T20 World Cup 2022 : ಸೆಮಿಫೈನಲ್ ಪಂದ್ಯಗಳ ದಿನಾಂಕ, ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್; ವಿವರ ಇಲ್ಲಿದೆ

ಸತತ ಎರಡು ವಾರಗಳಿಗಿಂತ ಹೆಚ್ಚು ಕಾಲ ನಡೆದ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಗೆಲುವು, ಸೋಲು, ಹೋರಾಟ, ಮುಖಭಂಗ ಸೇರಿದಂತೆ ಹಲವು ದಾಖಲೆಗಳ ನಿರ್ಮಾಣ ಇವೆಲ್ಲವುಗಳು ಕಂಡು ಬಂದಿದ್ದು ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರಲ್ಲಿ.
ಸೂಪರ್ 12ರಲ್ಲಿ ಅದ್ಭುತ ಆಟದ ನಂತರ ಸೆಮಿಫೈನಲ್‌ಗೆ ಅಂತಿಮ ನಾಲ್ಕು ತಂಡಗಳು ಬಡ್ತಿ ಪಡೆದಿವೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಕೊನೆಯ ನಾಲ್ಕು ತಂಡಗಳಾಗಿವೆ ಮತ್ತು ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ತಲುಪಲು ಹೋರಾಡಲಿವೆ.
ಸೂಪರ್ 12ರ ಗ್ರೂಪ್ 2 ಪಂದ್ಯಗಳ ಕೊನೆಯ ದಿನವು ದಕ್ಷಿಣ ಆಫ್ರಿಕಾ ತಂಡವನ್ನು ನೆದರ್ಲ್ಯಾಂಡ್ಸ್ ತಂಡ 13 ರನ್‌ಗಳಿಂದ ಸೋಲಿಸುವುದರೊಂದಿಗೆ ಪ್ರಾರಂಭವಾಯಿತು. ನೆದರ್ಲ್ಯಾಂಡ್ಸ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದ ಸೆಮಿಸ್ ದಾರಿ ಮುಚ್ಚಿಕೊಂಡಿತು ಮತ್ತು ಜಿಂಬಾಬ್ವೆ ವಿರುದ್ಧ ತಮ್ಮ ಕೊನೆಯ ಸೂಪರ್ 12 ಪಂದ್ಯವನ್ನು ಆಡುವ ಮೊದಲೇ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸ್ವಯಂಚಾಲಿತವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.

ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ಭಾರತ
ಎರಡನೇ ಸೆಮಿಫೈನಲ್ ಸ್ಲಾಟ್‌ಗಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಿದವು. ಅಡಿಲೇಡ್‌ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಐದು ವಿಕೆಟ್‌ಗಳ ಜಯದೊಂದಿಗೆ ಗ್ರೂಪ್ 2ರ ಎರಡನೇ ಸ್ಥಾನಿಯಾಗಿ ಸೆಮಿಸ್‌ಗೆ ಅರ್ಹತೆ ಪಡೆಯಿತು. ಇನ್ನು ದಿನದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು ಮಣಿಸಿ ಗ್ರೂಪ್ 2ರಲ್ಲಿ ಅಗ್ರಸ್ಥಾನಕ್ಕೇರಿತು.
ಇದರ ಫಲವಾಗಿ, ಭಾರತವು ಈಗ ಗುರುವಾರ (ನವೆಂಬರ್ 10) ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ ಮತ್ತು ಪಾಕಿಸ್ತಾನ ತಂಡವು ಬುಧವಾರ (ನವೆಂಬರ್ 9) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಟಿ20 ವಿಶ್ವಕಪ್ 2022 ಸೆಮಿಫೈನಲ್ ಪಂದ್ಯಗಳ ವಿವರಗಳು
ಸೆಮಿಫೈನಲ್ 1: ನ್ಯೂಜಿಲೆಂಡ್ vs ಪಾಕಿಸ್ತಾನ - ಬುಧವಾರ (ನವೆಂಬರ್ 9), ಭಾರತೀಯ ಕಾಲಮಾನ ಮಧ್ಯಾಹ್ನ 1.30 - ಸಿಡ್ನಿ ಕ್ರಿಕೆಟ್ ಮೈದಾನ
ಸೆಮಿಫೈನಲ್ 2: ಭಾರತ vs ಇಂಗ್ಲೆಂಡ್ - ಗುರುವಾರ (ನವೆಂಬರ್ 10), ಭಾರತೀಯ ಕಾಲಮಾನ ಮಧ್ಯಾಹ್ನ 1.30 - ಅಡಿಲೇಡ್ ಓವಲ್
ಫೈನಲ್: ಭಾನುವಾರ (ನವೆಂಬರ್ 13) - ಮೆಲ್ಬೋರ್ನ್ ಕ್ರಿಕೆಟ್ ಮೈದಾನ

ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ವೀಕ್ಷಿಸಬಹುದು
ಟಿ20 ವಿಶ್ವಕಪ್ 2022 ಸೆಮಿಫೈನಲ್ ಪಂದ್ಯಗಳನ್ನು ಭಾರತದಲ್ಲಿ ಲೈವ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?
ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಸೆಮಿಫೈನಲ್‌ಗಳು ನವೆಂಬರ್ 9 ಮತ್ತು 10ರಂದು ಮಧ್ಯಾಹ್ನ 1.30 ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಆಗಲಿವೆ.
ಭಾರತದಲ್ಲಿ ಟಿ20 ವಿಶ್ವಕಪ್ 2022ರ ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ವೀಕ್ಷಿಸಬಹುದು?
ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಸೆಮಿಫೈನಲ್‌ಗಳು Disney+ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್‌ನಲ್ಲಿ ಲಭ್ಯವಿರುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications