Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ.ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯ: ಧನ್ಯವಾದ ಎಂದ ಭಾರತದ ಅಭಿಮಾನಿಗಳು! ಕಾರಣ ಏನು?

Pakistan

ಸಿಡ್ನಿಯಲ್ಲಿ ಗುರುವಾರ ನಡೆದ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನವು ಡೆಕ್ವರ್ತ್‌ ಲೂಯಿಸ್ ನಿಯಮದಡಿಯಲ್ಲಿ 33ರನ್‌ಗಳಿಂದ ದ.ಆಫ್ರಿಕಾ ವಿರುದ್ಧ ಪಂದ್ಯವನ್ನು ಜಯಿಸಿತು. ಈ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಓಟವು ಇನ್ನೂ ಜೀವಂತವಾಗಿದ್ದು, ದ.ಆಫ್ರಿಕಾ ಪಾಕಿಸ್ತಾನ ಹಾಗೂ ಭಾರತದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಸೋಲನ್ನ ಕಾಣದ ದ.ಆಫ್ರಿಕಾ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕ್ ವಿರುದ್ಧ ಮುಗ್ಗರಿಸಿತು. ಮಳೆಯಿಂದಾಗಿ ಓವರ್‌ಗಳು ಕಡಿತಗೊಂಡ ಪರಿಣಾಮ 14 ಓವರ್‌ಗೆ 142ರನ್ ಟಾರ್ಗೆಟ್ ನೀಡಲಾಯಿತು. ಈ ಮೂಲಕ ಅದಾಗಲೇ 69ರನ್ ಕಲೆಹಾಕಿದ್ದ ದ.ಆಫ್ರಿಕಾ, ಉಳಿದ 5 ಓವರ್‌ಗಳಲ್ಲಿ 73ರನ್‌ ಕಲೆಹಾಕುವ ಗುರಿ ಮುಂದಿತ್ತು. ತುಂಬಾ ಕಠಿಣವಾದ ಈ ಗುರಿ ತಲುಪಲು ಹರಿಣಗಳ ಪರ ಪ್ರಮುಖ ಬ್ಯಾಟರ್‌ಗಳೇ ಉಳಿದಿರಲಿಲ್ಲ. ಪ್ರೈಮ್ ಬ್ಯಾಟರ್ ಡೇವಿಡ್ ಮಿಲ್ಲರ್ ಕೂಡ ಈ ಪಂದ್ಯದಲ್ಲಿರಲಿಲ್ಲ. ಪರಿಣಾಮ ದ.ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿತು. ಜೊತೆಗೆ 33ರನ್‌ಗಳಿಂದ ಸೋಲನ್ನ ಅನುಭವಿಸಿದೆ.

ಆದ್ರೆ ಈ ಗೆಲುವಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ತಂಡಕ್ಕೆ ಶುಭ ಕೋರಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಪಾಕಿಸ್ತಾನದ ವಿರುದ್ಧ ದ.ಆಫ್ರಿಕಾ ಜಯಿಸಿದ್ದೇ ಆದಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರುತ್ತಿತ್ತು. ಇದ್ರಿಂದಾಗಿ ಟೀಂ ಇಂಡಿಯಾ ಎರಡನೇ ಸ್ಥಾನವನ್ನ ಪಡೆಯುವ ಮೂಲಕ ಸೆಮಿಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನ ಎದುರಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು.

ಬಹುತೇಕ ನಾಕೌಟ್‌ ಪಂದ್ಯಗಳಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಂಡವು ಮುಳುವಾಗಿದೆ. ಹೀಗಾಗಿ ನಾಕೌಟ್‌ ಪಂದ್ಯಗಳಲ್ಲಿ ಭಾರತಕ್ಕೆ ಕಿವೀಸ್ ಎದುರಾಗುತ್ತಿಲ್ಲ ಎಂಬ ಖುಷಿಯಲ್ಲಿ ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಪೋಸ್ಟ್‌ಗಳನ್ನ ಹರಿಬಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಬಳಿಕ ಪಾಕಿಸ್ತಾನ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು ಮತ್ತು ಸೋಲಿನ ಮೂಲಕ 4 ಪಾಯಿಂಟ್ಸ್ ಕಲೆಹಾಕಿದ್ದು, + 1.085 ನೆಟ್ ರನ್‌ರೇಟ್ ಹೊಂದಿದೆ.

ಪಂದ್ಯ ಸೋತರು ಸಹ ದ.ಆಫ್ರಿಕಾ ತಂಡವು ಉತ್ತಮ ನೆಟ್‌ರನ್‌ರೇಟ್‌ ಹೊಂದಿದ್ದು, 4 ಪಂದ್ಯಗಳಲ್ಲಿ 2 ಗೆಲುವು, 1ಸೋಲು ಹಾಗೂ ಹಾಗೂ 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್‌ ಕಲೆಹಾಕಿದೆ. ನೆಟ್‌ ರನ್‌ರೇಟ್ +1.402ರಷ್ಟಿದೆ.

ಟೀಂ ಇಂಡಿಯಾ ಗ್ರೂಪ್ 2ನಲ್ಲಿ 6 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಕೊನೆಯ ಮೂರು ಸ್ಥಾನದಲ್ಲಿ ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್‌ ಸ್ಥಾನ ಪಡೆದಿವೆ.

Story first published: Thursday, November 3, 2022, 22:53 [IST]
Other articles published on Nov 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+