
ಹೊಬಾರ್ಟ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡಿದೆ. ಮಳೆಯ ಕಾಟದಿಂದಾಗಿ 30 ನಿಮಿಷಗಳ ಕಾಲ ಟಾಸ್ ವಿಳಂಭವಾಗಿದ್ದು, ಟಾಸ್ ಬಳಿಕ ಮತ್ತೆ ಮಳೆ ಪ್ರಾರಂಭವಾಗಿದ್ದು ಪಂದ್ಯದ ಆರಂಭ ಮತ್ತಷ್ಟು ತಡವಾಗಿದೆ.
ಮಳೆಯ ಕಾರಣದಿಂದಾಗಿ ಜಿಂಬಾಬ್ವೆ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಎರ್ವಿನ್ ಉತ್ತಮ ಸ್ಕೋರ್ ಕಲೆಹಾಕುವ ವಿಶ್ವಾಸ ವ್ಯಕ್ತಪಡಿಸಿದ್ದು, ದಕ್ಷಿಣ ಆಫ್ರಿಕಾವನ್ನು ನಂತರದಲ್ಲಿ ಕಟ್ಟಿ ಹಾಕುವ ಯೋಜನೆ ಹೊಂದಿದ್ದಾರೆ.
ಇನ್ನು ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಸೋತು ಬಂದಿರುವ ದ.ಆಫ್ರಿಕಾ ಗೆದ್ದು ಟ್ರ್ಯಾಕ್‌ಗೆ ಮರಳಲು ಸಜ್ಜಾಗಿದೆ. ಫಾರ್ಮ್ ವೈಫಲ್ಯದಿಂದ ಬಳಲುತ್ತಿರುವ ಹರಿಣಗಳ ನಾಯಕ ಟೆಂಬಾ ಬವುಮಾ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆಯುವ ವಿಶ್ವಾಸ ಹೊಂದಿದ್ದು ತಂಡದಲ್ಲಿ ನಾಲ್ವರು ಪೇಸರ್‌ಗಳು ಹಾಗೂ ಓರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿದಿದ್ದಾರೆ. ಕಗಿಸೊ ರಬಾಡ, ನೊರ್ಕಿಯಾ, ಲುಂಗಿನ ಎನ್‌ಗಿಡಿ ಜೊತೆಗೆ ಏಕೈಕ ಸ್ಪಿನ್ನರ್ ಕೇಶವ್ ಮಹಾರಾಜ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಇದುವರೆಗೂ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 6 ಬಾರಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದು 5 ಪಂದ್ಯವನ್ನ ಹರಿಣಗಳು ಜಯಿಸಿದ್ದು, 1 ಪಂದ್ಯ ರದ್ದಾಗಿದೆ. ಇದು ಏಳನೇ ಮುಖಾಮುಖಿಯಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡದ ಪ್ಲೇಯಿಂಗ್ ಇಲೆವೆನ್
ದಕ್ಷಿಣ ಆಫ್ರಿಕಾ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಎನ್ರಿಕ್ ನೊರ್ಕಿಯಾ, ಲುಂಗಿ ಎನ್‌ಗಿಡಿ
ಬೆಂಚ್: ಹೆನ್ರಿಚ್ ಕ್ಲಾಸೆನ್, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್
ಜಿಂಬಾಬ್ವೆ 11: ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಟೆಂಡೈ ಚಟಾರಾ, ರಿಚರ್ಡ್ ನಾಗರವಾ, ಬ್ಲೆಸಿಂಗ್ ಮುಜರಬಾನಿ
ಬೆಂಚ್: ಟೋನಿ ಮುನ್ಯೊಂಗಾ, ಬ್ರಾಡ್ ಇವಾನ್ಸ್, ಕ್ಲೈವ್ ಮದಂಡೆ, ವೆಲ್ಲಿಂಗ್ಟನ್ ಮಸಕಡ್ಜಾ