Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ನ ಅತಿ ಹೆಚ್ಚು ಮೌಲ್ಯಯುತ ಆಟಗಾರ ಈತನೇ ಎಂದ ಮಾಜಿ ಕ್ರಿಕೆಟಿಗ

Habibul Bashar

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ 1 ಮತ್ತು 2ರಲ್ಲಿ ಸೆಮಿಫೈನಲ್‌ಗಾಗಿ ಇತ್ತಂಡಗಳು ಕಾದಾಟ ನಡೆಸುತ್ತಿವೆ. ಟೀಂ ಇಂಡಿಯಾ ಕೂಡ ಗ್ರೂಪ್‌ 2ರಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ಸೆಮಿಫೈನಲ್ ಹಾದಿಯನ್ನ ಖಚಿತಪಡಿಸಿಕೊಳ್ಳಲು ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಹಂಬಲದಲ್ಲಿದೆ.

ಟೀಂ ಇಂಡಿಯಾ ಪರ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ದಾಖಲಿಸುವ ಮೂಲಕ ಅಬ್ಬರಿಸಿದ್ದಾರೆ. ಹೀಗಾಗಿಯೇ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಕಿಂಗ್ ಕೊಹ್ಲಿ ಎಂದು ಬಾಂಗ್ಲಾದೇಶದ ಮಾಜಿ ನಾಯಕ ಹಬೀಬುಲ್ ಬಶರ್ ಹೇಳಿದ್ದಾರೆ.

ಭಾರತದ ಎರಡೂ ಪಂದ್ಯ ಗೆಲುವಿನಲ್ಲಿ ಕೊಹ್ಲಿಯೇ ಆಧಾರ!

ಭಾರತದ ಎರಡೂ ಪಂದ್ಯ ಗೆಲುವಿನಲ್ಲಿ ಕೊಹ್ಲಿಯೇ ಆಧಾರ!

ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸೇರಿದಂತೆ, ಕಳೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 56ರನ್‌ಗಳ ಗೆಲುವು ಸಾಧಿಸಿತು. ಭಾರತದ ಈ ಎರಡೂ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅತ್ಯಂತ ಪ್ರಮುಖ ಪಾತ್ರವಹಿಸಿತು.

ಮೊದಲ ಪಂದ್ಯದಲ್ಲಿ ವಿರಾಟ್ 53 ಎಸೆತಗಳಲ್ಲಿ ಅಜೇಯ 82ರನ್‌ ಕಲೆಹಾಕಿ ಮ್ಯಾಚ್ ವಿನ್ನರ್ ಆಗಿ ಅಬ್ಬರಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 62ರನ್‌ ಕಲೆಹಾಕುವ ಮೂಲಕ ಭಾರತದ ಗೆಲುವಿಗೆ ಕಾರಣರಾದ್ರು. ಹೀಗಾಗಿ ವಿರಾಟ್ ಟೀಂ ಇಂಡಿಯಾದ ಬ್ಯಾಟಿಂಗ್ ನೊಗ ಎಂದ್ರೆ ತಪ್ಪಾಗಲಾರದು.

IND vs SA: ಟಿ20 ವಿಶ್ವಕಪ್‌ನಲ್ಲಿ ಬೃಹತ್ ದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಬೇಕು 28 ರನ್‌!

ವಿರಾಟ್ ಕೊಹ್ಲಿ T20 ವಿಶ್ವಕಪ್‌ನ MVP ಎಂದ ಹಬೀಬುಲ್ ಬಶರ್

ವಿರಾಟ್ ಕೊಹ್ಲಿ T20 ವಿಶ್ವಕಪ್‌ನ MVP ಎಂದ ಹಬೀಬುಲ್ ಬಶರ್

ಎರಡು ಪಂದ್ಯಗಳಲ್ಲಿ 144 ರನ್ ಕಲೆಹಾಕಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದಿರುವುದು ಅವರ ಶ್ರೇಷ್ಟತೆಯನ್ನು ಬಿಂಬಿಸುತ್ತದೆ. ಬಾಂಗ್ಲಾ ಮಾಜಿ ನಾಯಕ ಹಬೀಬುಲ್ ವಿರಾಟ್ ಕೊಹ್ಲಿಯನ್ನು ಅತ್ಯಂತ ಮೌಲ್ಯಯುತ ಆಟಗಾರ(MVP) ಎಂದು ಕರೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಆದ್ರೆ ಟೂರ್ನಿಗೂ ಮುನ್ನ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಈ ಸ್ಥಾನ ಪಡೆಯಬಹುದು ಎಂದು ಹಬೀಬುಲ್ ಭಾವಿಸಿದ್ರಂತೆ. ಆದ್ರೆ ಬಟ್ಲರ್ ಆಡಿರುವ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡಕ್ಕೆ ನೆರವಾಗುವಲ್ಲಿ ವಿಫಲರಾಗಿದ್ದು, ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ಗೆ ಮರಳಿದ್ದಾರೆ.

ವಿಂಡೀಸ್ ಲೆಜೆಂಡ್ ಶಿವನಾರಾಯಣ್ ಚಂದ್ರಪಾಲ್ ಮಗನಿಗೆ ಟೆಸ್ಟ್ ಸ್ಕ್ವಾಡ್‌ನಲ್ಲಿ ಸ್ಥಾನ

ವಿರಾಟ್‌ ಕೊಹ್ಲಿ ಚಿನ್ನದಂತಹ ಫಾರ್ಮ್‌ನಲ್ಲಿದ್ದಾರೆ!

ವಿರಾಟ್‌ ಕೊಹ್ಲಿ ಚಿನ್ನದಂತಹ ಫಾರ್ಮ್‌ನಲ್ಲಿದ್ದಾರೆ!

ಹೌದು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೂ ಮುನ್ನ ಸಾಕಷ್ಟು ಸಮಯ ಫಾರ್ಮ್ ವೈಫಲ್ಯ ಎದುರಿಸಿದ್ರು. ಆದ್ರೆ ಪ್ರಸ್ತುತ ಸನ್ನಿವೇಶವನ್ನು ನೋಡುವುದಾದ್ರೆ ಕಿಂಗ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

''ಟೂರ್ನಮೆಂಟ್‌ನಲ್ಲಿ ಅನೇಕ ಒಳ್ಳೆಯ ಆಟಗಾರರಿದ್ದಾರೆ. ಆದ್ರೆ ಯಾರು ಬೆಸ್ಟ್ ಫಾರ್ಮ್‌ನಲ್ಲಿದ್ದಾರೆ ಎಂದು ಗುರುತಿಸುವುದು ಮುಖ್ಯ. ಕೆಲವೊಮ್ಮೆ ಬೆಸ್ಟ್ ಬ್ಯಾಟರ್‌ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಟೂರ್ನಮೆಂಟ್ ಪ್ರಾರಂಭಕ್ಕೂ ಮುನ್ನ ಜಾಸ್ ಬಟ್ಲರ್ MVP ಆಟಗಾರನಾಗಬಹುದು ಎಂದು ಭಾವಿಸಿದ್ದೆನು. ಆದ್ರೆ ಆತ ರನ್ ಸ್ಕೋರ್ ಮಾಡುತ್ತಿಲ್ಲ'' ಎಂದು ಹಬೀಬುಲ್ ಬಶರ್ 'ಬ್ಯಾಟ್ ಬ್ರಿಕ್ಸ್‌7' ಆಯೋಜನೆಯ 'ರನ್‌ ಕೀ ರಣನೀತಿ'ಯಲ್ಲಿ ತಿಳಿಸಿದ್ದಾರೆ.

''' ವಿರಾಟ್ ಕೊಹ್ಲಿ ಅದ್ಭುತ ಟಚ್‌ನಲ್ಲಿದ್ದಾರೆ. ಆತ ತನ್ನ ಟಾಪ್ ಫಾರ್ಮ್‌ಗೆ ಮರಳಿದ್ದಾನೆ. ಟೀಂ ಇಂಡಿಯಾ ಮುನ್ನಡೆದರೆ , ನನ್ನ ಪ್ರಕಾರ ವಿರಾಟ್ ಕೊಹ್ಲಿ ಇಡೀ ಟೂರ್ನಿಯ ಅತ್ಯಂತ ಮೌಲ್ಯಯುವ ಆಟಗಾರನಾಗಿ ಹೊರಹೊಮ್ಮಲಿದ್ದಾರೆ'' ಎಂದು ಅವರು ಮಾತಿಗೆ ಸೇರಿಸಿದ್ದಾರೆ.

ಗಮನಿಸಬೇಕಾದ ವಿಚಾರ ಏನಂದ್ರೆ ವಿರಾಟ್ ಕೊಹ್ಲಿ 2014 ಮತ್ತು 2016ರ ಟಿ20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದಾರೆ.

Story first published: Sunday, October 30, 2022, 13:26 [IST]
Other articles published on Oct 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+