IND vs PAK: ಚೇಸಿಂಗ್ ಮಾಸ್ಟರ್ ಆಟಕ್ಕೆ ಮನಸೋತ ದ್ರಾವಿಡ್; ಎಲ್ಲರ ಹೃದಯ ಗೆದ್ದ ಅಪ್ಪುಗೆ; ವಿಡಿಯೋ

ಭಾರತದ ಸ್ಟಾರ್ ಬ್ಯಾಟ್ಸ್‌ಮನ್, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡರು. ಮಾತ್ರವಲ್ಲದೇ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಗಳಿಸಲು ಭಾರತ ತಂಡಕ್ಕೆ ನೆರವಾದರು.
31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತವನ್ನು ಅಪಾಯದಿಂದ ರಕ್ಷಿಸಲು ವಿರಾಟ್ ಕೊಹ್ಲಿ(82) ಅವರು ಹಾರ್ದಿಕ್ ಪಾಂಡ್ಯ (40) ಅವರೊಂದಿಗೆ ಪಾಕಿಸ್ತಾನ ವಿರುದ್ಧ 113 ರನ್‌ಗಳ ದಾಖಲೆ ಜೊತೆಯಾಟದಲ್ಲಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಅಸಂಭವವಾವಾಗಿದ್ದ ಗೆಲುವಿಗೆ ತಂಡವನ್ನು ಮುಂದೆ ನಿಂತು ಗೆಲ್ಲಿಸಿದರು.
ವಿರಾಟ್ ಕೊಹ್ಲಿಗೆ ತಂಡದ ಸಹ ಆಟಗಾರರಿಂದ ಅಪ್ಪುಗೆ
ಇದು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೆ ಈ ವಿರ್ಶವಕಪ್ ಪಂದ್ಯಾವಳಿಯ ಮೊದಲ ಪಂದ್ಯವಾಗಿತ್ತು. ಇದರೊಂದಿಗೆ ಕಳೆದ 2021ರ ಯುಎಇ ವಿಶ್ವಕಪ್‌ನ ಲೀಗ್ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು. ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಂದ್ಯಶ್ರೇಷ್ಠ ವಿಜೇತ ವಿರಾಟ್ ಕೊಹ್ಲಿಯನ್ನು ಮೇಲಕ್ಕೆ ಎತ್ತುವುದರೊಂದಿಗೆ ಭಾರತೀಯ ತಂಡದಲ್ಲಿ ಸಂಭ್ರಮಾಚರಣೆ ಮನೆಮಾಡಿತ್ತು ಮತ್ತು ಇಡೀ ತಂಡವು ಹೊರಬಂದು ಚೇಸಿಂಗ್ ಮಾಸ್ಟರ್ ಕಿಂಗ್ ಕೊಹ್ಲಿಯನ್ನು ಅಭಿನಂದಿಸಿತು.
ಪಾಕಿಸ್ತಾನ ವಿರುದ್ಧ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ಆಕಾಶದತ್ತ ಮುಖ ಮಾಡಿ ಧನ್ಯವಾದ ಹೇಳಿದ ಸ್ವತಃ ವಿರಾಟ್ ಕೊಹ್ಲಿ ಭಾವುಕರಾದರು. ವಿರಾಟ್ ಕೊಹ್ಲಿಗೆ ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಅಪ್ಪುಗೆಯನ್ನು ನೀಡಿದರು ಮತ್ತು ಇದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದಲೇ ಪ್ರಾರಂಭವಾಯಿತು.

ತಂಡವನ್ನು ಗೆಲುವಿನತ್ತ ಮಾರ್ಗದರ್ಶನ ಮಾಡಿದ ವಿರಾಟ್ ಕೊಹ್ಲಿ
ಚೇಸಿಂಗ್‌ಗಳಲ್ಲಿ, ಒತ್ತಡದ ಸನ್ನಿವೇಶಗಳಲ್ಲಿ ತಂಡವನ್ನು ಗೆಲುವಿನತ್ತ ಮಾರ್ಗದರ್ಶನ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ವಿರಾಟ್ ಕೊಹ್ಲಿ, ಕಳೆದ ತಿಂಗಳು ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳುವ ಮೊದಲು ಈ ವರ್ಷ ವಿವರಿಸಲಾಗದ ಕಳಪೆ ಫಾರ್ಮ್ ಸಹಿಸಿಕೊಂಡಿದ್ದರು. ಏಷ್ಯಾ ಕಪ್‌ನಲ್ಲಿ ಅವರು ತಮ್ಮ ಚೊಚ್ಚಲ ಟಿ20 ಶತಕವನ್ನು ಸಹ ಗಳಿಸಿದರು.
ಗ್ರೂಪ್ 2 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್ ಗಳಿಸಿತು. ಶಾನ್ ಮಸೂದ್ ಅಜೇಯ 52, ಇಫ್ತಿಕರ್ ಅಹ್ಮದ್ 51 ರನ್ ಗಳಿಸಿದರು. ಇನ್ನು ಭಾರತದ ಪರ ಅರ್ಶ್‌ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಟ್ರ್ಯಾಕ್‌ಗೆ ತರಲು ವಿರಾಟ್ ಕೊಹ್ಲಿ ಕ್ರೀಸ್‌ಗೆ ಅಂಟಿಕೊಂಡರು
160 ರನ್‌ಗಳ ಗುರಿ ಬೆನ್ನತ್ತಿದ ಭಾರತ ಪಂದ್ಯದ ಆರಂಭದಲ್ಲೇ ಆರಂಭಿಕರಾದ ಕೆಎಲ್ ರಾಹುಲ್ (4) ಮತ್ತು ರೋಹಿತ್ ಶರ್ಮಾ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅನ್ನು ಮತ್ತೆ ಟ್ರ್ಯಾಕ್‌ಗೆ ತರಲು ವಿರಾಟ್ ಕೊಹ್ಲಿ ಕ್ರೀಸ್‌ಗೆ ಅಂಟಿಕೊಂಡರು. ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಅವರ ವಿಕೆಟ್‌ಗಳು ಭಾರತದ ಗೆಲುವಿನ ಅವಕಾಶಗಳನ್ನು ಕಸಿದುಕೊಂಡಿದ್ದವು. ಆದರೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕೈಜೋಡಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಅಂತಿಮ ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆ ಇತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೇರಿದ್ದ 90,000ಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ, ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಪಿನ್ನರ್ ಮೊಹಮ್ಮದ್ ನವಾಜ್ ಏಳು ರನ್, ನೋಬಾಲ್, ವೈಡ್ ಸೇರಿ ಒಟ್ಟು 16 ರನ್ ಬಿಟ್ಟುಕೊಟ್ಟರು. ಕೊನೆಯ ಬಾಲ್‌ನಲ್ಲಿ ಒಂದು ರನ್ ಬೇಕಿದ್ದಾಗ ಆರ್ ಅಶ್ವಿನ್ ಲಾಂಗ್ ಆಫ್ ಮೇಲೆ ತಳ್ಳಿ ಒಂದು ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications