Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದಿದ್ರೆ, ಐಪಿಎಲ್ ಏಕೆ ಬೇಕು?: ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಕಿಡಿ

Team india

ಅಡಿಲೇಡ್ ಓವಲ್‌ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ 2022ರ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಈ ಬಾರಿಯು ವಿಶ್ವಕಪ್‌ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲಗೊಂಡಿತು. ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ, ಬೌಲಿಂಗ್‌ನಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ 10 ವಿಕೆಟ್‌ಗಳ ಸೋಲನ್ನ ಕಂಡಿದೆ.

ಭಾರತದ ಈ ಕೆಟ್ಟ ಸೋಲಿನ ಬಳಿಕ ಟೀಕಾಕಾರರು, ಮಾಜಿ ಕ್ರಿಕೆಟಿಗರು ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆ, ಪ್ರದರ್ಶನ ಹಾಗೂ ವಿಶ್ವಕಪ್‌ನ ಸ್ಕ್ವಾಡ್ ಕುರಿತಾಗಿ ಅಪಸ್ವರ ಎತ್ತಿದ್ದಾರೆ. ಐಪಿಎಲ್‌ನ ಕಳೆದ ಸೀಸನ್‌ನ ಲೀಡಿಂಗ್ ವಿಕೆಟ್ ಟೇಕರ್ ಯುಜವೇಂದ್ರ ಚಹಾಲ್‌ಗೆ ಬೆಂಚ್‌ನಲ್ಲೇ ಇರಿಸಿದ್ದರ ಕುರಿತಾಗಿ, ರೋಹಿತ್ ಹಾಗೂ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕುರಿತು ಕೆಂಡಕಾರಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಓಪನರ್ಸ್, ಐಸಿಸಿ ವಿಶ್ವಕಪ್‌ನಲ್ಲಿ ಕಂಡಂತಹ ಕಳಪೆ ಸ್ಟ್ರೈಕ್‌ರೇಟ್‌!

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಓಪನರ್ಸ್, ಐಸಿಸಿ ವಿಶ್ವಕಪ್‌ನಲ್ಲಿ ಕಂಡಂತಹ ಕಳಪೆ ಸ್ಟ್ರೈಕ್‌ರೇಟ್‌!

ಟೀಂ ಇಂಡಿಯಾ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಹಿಂದೆಂದೂ ಕಾಣದ ಕಳಪೆ ಆರಂಭವನ್ನ ಪ್ರದರ್ಶಿಸಿತು. ಪವರ್‌ಪ್ಲೇ ಓವರ್‌ಗಳಲ್ಲಿ ವೇಗವಾಗಿ ರನ್‌ ಕಲೆಹಾಕಲು ವಿಫಲಗೊಂಡ ಭಾರತದ ಓಪನರ್‌ಗಳಿಬ್ಬರೂ ವೇಗವಾಗಿ ರನ್ ಕಲೆಹಾಕಲು ವಿಫಲಗೊಂಡರು.

ರನ್‌ಗಳಿಸಲು ಪರದಾಡಿದ ಕೆ.ಎಲ್ ರಾಹುಲ್, ಜಿಂಬಾಬ್ವೆ ವಿರುದ್ಧ ಅರ್ಧಶತಕ ದಾಖಲಿಸಿದ್ದೇ ಹೆಚ್ಚು. ರೋಹಿತ್ ಶರ್ಮಾ ಕೂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಂದು ಬಾರಿ ಅರ್ಧಶತಕದ ಗಡಿದಾಟಿದ್ರು. ಆದ್ರೆ ಹಿಟ್‌ಮ್ಯಾನ್ ಕೂಡ ಕಳಪೆ ರನ್‌ರೇಟ್‌ನೊಂದಿಗೆ ಇಡೀ ಟೂರ್ನಮೆಂಟ್‌ನಲ್ಲಿ ಮಿಂಚುವಲ್ಲಿ ವಿಫಲರಾದರು.

ಸೆಮಿಫೈನಲ್‌ನಲ್ಲಿ ಆತನನ್ನು ನಿರ್ಲಕ್ಷಿಸಿದ್ದೇ ಭಾರತದ ಸೋಲಿಗೆ ಕಾರಣ; ವೆಂಕಟೇಶ್ ಪ್ರಸಾದ್

ಎದುರಾಳಿಯ ಒಂದು ವಿಕೆಟ್ ಪಡೆಯದಂತಹ ಬೌಲಿಂಗ್ ದೌರ್ಬಲ್ಯತೆಯೇ?

ಎದುರಾಳಿಯ ಒಂದು ವಿಕೆಟ್ ಪಡೆಯದಂತಹ ಬೌಲಿಂಗ್ ದೌರ್ಬಲ್ಯತೆಯೇ?

ಟೀಂ ಇಂಡಿಯಾ ಪರ ಅನುಭವಿ ಬೌಲರ್‌ಗಳೇನು ಕಮ್ಮಿ ಇರಲಿಲ್ಲ. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿರಂತಹ ಟಿ20 ಅನುಭವಿಗಳ ಜೊತೆಗೆ ಅರ್ಷ್‌ದೀಪ್ ಸಿಂಗ್‌ನಂತಹ ಯುವ ಬೌಲರ್‌, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್‌ ಇಲೆವೆನ್‌ನಲ್ಲಿದ್ದರೂ ಭಾರತ ಒಂದು ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿತು. ಆಂಗ್ಲರ ಎದುರು 10 ವಿಕೆಟ್‌ಗಳ ಹೀನಾಯ ಸೋಲನ್ನ ಕಂಡಂತಹ ಭಾರತ ಬೌಲಿಂಗ್ ವಿಭಾಗದ ಕುರಿತು ಸಾಕಷ್ಟು ಪ್ರಶ್ನೆಗಳು ಎದುರಾಗಿವೆ.

ಟಿ20 ವಿಶ್ವಕಪ್‌ಗೂ ಮುನ್ನ ಒಂದು ವರ್ಷದಲ್ಲಿ ಯಾವುದೇ ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿಗೆ ಸ್ಕ್ವಾಡ್‌ನಲ್ಲಿ ಅವಕಾಶ ನೀಡಿದ್ದರ ಕುರಿತು ಈಗ ಮತ್ತೆ ಚರ್ಚೆ ಆರಂಭಗೊಂಡಿದೆ.

ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್

ಐಸಿಸಿ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದಿದ್ರೆ, ಐಪಿಎಲ್ ಆಡಿಸಿ ಏನು ಪ್ರಯೋಜನ?

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದು ದಶಕವೇ ಕಳೆದು ಹೋಗಿದೆ. ಮಹೇಂದ್ರ ಸಿಂಗ್ ಧೋನಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಹಾಗೂ ಈಗ ರೋಹಿತ್ ಶರ್ಮಾ ಕೂಡ ವಿಫಲರಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಗಳು ಐಪಿಎಲ್‌ನಂತಹ ದೊಡ್ಡ ಮಟ್ಟದ ಟಿ20 ಲೀಗ್ ಆಡಿಸಿದ್ರೂ ಟಿ20 ವಿಶ್ವಕಪ್‌ ಗೆಲ್ಲದ ಭಾರತವನ್ನು ದೂಷಿಸಿದ್ದಾರೆ. ಐಪಿಎಲ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತೇವೆ, ಭಾರತೀಯ ಕ್ರಿಕೆಟ್ ಬೆಳೆಯುತ್ತದೆ ಎಂದ ಮೇಲೆ ಐಸಿಸಿ ಟ್ರೋಫಿಯನ್ನು ಗೆಲ್ಲಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನೆಟ್ಟಿಗರು ಟ್ವಿಟ್ಟರ್‌ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಬಿಸಿಸಿಐ ಕುರಿತು ಕಿಡಿಕಾರಿದ್ದಾರೆ. ಐಪಿಎಲ್‌ನಲ್ಲಿ ಅಷ್ಟೊಂದು ಪ್ರತಿಭೆಗಳಿದ್ದರೂ ಸರಿಯಾದ ಸ್ಕ್ವಾಡ್‌ ಕಳುಹಿಸಲು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ವಿಫಲಗೊಂಡಿದೆ. ಐಸಿಸಿ ಟ್ರೋಫಿ ಗೆಲ್ಲದ ಟೀಂ ಇಂಡಿಯಾ ಮೇಲಿನ ಸಿಟ್ಟು ಐಪಿಎಲ್ ಅಸ್ತಿತ್ವವನ್ನು ಪ್ರಶ್ನಿಸಿದೆ.

Story first published: Friday, November 11, 2022, 14:10 [IST]
Other articles published on Nov 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+