Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PAK vs SA: ನಿರ್ಣಾಯಕ ಘಟ್ಟದಲ್ಲಿ ಹರಿಣ ಪಡೆಗೆ ಆಘಾತ; ಪಾಕ್ ವಿರುದ್ಧ ಹೊರಗುಳಿದ ಮಿಲ್ಲರ್, ಕೇಶವ್

T20 World Cup 2022: South Africas David Miller And Keshav Maharaj Were Ruled Out Against Pakistan Match

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಗ್ರೂಪ್ 2ರ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಇನ್ನು ಬುಧವಾರ ತಂಡಕ್ಕೆ ಸೇರ್ಪಡೆಗೊಂಡ ಮೊಹಮ್ಮದ್ ಹ್ಯಾರಿಸ್ ಗಾಯಗೊಂಡಿರುವ ಫಖರ್ ಜಮಾನ್ ಬದಲಿಗೆ ಪಾಕಿಸ್ತಾನ ಒಂದು ಪ್ರಮುಖ ಬದಲಾವಣೆ ಮಾಡಿದೆ.

ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಎರಡು ಬದಲಾವಣೆಗಳನ್ನು ಮಾಡಿದ್ದು, ಡೇವಿಡ್ ಮಿಲ್ಲರ್ ಮತ್ತು ಕೇಶವ್ ಮಹಾರಾಜ್‌ ಬದಲಾಗಿ ಹೆನ್ರಿಚ್ ಕ್ಲಾಸೆನ್ ಮತ್ತು ತಬ್ರೈಜ್ ಶಮ್ಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಅಬ್ಬರಿಸಿ ತಂಡವನ್ನು ಗೆಲುವಿಗೆ ಮುನ್ನಡೆಸಿದ್ದ ಡೇವಿಡ್ ಮಿಲ್ಲರ್ ಇಂದಿನ ಪಂದ್ಯದಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ. ಭಾರತ ವಿರುದ್ಧ ಡೇವಿಡ್ ಮಿಲ್ಲರ್ ಅಜೇಯ 59 ರನ್‌ ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದ್ದರು.

ಬೆನ್ನು ಸೆಳೆತದಿಂದಾಗಿ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ ಮತ್ತು ಎಡಗೈ ಆಫ್ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಸೂಪರ್ 12 ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಹೇಳಿದ್ದಾರೆ.

T20 World Cup 2022: South Africas David Miller And Keshav Maharaj Were Ruled Out Against Pakistan Match

"ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು, ಪಿಚ್ ಸ್ವಲ್ಪ ಒಣದಾಗಿ ಕಾಣುತ್ತದೆ, ಆದರೆ ಸ್ವಲ್ಪ ಹಸಿರು ಇದೆ. ಮೊದಲು ಬ್ಯಾಟಿಂಗ್ ಮಾಡುವುದು ಒಂದು ಪ್ರಯೋಜನವಾಗಿದೆ. ಆದರೆ ನಾವು ಎದುರಾಳಿಯನ್ನು ಕಡಿಮೆ ಸ್ಕೋರ್‌ಗೆ ಇಳಿಸಿ, ನಂತರ ಚೆನ್ನಾಗಿ ಚೇಸ್ ಮಾಡುತ್ತೇವೆ," ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ತಿಳಿಸಿದರು.

ನಾವು ಸಾಕಷ್ಟು ಆಟಗಾರರನ್ನು ಹೊಂದಿದ್ದೇವೆ ಮತ್ತು ಅವರಿಂದ ಸಾಕಷ್ಟು ಬೆಂಬಲ ಮತ್ತು ವಿಶ್ವಾಸವನ್ನು ಪಡೆದಿದ್ದೇವೆ. ನಾವು ಎರಡು ಬದಲಾವಣೆಗಳನ್ನು ಮಾಡಿದ್ದೇವೆ. ಒಂದು ಬಲವಂತದ ಗಾಯದಿಂದ ಡೇವಿಡ್ ಮಿಲ್ಲರ್ ಮಿಸ್ ಆಗಿದ್ದು, ಹೆನ್ರಿಚ್ ಕ್ಲಾಸೆನ್ ಅವರ ಸ್ಥಾನಕ್ಕೆ ಬಂದರು. ತಬ್ರೇಜ್ ಶಮ್ಸಿ ಅವರು ಕೇಶವ್ ಮಹಾರಾಜ್ ಅವರ ಸ್ಥಾನಕ್ಕೆ ಬಂದಿದ್ದಾರೆ,'' ಎಂದು ಟಾಸ್ ನಂತರ ಟೆಂಬಾ ಬವುಮಾ ಹೇಳಿದರು.

ದಕ್ಷಿಣ ಆಫ್ರಿಕಾ ಆಡುವ 11ರ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ

ಪಾಕಿಸ್ತಾನ ಆಡುವ 11ರ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ

Story first published: Thursday, November 3, 2022, 13:59 [IST]
Other articles published on Nov 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+