Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್ 2022: ಜಿಂಬಾಬ್ವೆ ವಿರುದ್ಧ ಭಾರತ ಎಚ್ಚರಿಕೆಯ ಅಗತ್ಯವಿದೆ: ಸುನಿಲ್ ಗವಾಸ್ಕರ್

T20 World Cup 2022: Team India Need Carefull Against Zimbabwe Says Sunil Gavaskar

ಗುರುವಾರ ನಡೆದ ಟಿ20 ವಿಶ್ವಕಪ್ ಸೂಪರ್ 12ರ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 1 ರನ್‌ನಿಂದ ರೋಚಕವಾಗಿ ಸೋಲಿಸಿದ ಜಿಂಬಾಬ್ವೆ ತಂಡ ಇದೀಗ ಪಂದ್ಯಾವಳಿಯಲ್ಲಿ ಎಲ್ಲರ ನಿದ್ದೆಗೆಡಿಸಿದೆ. ಬಲಿಷ್ಠ ತಂಡಗಳೂ ಜಿಂಬಾಬ್ವೆ ವಿರುದ್ಧ ಆಡಬೇಕಾದರೆ ಎಚ್ಚರವಹಿಸುವುದು ಅತ್ಯಗತ್ಯವಾಗಿದೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಯಾವ ತಂಡವನ್ನು ದುರ್ಬಲ ಎಂದು ಪರಿಗಣಿಸಬಾರದು ಎಂಬುದು ಸಾಬೀತಾಗಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ತಂಡ ತಮ್ಮ ಕೊನೆಯ ಟಿ20 ವಿಶ್ವಕಪ್ 2022 ಸೂಪರ್ 12 ಪಂದ್ಯದಲ್ಲಿ ಭಾನುವಾರ, ನವೆಂಬರ್ 6ರಂದು ಜಿಂಬಾಬ್ವೆ ತಂಡವನ್ನು ಎದುರಿಸುವಾಗ ಟೀಂ ಇಂಡಿಯಾ ಎಚ್ಚರ ತಪ್ಪಬಾರದು ಎಂದು ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಕ್ರೇಗ್ ಎರ್ವಿನ್ ನಾಯಕತ್ವದ ಜಿಂಬಾಬ್ವೆ ತಂಡ ಅಕ್ಟೋಬರ್ 27, ಗುರುವಾರದಂದು ಬಾಬರ್ ಅಜಂ ಅವರ ಪಾಕಿಸ್ತಾನವನ್ನು ಒಂದು ರನ್‌ನಿಂದ ಸೋಲಿಸಿ ಸೆಮಿಸ್‌ಗೆ ಅರ್ಹತೆ ಪಡೆಯಲು ಪ್ರಬಲ ಸ್ಪರ್ಧಿಗಳಾಗಿ ರೂಪುಗೊಂಡಿದೆ. ಪಾಕಿಸ್ತಾನ 131 ರನ್‌ಗಳ ಗುರಿಯನ್ನು ಬೆನ್ನಟ್ಟಲು ನಿಗದಿಪಡಿಸಿದ ನಂತರ, ಕ್ರೇಗ್ ಎರ್ವಿನ್‌ ಅವರ ಹುಡುಗರು ತಮ್ಮ ಎದುರಾಳಿಯನ್ನು 129ಕ್ಕೆ ನಿರ್ಬಂಧಿಸುವಲ್ಲಿ ಯಶಸ್ವಿಯಾದರು.

T20 World Cup 2022: Team India Need Carefull Against Zimbabwe Says Sunil Gavaskar

ಪಾಕಿಸ್ತಾನದ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್, ತಮ್ಮ ಸೂಪರ್ 12 ಪಂದ್ಯಗಳೆರಡನ್ನೂ ಸೋತಿರುವ ಮೆನ್ ಇನ್ ಗ್ರೀನ್ ಮುಂದಿನ ಪಂದ್ಯಗಳಲ್ಲಿ ದೋಷಗಳಿಗೆ ಹೆಚ್ಚಿನ ಅವಕಾಶವಿಲ್ಲ ಎಂದು ಹೇಳಿದರು.

"ಹೌದು, ಪಾಕಿಸ್ತಾನ ತಮ್ಮ ಉಳಿದ ಮೂರು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ ಮತ್ತು ಅವರು ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವುದರಿಂದ ಅದು ಸುಲಭವಲ್ಲ, ಅದು ಅಗ್ರ ತಂಡವಾಗಿದೆ. ಭಾರತ ತಂಡವೂ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು," ಎಂದು ಕಿವಿಮಾತು ಹೇಳಿದ್ದಾರೆ.

"ಈಗ ಜಿಂಬಾಬ್ವೆ ತಂಡ ಪಾಕಿಸ್ತಾನವನ್ನು ಸೋಲಿಸುವುದರೊಂದಿಗೆ, ಭಾರತ ತಂಡವೂ ಜಿಂಬಾಬ್ವೆ ವಿರುದ್ಧ ಬಹಳ ಎಚ್ಚರಿಕೆಯಿಂದ ಇರಬೇಕು. ಪಾಕಿಸ್ತಾನದ ವಿರುದ್ಧದ ಗೆಲುವಿನಿಂದ ಜಿಂಬಾಬ್ವೆ ತೇಲುತ್ತಿದೆ," ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ಉಲ್ಲೇಖಿಸಿದ್ದಾರೆ.

T20 World Cup 2022: Team India Need Carefull Against Zimbabwe Says Sunil Gavaskar

ಎರಡೂ ಪಂದ್ಯಗಳು ರೋಚಕತೆಯಿಂದ ಮುಗಿದಿದ್ದು, ಪಾಕಿಸ್ತಾನ ತಂಡವು ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಸೋತಿತು. ಒಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 82 ರನ್‌ಗಳ ಪ್ರದರ್ಶನ ಗೆಲುವನ್ನು ಕಸಿದುಕೊಂಡರೆ, ಸಿಕಂದರ್ ರಜಾ ಅವರ ಮೂರು ವಿಕೆಟ್ ಗಳಿಕೆಯು ಪ್ರಮುಖ ಟೂರ್ನಿಯಲ್ಲಿ ಮತ್ತೊಂದು ಸೋಲನ್ನು ನೀಡಿತು.

1983ರ ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯ ಸುನಿಲ್ ಗವಾಸ್ಕರ್, ಒತ್ತಡದ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಗೆಲುವನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

"ಟಿ20 ಪಂದ್ಯಗಳಲ್ಲಿ ಏನು ಬೇಕಾದರೂ ಆಗಬಹುದು. ಪಾಕಿಸ್ತಾನ ಕೆಟ್ಟ ತಂಡ ಎಂದು ನಾನು ಭಾವಿಸುವುದಿಲ್ಲ, ಅವರು ಕೆಲವು ಗುಣಮಟ್ಟದ ಆಟಗಾರರು, ಉತ್ತಮ ಬೌಲರ್‌ಗಳು ಮತ್ತು ಬ್ಯಾಟರ್‌ಗಳನ್ನು ಹೊಂದಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಸಮಗ್ರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ," ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.

ಪಾಕಿಸ್ತಾನದ ಮುಂದಿನ ಸೂಪರ್ 12 ಪಂದ್ಯವು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 30 ಭಾನುವಾರ ಪರ್ತ್‌ನಲ್ಲಿ ನಡೆಯಲಿದೆ.

Story first published: Friday, October 28, 2022, 20:14 [IST]
Other articles published on Oct 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+