ಭಾರತ-ಪಾಕಿಸ್ತಾನ ರೋಚಕ ಪಂದ್ಯ ಮರುಪ್ರಸಾರ ಮಾಡಲಿರುವ ಸ್ಟಾರ್ ಸ್ಟೋರ್ಟ್ಸ್:ವರದಿ

ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ವಿಶ್ವಕಪ್‌ನ ಆರಂಭಿಕ ಪಂದ್ಯವೇ ಇಷ್ಟು ದೊಡ್ಡ ಮಟ್ಟಿನ ಹೈವೋಲ್ಟೇಜ್‌ಗೆ ಕಾರಣವಾಗಿರುವುದು ಉಭಯ ತಂಡಗಳ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.
ಪಾಕ್ ನೀಡಿದ 160ರನ್‌ಗಳ ಗುರಿ ಬೆನ್ನತ್ತಿದ ಭಾರತ ಅಂತಿಮ ಎಸೆತದಲ್ಲಿ ಗೆಲುವಿನ ಗೆರೆ ದಾಟುವ ಮೂಲಕ ಅದ್ಭುತ ಗೆಲುವನ್ನ ಸಂಪಾದಿಸಿತು. ಅದ್ರಲ್ಲೂ ವಿರಾಟ್ ಕೊಹ್ಲಿ ಆಟ ನೋಡಿದ ಅಭಿಮಾನಿಗಳು ಕಣ್ತುಂಬಿಕೊಂಡರು. ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದಾದ ಕೊಹ್ಲಿ ಆಟದ ಸೊಬಗನ್ನು ವರ್ಣಿಸಲು ಪದಗಳೇ ಕಡಿಮೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.
53 ಎಸೆತಗಳಲ್ಲಿ ಅಜೇಯ 82ರನ್ ಕಲೆಹಾಕಿದ ವಿರಾಟ್ ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಶತಕದ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಹಾರ್ದಿಕ್ ಪಾಂಡ್ಯ ಕೂಡ ಭಾರತದ ಗೆಲುವಿನಲ್ಲಿ 40ರನ್‌ಗಳ ಮಹತ್ವದ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ 3 ವಿಕೆಟ್ ಸಂಪಾದಿಸಿದರು. ಬ್ಯಾಟಿಂಗ್‌ನಲ್ಲೂ ನೆರವಾದ ಹಾರ್ದಿಕ್ ಆಟವನ್ನು ಕ್ರಿಕೆಟ್ ದಿಗ್ಗಜರು ಮೆಚ್ಚಿದ್ದಾರೆ.
90 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ನೇರವಾಗಿ ವೀಕ್ಷಿಸಿದ್ದಾರೆ. ಇನ್ನು ಟಿವಿ, ಮೊಬೈಲ್ ಮೂಲಕ ಕೋಟ್ಯಾಂತರ ಅಭಿಮಾನಿಗಳು ಸಾಂಪದ್ರಾಯಿಕ ಎದುರಾಳಿಗಳ ರಣರೋಚಕ ಕಾದಾಟವನ್ನ ವೀಕ್ಷಿಸಿದರು. ಆದ್ರೆ ಹಲವು ಕಾರಣಗಳಿಂದ ಅನೇಕ ಅಭಿಮಾನಿಗಳು ಪಂದ್ಯವನ್ನ ವೀಕ್ಷಿಸಲು ಸಾಧ್ಯವಾಗದೇ ಇರಬಹುದು. ಆದ್ರೆ ಈ ಕುರಿತು ಬೇಸರ ಪಡುವ ಅಗತ್ಯವಿಲ್ಲ.
ವರದಿಯ ಪ್ರಕಾರ ಭಾರತ-ಪಾಕ್ ನಡುವಿನ ಸೂಪರ್ 12 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಅಕ್ಟೋಬರ್ 24ರಂದು ಸೋಮವಾರ ರಾತ್ರಿ 8 ಗಂಟೆಗೆ ಮರುಪ್ರಸಾರ ಮಾಡಲಿದೆ ಎಂದು ವರದಿಯಾಗಿದೆ. ಈ ಮರುಪ್ರಸಾರವು ಕೇವಲ ಹೈಲೈಟ್ಸ್ ಆಗಿರದೆ, ಬಾಲ್ ಟು ಬಾಲ್ ಪ್ರಸಾರವಾಗಿರಲಿದೆ ಎಂದು ಸಹ ತಿಳಿದುಬಂದಿದ್ದು, ಪಂದ್ಯವನ್ನ ವೀಕ್ಷಿಸದೇ ಇರುವ ಅಭಿಮಾನಿಗಳು ದೀಪಾವಳಿ ಹಬ್ಬವನ್ನ ಸಂಭ್ರಮಿಸುವುದರ ಜೊತೆಗೆ ಸಂಪೂರ್ಣ ಪಂದ್ಯವನ್ನ ನೋಡುವ ಸುವರ್ಣಾವಕಾಶ ಪಡೆಯಲಿದ್ದಾರೆ.
ಎಂಸಿಜಿಯಲ್ಲಿ ಐತಿಹಾಸಿಕ ಗೆಲುವನ್ನ ದಾಖಲಿಸಿದ ಟೀಂ ಇಂಡಿಯಾ
ಪಾಕಿಸ್ತಾನ ನೀಡಿದ್ದ 160ರನ್‌ಗಳ ಗುರಿಯನ್ನ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ 31ರನ್‌ಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ವೇಳೆಯಲ್ಲಿ ಭಾರತದ ಪರ ಅತ್ಯಮೋಘ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸುವುದರ ಜೊತೆಗೆ ಪಾಂಡ್ಯ ಜೊತೆಗೆ ಸೊಗಸಾದ ಜೊತೆಯಾಟವಾಡಿದರು.
ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ವಿರಾಟ್ ಹಾಗೂ ಪಾಂಡ್ಯ ಪಾಕ್ ವಿರುದ್ಧ ಯಾವುದೇ ವಿಕೆಟ್‌ಗೆ ಅತಿದೊಡ್ಡ ಜೊತೆಯಾಟದ ದಾಖಲೆ ಕೂಡ ಬರೆದರು. ವಿರಾಟ್ 53 ಎಸೆತಗಳಲ್ಲಿ ಅಜೇಯ 82 ರನ್ ಹಾಗೂ ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಕಲೆಹಾಕಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications