IND vs PAK: ಈತನ ಮೇಲೆ ದಾಳಿ ಮಾಡಿದರೆ ಪಾಕ್ ಗಾಬರಿಯಾಗುತ್ತದೆ; ತಂತ್ರ ಬಹಿರಂಗಪಡಿಸಿದ ಕೊಹ್ಲಿ

ಭಾನುವಾರ, ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ನಡೆದ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ರೋಚಕ ಸಾಧಿಸಿದೆ.
ಭಾರತವನ್ನು ಗೆಲ್ಲಿಸಲು ಕ್ರೀಸ್‌ಗೆ ಅಂಟಿಕೊಂಡಿದ್ದ ವಿರಾಟ್ ಕೊಹ್ಲಿ, ಪಾಕಿಸ್ತಾನದ ವಿರುದ್ಧ ತಾವು ಹೆಣೆದಿದ್ದ ರಹಸ್ಯ ತಂತ್ರವನ್ನು ಬಹಿರಂಗಪಡಿಸಿದರು. ಹ್ಯಾರಿಸ್ ರೌಫ್ ಬೌಲಿಂಗ್ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನ ತಂಡ ಭಯಭೀತರಾಗಲಿದೆ ಎಂದು ಹಾರ್ದಿಕ್ ಪಾಂಡ್ಯಗೆ ತಾನು ಹೇಳಿರುವುದಾಗಿ ಭಾರತ ತಂಡದ ಮಾಜಿ ನಾಯಕ ವಿವರಿಸಿದ್ದಾರೆ.
"ಈ ಭಾವನೆಯನ್ನು ಹೇಗೆ ವಿವರಿಸಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ಕೆಲವು ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವುದಾದರೆ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ಗೆ ಬಂದಾಗ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು," ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ವಿರಾಟ್ ಕೊಹ್ಲಿ ಹೇಳಿದರು.

ಪಾಕಿಸ್ತಾನವು ಭಯಭೀತರಾಗಲು ಪ್ರಾರಂಭಿಸುತ್ತದೆ
"ನಾನು ಇನ್ನಿಂಗ್ಸ್‌ನಲ್ಲಿ ಹೋಗುತ್ತಿದ್ದೆ, ಸ್ಕೋರ್‌ಬೋರ್ಡ್ ಚಲಿಸುವಂತೆ ಮಾಡಲು ನಾನು ಸ್ಟ್ರೈಕ್ ಅನ್ನು ತಿರುಗಿಸಿ ಅಲ್ಲಿ ಇಲ್ಲಿ ರನ್ ಗಳಿಸುತಲಿದ್ದೆ. ನಂತರ ಸರಿಯಾದ ಸಮಯದಲ್ಲಿ ಬೌಂಡರಿಗಳು ಬರಬೇಕೆಂದು ನಾನು ಕಂಡುಕೊಂಡೆ. ಆದರೆ ಇನ್ನೂ ಮೂರು ಓವರ್‌ಗಳಲ್ಲಿ 50 ಬೇಕಿತ್ತು ಮತ್ತು ಹ್ಯಾರಿಸ್ ರೌಫ್ ಒಂದು ಓವರ್ ಬಾಕಿ ಇತ್ತು, ಇದು ಸವಾಲಿನದ್ದಾಗಿದೆ ಎಂದು ನಾನು ಭಾವಿಸಿದೆ".
"ನಾನು ಹಾರ್ದಿಕ್ ಪಾಂಡ್ಯಗೆ ಒಂದು ವಿಷಯ ಹೇಳಿದೆ, ನಾವು ಹ್ಯಾರಿಸ್ ರೌಫ್ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನವು ಭಯಭೀತರಾಗಲು ಪ್ರಾರಂಭಿಸುತ್ತದೆ. ಎಂಟು ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿದ್ದಾಗ, ನಾನು ಎರಡು ಸಿಕ್ಸರ್‌ಗಳನ್ನು ಗಳಿಸಲು ನನಗೆ ನಾನೇ ಅಂದುಕೊಂಡೆ, ಇಲ್ಲದಿದ್ದರೆ ನಾವು ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೇವು," ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಅರ್ಶ್‌ದೀಪ್ ಸಿಂಗ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು
ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಅರ್ಶ್‌ದೀಪ್ ಸಿಂಗ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಭಾರತದ ಎಡಗೈ ವೇಗದ ಬೌಲರ್ ತನ್ನ ಮೊದಲ ಎಸೆತದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದರು. 23 ವರ್ಷ ವಯಸ್ಸಿನ ಅರ್ಶ್‌ದೀಪ್ ಸಿಂಗ್ ನಂತರ ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.
ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋದ ಪಾಕಿಸ್ತಾನ ತಂಡ ಅಂತಿಮವಾಗಿ 20 ಓವರ್‌ಗಳಲ್ಲಿ 159/8 ಗೆ ನಿರ್ಬಂಧಗೊಂಡಿತು. ಅರ್ಶ್‌ದೀಪ್ ಸಿಂಗ್ ಒಂದೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಇಬ್ಬರೂ ಆರಂಭಿಕರನ್ನು ಔಟ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು.

ಭಾರತ ತಂಡವನ್ನು ರಕ್ಷಿಸಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ
ಇದಕ್ಕುತ್ತರವಾಗಿ 160 ರನ್‌ಗಳ ಗುರಿ ಬೆನ್ನತ್ತಿದ ಭಾರತ ಹೀನಾಯ ಆರಂಭ ಕಂಡಿತು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರನ್ನು ಆರಂಭದಲ್ಲೇ ಔಟ್ ಮಾಡುವ ಮೂಲಕ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಪಾಕಿಸ್ತಾನಕ್ಕೆ ಪರಿಪೂರ್ಣ ಆರಂಭ ನೀಡಿದರು.
ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಿಧಾನವಾಗಿ ರನ್ ಗಳಿಸುತ್ತಾ ಭಾರತವನ್ನು ರಕ್ಷಿಸಿದರು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಪಾಕಿಸ್ತಾನದ ಬೌಲರ್‌ಗಳನ್ನು ದಂಡಿಸಿದರು. ಇನ್ನೊಂದೆಡೆ ಮಧ್ಯದಲ್ಲಿ ತೊಳಲಾಡುತ್ತಿದ್ದ ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40 ರನ್ ಗಳಿಸಿ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು.

ನಾಲ್ಕನೇ ಎಸೆತವು ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ
ಅಂತಿಮ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿದ್ದಾಗ ಮೊಹಮ್ಮದ್ ನವಾಜ್ ಅವರು ಹಾರ್ದಿಕ್ ಪಾಂಡ್ಯ ವಿಕೆಟ್ ಕಿತ್ತು ಶಾಕ್ ನೀಡಿದರು. ನಂತರ ನಾಲ್ಕನೇ ಎಸೆತವು ಸಿಕ್ಸರ್‌ಗೆ ಹೋದಾಗ, ಕೊಹ್ಲಿಗೆ ಹೆಚ್ಚಿನ ಫುಲ್-ಟಾಸ್ ಆಗಿದ್ದಕ್ಕಾಗಿ ನೋ ಬಾಲ್ ಎಂದು ಅಂಪೈರ್ ಸೂಚಿಸಿದರು. ಮೊಹಮ್ಮದ್ ನವಾಜ್ ನಂತರ ವೈಡ್ ಬೌಲ್ ಮಾಡಿದರು, ಅದರ ನಂತರ ಭಾರತವು ಫ್ರೀ ಹಿಟ್‌ನಲ್ಲಿ ಮೂರು ರನ್ ಗಳಿಸಿತು.
ಭಾರತಕ್ಕೆ ಇಷ್ಟು ಎಸೆತಗಳಲ್ಲಿ ಎರಡು ರನ್‌ಗಳ ಅಗತ್ಯವಿದ್ದಾಗ ವೈಡ್ ಬೌಲ್ ಮಾಡಿ ಮೊಹಮ್ಮದ್ ನವಾಜ್ ಮತ್ತೆ ಎಡವಿದರು. ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿದ್ದಾಗ ರವಿಚಂದ್ರನ್ ಅಶ್ವಿನ್ ಸಿಂಗಲ್‌ಗಾಗಿ ಲಾಂಗ್ ಆಫ್‌ನಲ್ಲಿ ಬಾರಿಸಿದರು. ಇಷ್ಟರಲ್ಲಾಗಲೇ ಭಾರತದ ಡಗೌಟ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು ಮತ್ತು ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications