Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಮಾಡಿದ ಕೊಹ್ಲಿ, ಅತಿ ಹೆಚ್ಚು ರನ್ ಕಲೆಹಾಕಿದ ವಿರಾಟ್ !

Virat kohli

ತನ್ನ ನೆಚ್ಚಿನ ಅಡಿಲೇಡ್ ಓವಲ್‌ ಮೈದಾನದಲ್ಲಿ ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆಧಾರವಾಗುವುದಲ್ಲದೆ ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ ಕೇವಲ 2ರನ್‌ಗೆ ಔಟಾದ ಬಳಿಕ ಕೆ.ಎಲ್ ರಾಹುಲ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ 16 ರನ್‌ಗಳನ್ನು ದಾಖಲಿಸುತ್ತಿದ್ದಂತೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಶ್ರೀಲಂಕಾದ ಲೆಜೆಂಡರಿ ಬ್ಯಾಟರ್ ಮಹೇಲಾ ಜಯವರ್ಧನೆ ದಾಖಲೆ ಮುರಿದಿದ್ದಾರೆ.

ಕೊಹ್ಲಿ ಅಬ್ಬರಕ್ಕೆ ಜಯವರ್ಧನೆ ರೆಕಾರ್ಡ್ ಬ್ರೇಕ್

ಕೊಹ್ಲಿ ಅಬ್ಬರಕ್ಕೆ ಜಯವರ್ಧನೆ ರೆಕಾರ್ಡ್ ಬ್ರೇಕ್

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ್ದ ರೆಕಾರ್ಡ್‌ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೆಸರಿನಲ್ಲಿತ್ತು. ಆದ್ರೆ ಬಾಂಗ್ಲಾ ವಿರುದ್ಧ ಪಂದ್ಯಕ್ಕೂ ಮುನ್ನ ವಿರಾಟ್‌ಗೆ ಈ ದಾಖಲೆ ಮುರಿಯಲು ಕೇವಲ 16 ರನ್‌ಗಳಷ್ಟೇ ಬಾಕಿ ಉಳಿದಿತ್ತು. ವಿರಾಟ್ ಕ್ರೀಸ್‌ಗಿಳಿದ ಕೆಲವೇ ನಿಮಿಷಗಳಲ್ಲಿ ಜಯವರ್ಧನೆ ದಾಖಲೆ ಬ್ರೇಕ್ ಆಗಿದೆ.

ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಒಟ್ಟಾರೆ 1016ರನ್ ಕಲೆಹಾಕಿದ್ದರು. ಆದ್ರೆ ಕೊಹ್ಲಿ ಈ ದಾಖಲೆ ಮುರಿದಿದ್ದಲ್ಲದೆ ಕೇವಲ 23 ಇನ್ನಿಂಗ್ಸ್‌ನಲ್ಲಿ ದಾಖಲೆಯ 85ರ ಬ್ಯಾಟಿಂಗ್ ಸರಾಸರಿಯಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

37 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ,

37 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ,

ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಶತಕ ದಾಖಲಿಸಿದ ಅಡಿಲೇಡ್‌ ಗ್ರೌಂಡ್‌ನಲ್ಲಿ ವಿರಾಟ್ ಅಬ್ಬರದ ಆಟವಾಡಿದ್ರು. 37 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಕೊಹ್ಲಿ 44 ಎಸೆತಗಳಲ್ಲಿ 64 ರನ್ ದಾಖಲಿಸಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ವಿರಾಟ್ ಕೊಹ್ಲಿ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಮೂರನೇ ಅರ್ಧಶತಕ ದಾಖಲಿಸಿದ್ದಾರೆ.

ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದ ಕೆ.ಎಲ್ ರಾಹುಲ್ 32 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು. ಇವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡಿತ್ತು. ಈ ಇಬ್ಬರು ಬ್ಯಾಟರ್‌ಗಳ ನೆರವಿನಿಂದ ಟೀಂ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿದ್ದು, ಎದುರಾಳಿಗೆ 185 ರನ್ ಗುರಿ ನೀಡಿದೆ.

ಯಾವುದೇ ತಂಡವನ್ನ ಹಗುರವಾಗಿ ಪರಿಗಣಿಸುವುದಿಲ್ಲ: ಬಾಂಗ್ಲಾ ವಿರುದ್ಧ ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್‌ ಹೇಳಿಕೆ

ICC ಟೂರ್ನಿಯಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿರುವ ಕೊಹ್ಲಿ

ICC ಟೂರ್ನಿಯಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿರುವ ಕೊಹ್ಲಿ

ICC ಟೂರ್ನಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ದಾಖಲೆಯನ್ನ ಸಹ ಹೊಂದಿದ್ದಾರೆ. ಅಲ್ಲದೆ ಈಗಾಗಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ದಾಖಲೆಯನ್ನ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ಐಸಿಸಿ ಟೂರ್ನಿಗಳಲ್ಲಿ 61 ಪಂದ್ಯಗಳನ್ನ ಆಡಿದ್ದು 49.43ರ ಸರಾಸರಿಯಲ್ಲಿ 2719 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ 16 ಅರ್ಧಶತಕ ಒಳಗೊಂಡಿದ್ದು, ವೈಯಕ್ತಿಕ ಗರಿಷ್ಠ 152ರನ್ ಕಲೆಹಾಕಿದ್ದಾರೆ.

ಆದ್ರೆ ವಿರಾಟ್ ಕೊಹ್ಲಿ 2 ಶತಕ ಹಾಗೂ 24 ಅರ್ಧಶತಕ ದಾಖಲಿಸುವ ಮೂಲಕ ಸಚಿನ್ ಹೆಸರಲ್ಲಿದ್ದ 23 ಬಾರಿ 50+ ಸ್ಕೋರ್ ದಾಖಲೆಗಿಂತ ಬಹಳ ಮುಂದೆ ಸಾಗಿದ್ದಾರೆ.

Story first published: Wednesday, November 2, 2022, 15:35 [IST]
Other articles published on Nov 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+