ಟಿ 20 ವಿಶ್ವಕಪ್ ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿಗೆ ಸ್ಥಾನ, ಫಖರ್ ಜಮಾನ್ ಹೊರಕ್ಕೆ
ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ 2022 ರ ಟಿ 20 ವಿಶ್ವಕಪ್‌ಗಾಗಿ ಲಂಡನ್‌ನಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ ಎಂದು ವರದಿಯಾಗಿದೆ, ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಾಹೀನ್ ಅಫ್ರಿದ್ ಪ್ರಸ್ತುತ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಎಡಗೈ ಸೀಮರ್ ಶಾಹಿನ್ ಅಫ್ರಿದಿ ಅನುಭವಿಸಿದ ಮೊಣಕಾಲು ಗಾಯದಿಂದಾಗಿ 2022 ರ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಲಂಡನ್‌ಗೆ ಕಳುಹಿಸಿತು.
ಶಾಹಿನ್ ಅಫ್ರಿದಿ ಈಗ ಟಿ20 ವಿಶ್ವಕಪ್ 2022 ಟೂರ್ನಿಗೆ ಮುನ್ನ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ವಿರುದ್ಧದ ಮುಂಬರುವ ಏಳು ಪಂದ್ಯಗಳ ಟಿ20 ಸರಣಿಯಿಂದ ಅವರು ಈಗಾಗಲೇ ಹೊರಗುಳಿದಿದ್ದಾರೆ. ಆದಾಗ್ಯೂ, ಟಿ20 ವಿಶ್ವಕಪ್‌ನ ಸಮಯದಲ್ಲಿ ಆಟಗಾರನು ಫಿಟ್‌ನೆಸ್ ಅನ್ನು ಮರಳಿ ಪಡೆಯುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರೀಕ್ಷೆ ಮಾಡಿದೆ.
ಡಾನ್ ಪತ್ರಿಕೆಯ ವರದಿಯ ಪ್ರಕಾರ, ಅಫ್ರಿದಿ ಪ್ರಸ್ತುತ ತಜ್ಞರಾದ ಡಾ. ಇಮ್ತಿಯಾಜ್ ಅಹ್ಮದ್ ಮತ್ತು ಡಾ. ಜಾಫರ್ ಇಕ್ಬಾಲ್ ಅವರ ಉಸ್ತುವಾರಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಮತ್ತೆ ಬೌಲಿಂಗ್ ಆರಂಭಿಸಲು ಅವಕಾಶ ನೀಡುವುದಾಗಿ ವರದಿ ಹೇಳಿದೆ.

ಶಾಹೀನ್ ಅಫ್ರಿದಿಗೆ ಬದಲಿ ಆಟಗಾರ ಇಲ್ಲ
ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿ ಪ್ರಾಮುಖ್ಯತೆಯನ್ನು ಯಾವುದೇ ರೀತಿಯಲ್ಲಿ ಕಳೆದುಕೊಂಡಿಲ್ಲ. ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಏಷ್ಯಾಕಪ್ ಟೂರ್ನಿಯ ಸಮಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಸ್ತುತ ಯಾವುದೇ ಬೌಲರ್‌ಗಳು ಎಡಗೈ ಸೀಮರ್ ಶಾಹೀನ್ ಶಾ ಅಫ್ರಿದಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ನಾನು ಮೊದಲು ಬೌಲರ್‌ಗಳೊಂದಿಗೆ ಮಾತನಾಡಿದ್ದೇನೆ. ಈ ಗುಂಪಿನ ಯಾವುದೇ ಬೌಲರ್ ಶಾಹೀನ್ ಅಫ್ರಿದಿ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಇದು ನನ್ನ ಪ್ರಾಮಾಣಿಕ ಉತ್ತರವಾಗಿದೆ. ಶಾಹೀನ್ ಕಳೆದ 1-2 ವರ್ಷಗಳಲ್ಲಿ ಪ್ರದರ್ಶನ ನೀಡಿದ ರೀತಿ, ಯಾವುದೇ ಬೌಲರ್ ಪ್ರದರ್ಶನ ನೀಡಿಲ್ಲ" ಎಂದು ಹೇಳಿದ್ದಾರೆ.
ಇವರೇ ನೋಡಿ ಈವರೆಗಿನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರು

2021ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ
ಶಾಹೀನ್ ಶಾ ಅಫ್ರಿದಿ 2018 ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ವರೆಗೆ 40 ಟಿ20 ಪಂದ್ಯಗಳನ್ನಾಡಿರುವ ಶಾಹೀನ್ ಅಫ್ರಿದಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ.
7.76 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿರುವ ಅವರು, ಪಾಕಿಸ್ತಾನ ಪರವಾಗಿ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. ಎಡಗೈ ಬೌಲರ್ ಆಗಿರುವ ಶಾಹೀನ್ ಪಾಕಿಸ್ತಾನ ಬೌಲಿಂಗ್‌ನ ಪ್ರಮುಖ ಅಸ್ತ್ರವಾಗಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 2021 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪಾಕಿಸ್ತಾನ ಪ್ರವೇಶಿಸುವಲ್ಲಿ ಶಾಹೀನ್ ಪ್ರಮುಖ ಪಾತ್ರ ವಹಿಸಿದರು.

ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ
ಮೊಹಮ್ಮದ್ ವಾಸಿಂ ನೇತೃತ್ವದ ಆಯ್ಕೆ ಸಮಿತಿಯು ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನದ ತಂಡವನ್ನು ಹೆಸರಿಸಲು ಸಿದ್ಧವಾಗಿದೆ, ಐಸಿಸಿ ಸೆಪ್ಟೆಂಬರ್ 15 ರಂದು ಅಂತಿಮ ದಿನ ಎಂದು ಹೇಳಿದೆ.
ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಲವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಿಷ್ಠವಾಗಿಸಲು ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಗಾಯಗೊಂಡಿರುವ ಫಖರ್ ಜಮಾನ್
ಮೊಣಕಾಲಿನ ನೋವಿನಿಂದಾಗಿ ಪಾಕಿಸ್ತಾನದ ಅನುಭವಿ ಬ್ಯಾಟರ್ ಫಖರ್ ಜಮಾನ್ ಟಿ20 ವಿಶ್ವಕಪ್ ತಂಡದ ಭಾಗವಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಬಹಿರಂಗಪಡಿಸಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಫಖಾರ್ ಜಮಾನ್ ಕಳಪೆ ಆಟವಾಡಿದ್ದರು. ಆರು ಪಂದ್ಯಗಳಲ್ಲಿ16.00 ಸರಾಸರಿಯಲ್ಲಿ ಮತ್ತು 103.23 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 96 ರನ್ ಗಳಿಸಿದ್ದ ಫಖಾರ್ ಜಮಾನ್ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications