ಟಿ20 ವಿಶ್ವಕಪ್ 2022: ಅಂಪೈರ್‌ಗಳು ಭಾರತ ಪರ ಪಕ್ಷಪಾತ ಹೊಂದಿದ್ದಾರೆ ಎಂದ ಶಾಹಿದ್ ಅಫ್ರಿದಿ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಂತಿಮ ನಾಲ್ಕರ ಘಟ್ಟ ತಲುಪುವ ಆಸೆಯನ್ನು ಬಲಪಡಿಸಿಕೊಂಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಭಾರತವನ್ನು ಅನವಶ್ಯಕ ವಿಷಯಗಳನ್ನು ಮುಂದಿಟ್ಟು ಅಲ್ಲಿನ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಟೀಕಿಸುತ್ತಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ 2022ರಲ್ಲಿ ಕ್ರಿಕೆಟ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬಿಸಿಸಿಐ ಮತ್ತು ಟೀಂ ಇಂಡಿಯಾದ ಕಡೆಗೆ ಪಕ್ಷಪಾತ ಹೊಂದಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಶಾಹಿದ್ ಅಫ್ರಿದಿ ದೊಡ್ಡ ಹೇಳಿಕೆ ನೀಡಿದ್ದಾರೆ.

ಭಾರತದ ಪಂದ್ಯಗಳಲ್ಲಿ ಪಕ್ಷಪಾತದ ಅಂಪೈರಿಂಗ್ ಕುರಿತು ಮಾತುಕತೆ
ಈ ಹಿಂದೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಪೈರ್ ಮರೈಸ್ ಎರಾಸ್ಮಸ್ ಅವರನ್ನು ನೋ ಬಾಲ್ ಕೇಳಿದಾಗಿನಿಂದ ಈ ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳಲ್ಲಿ ಪಕ್ಷಪಾತದ ಅಂಪೈರಿಂಗ್ ಕುರಿತು ಮಾತುಕತೆಗಳು ನಡೆದಿವೆ. ಅದೇ ಪಂದ್ಯದ ವೇಳೆ ಎತ್ತರಕ್ಕೆ ನೋ ಬಾಲ್ ಹಾಕಿದಾಗ ಪಾಕಿಸ್ತಾನದ ಅಭಿಮಾನಿಗಳು ಮೋಸವಾಗಿದೆ ಎಂದು ಭಾವಿಸಿದ್ದಾರೆ.
ಇನ್ನು ಕಳೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತೊಮ್ಮೆ ಅಂಪೈರ್‌ಗಳಿಗೆ ಎತ್ತರದ ನೋ ಬಾಲ್ ಕೇಳಿದರು. ಪಂದ್ಯದ ವೇಳೆ ವಿರಾಟ್ ಕೊಹ್ಲಿ "ನಕಲಿ ಫೀಲ್ಡಿಂಗ್' ಮಾಡಿದರು ಮತ್ತು ಅಂಪೈರ್‌ಗಳು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಬಾಂಗ್ಲಾದೇಶ ತಂಡ ಪಂದ್ಯದ ನಂತರ ಆರೋಪ ಮಾಡಿತ್ತು.

ಐಸಿಸಿ ಯಾವಾಗಲೂ ಭಾರತ ಕ್ರಿಕೆಟ್‌ನತ್ತ ಒಲವು ತೋರುತ್ತಿದೆ
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಭಿಮಾನಿಗಳು ಕೂಡ ಅಂಪೈರ್‌ಗಳು ಪಿಚ್‌ನ ಹಸಿ ಪರಿಸ್ಥಿತಿಗಳನ್ನು ನಿರ್ಲಕ್ಷಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಭಾರತವು ಕಠಿಣ ಪರಿಸ್ಥಿತಿಯಲ್ಲಿದೆ ಎಂಬ ಕಾರಣಕ್ಕಾಗಿ ಭಾರೀ ಮಳೆಯ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು ಎಂದು ಟೀಕಿಸುತ್ತಿದ್ದಾರೆ.
ಆದಾಗ್ಯೂ, ಈ ಎಲ್ಲಾ ಆರೋಪಗಳು ಕೇವಲ ಅಭಿಪ್ರಾಯಗಳಾಗಿವೆ. ಏಕೆಂದರೆ ಈ ಪಂದ್ಯಗಳಲ್ಲಿ ಮ್ಯಾಚ್ ರೆಫರಿಗಳು ಅಂತಹ ಯಾವುದೇ ಸಮಸ್ಯೆಯನ್ನು ವ್ಯಕ್ತಪಡಿಸಲಿಲ್ಲ. ಆದರೂ, ಐಸಿಸಿ ಯಾವಾಗಲೂ ಭಾರತ ಕ್ರಿಕೆಟ್‌ನತ್ತ ಒಲವು ತೋರುತ್ತಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಅತ್ಯುತ್ತಮ ಅಂಪೈರ್ ಪ್ರಶಸ್ತಿಗಳನ್ನು ಕೊಡಬೇಕು
"ಮೈದಾನವು ಎಷ್ಟು ತೇವವಾಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಆದರೆ ಐಸಿಸಿ ಭಾರತದತ್ತ ಒಲವು ತೋರುತ್ತಿದೆ. ಅವರು ಭಾರತವನ್ನು ಯಾವುದೇ ಬೆಲೆಯಲ್ಲಿ ಸೆಮಿಫೈನಲ್‌ಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ. ಅಂಪೈರ್‌ಗಳು ಸಹ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನಿರ್ವಹಿಸಿದ ರೀತಿಗೆ ಅತ್ಯುತ್ತಮ ಅಂಪೈರ್ ಪ್ರಶಸ್ತಿಗಳನ್ನು ಕೊಡಬೇಕು," ಎಂದು ಶಾಹಿದ್ ಅಫ್ರಿದಿ ಪಾಕಿಸ್ತಾನಿ ಸುದ್ದಿ ವಾಹಿನಿಯ ಸಾಮಾ ಟಿವಿಗೆ ತಿಳಿಸಿದ್ದಾರೆ.
ನವೆಂಬರ್ 3, ಗುರುವಾರದಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ದೊಡ್ಡ ವೇದಿಕೆಯಲ್ಲಿ ಐಸಿಸಿಗೆ ದೂರು ನೀಡುವುದಾಗಿ ಹೇಳಿದೆ.

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ದೊಡ್ಡ ಅಂತರದ ಗೆಲುವು ಅತ್ಯಗತ್ಯ
ಮೆನ್ ಇನ್ ಬ್ಲೂ ವಿರುದ್ಧ ಸೋತರೂ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿಲ್ಲ. ಅವರ ಕೊನೆಯ ಸೂಪರ್ 12 ಪಂದ್ಯವು ಅಡಿಲೇಡ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 33 ರನ್‌ಗಳಿಂದ (ಡಿಎಲ್‌ಎಸ್ ವಿಧಾನ) ಸೋಲಿಸಿದ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.
ಇನ್ನು ಭಾರತ ತಂಡವು ಭಾನುವಾರ (ನವೆಂಬರ್ 6) ತನ್ನ ಕೊನೆಯ ಗ್ರೂಪ್ 2ರ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದರೂ ಸೆಮಿಫೈನಲ್ ದಾರಿಯ ಒತ್ತಡದಲ್ಲಿ. ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದರೆ ಮತ್ತು ಭಾರತ ಸೋತರೆ ಮೆನ್ ಇನ್ ಬ್ಲೂ ಪಂದ್ಯಾವಳಿಯಿಂದ ಹೊರಗುಳಿಯವ ಸಾಧ್ಯತೆಯೂ ಇದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ದೊಡ್ಡ ಅಂತರದ ಗೆಲುವು ಅತ್ಯಗತ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications