಿಣಾಮ ದಕ್ಷಿಣ ಆಫ್ರಿಕಾ ಭಾರೀ ನಿರಾಸೆಗೊಂಡಿದೆ.
ದ.ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ 18 ಎಸೆತಗಳಲ್ಲಿ ಅಜೇಯ 47ರನ್ ಸಿಡಿಸುವ ಮೂಲಕ ಮಿಂಚಿನ ಆಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

ಬ್ಯಾಟಿಂಗ್‌ನಲ್ಲಿ ತಡಬಡಾಯಿಸಿದ ಜಿಂಬಾಬ್ವೆ ಟಾಪ್ ಆರ್ಡರ್
ಇದಕ್ಕೂ ಮುನ್ನ ಮಳೆಯ ಕಾಟದಿಂದಾಗಿ 30 ನಿಮಿಷಗಳ ಕಾಲ ಟಾಸ್ ವಿಳಂಭವಾಗಿದ್ದಲ್ಲೆ ಮತ್ತೆ ಮಳೆಯಿಂದಾಗಿ ಪಂದ್ಯದ ಓವರ್‌ಗಳು ಕಡಿತಗೊಂಡು, 9 ಓವರ್‌ಗಳಿಗೆ ಪಂದ್ಯ ನಿಗದಿಗೊಂಡಿತು. ಪಂದ್ಯದ ಓವರ್ ಕಡಿತಗೊಂಡ ಪರಿಣಾಮ ಪವರ್ ಪ್ಲೇ 3 ಓವರ್ , ನಾಲ್ವರು ಬೌಲರ್‌ಗಳು ಗರಿಷ್ಠ 2 ಓವರ್ ಬೌಲಿಂಗ್ ಮಾಡಬಹುದಾಗಿತ್ತು.
ಆದ್ರೆ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲು ಶುರು ಮಾಡಿದ ಜಿಂಬಾಬ್ವೆ ತಂಡವು ಮೊದಲ ಓವರ್‌ನಲ್ಲಿ 4 ರನ್ ಕಲೆಹಾಕಿತು. 2ನೇ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 6 ರನ್ ಮುಟ್ಟಿತು. ಮೊದಲಿಗೆ ನಾಯಕ ಕ್ರೈಗ್ ಎರ್ವಿನ್ 2 ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಇದ್ರ ಬೆನ್ನಲ್ಲೇ ರೆಗಿಸ್ ಚಕಬ್ವಾ 8ರನ್‌ಗಳಿಸಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದ್ರು.
ಎನ್‌ಗಿಡಿಯ ಅದೇ ಓವರ್‌ನಲ್ಲಿಯೇ ಫಾರ್ಮ್ ಬ್ಯಾಟ್ಸ್‌ಮನ್ ಸಿಕಂದರ್ ರಾಜಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಪರಿಣಾಮ ಜಿಂಬಾಬ್ವೆ 5 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 31 ರನ್ ಕಲೆಹಾಕಿತು. ಆದ್ರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ವೆಸ್ಲಿ ಮಾಧೆವೆರೆ 18 ಎಸೆತಗಳಲ್ಲಿ ಅಜೇಯ 35, ಮಿಲ್ಟನ್ ಶುಂಬಾ ಅಜೇಯ 18ರನ್ ಕಲೆಹಾಕಿದ ಪರಿಣಾಮ ಜಿಂಬಾಬ್ವೆ ತಂಡವು ನಿಗದಿತ 9 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 79 ರನ್ ಕಲೆಹಾಕಿತು. ಆದ್ರೆ 80 ರನ್ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ದ.ಆಫ್ರಿಕಾ ಮಳೆಯಿಂದಾಗಿ ನಿರಾಸೆಗೊಂಡಿದೆ.

ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ದಕ್ಷಿಣ ಆಫ್ರಿಕಾ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಎನ್ರಿಕ್ ನೊರ್ಕಿಯಾ, ಲುಂಗಿ ಎನ್‌ಗಿಡಿ
ಜಿಂಬಾಬ್ವೆ 11: ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ


Click it and Unblock the Notifications
