For Quick Alerts
ALLOW NOTIFICATIONS  
For Daily Alerts
 

India vs Pakistan: ಈ ತಂಡ ಗೆಲ್ಲಲಿದೆ ಎಂದು 5.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ ಕೆನಡಾ ಗಾಯಕ ಡ್ರೇಕ್

ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಸೆಣಸಾಡಲಿವೆ.

ಟಿ20 ವಿಶ್ವಕಪ್‌ನಲ್ಲಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ಜ್ವರವು ಕೇವಲ ಏಷ್ಯನ್ನರಿಗೆ ಮಾತ್ರವಲ್ಲ, ಈ ಕ್ರೀಡಾ ಸಂಭ್ರಮವು ಕೆನಡಾದ ಸೆಲೆಬ್ರಿಟಿಗಳನ್ನು ಸಹ ಆವರಿಸಿದೆ.

T20 World Cup 2024 Canadian Singer Drake Bets Rs 5 4 crore On India vs Pakistan Match

ಈ ಬಾರಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯುತ್ತಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೊಸ ಶ್ರೇಣಿಯ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸಿದೆ.

ಇನ್ನು ಭಾರತದಲ್ಲಿ ಬೆಟ್ಟಿಂಗ್ (ಬಾಜಿ) ಕಟ್ಟುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದರೆ ವಿದೇಶಗಳಲ್ಲಿ ಬೆಟ್ಟಿಂಗ್ ಎನ್ನುವುದು ಅಧಿಕೃತವಾಗಿ ಚಾಲ್ತಿಯಲ್ಲಿದೆ.

ಇದೀಗ ಅವಧಿ ಮೀರಿದ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಕೆನಡಾದ ಖ್ಯಾತ ಗಾಯಕ ಡ್ರೇಕ್ ಅವರು ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲ್ಲಲಿದೆ 5.4 ಕೋಟಿ ರೂಪಾಯಿಗಳ ಬೆಟ್ಟಿಂಗ್ ಕಟ್ಟಿರುವುದಾಗಿ ಬಹಿರಂಗಪಡಿಸಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ vs ಪಾಕಿಸ್ತಾನ ಪೈಪೋಟಿ; ತಿಳಿದುಕೊಳ್ಳಬಹುದಾದ ಸಂಗತಿಗಳು

ಡ್ರೇಕ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ ಕಟ್ಟುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆಲ್ಲಲಿದೆ ಎಂದು ಬೆಟ್ಟಿಂಗ್‌ನಿಂದ 3.73 ಕೋಟಿ ರೂಪಾಯಿ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

Mashable India ಪ್ರಕಾರ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಾಪರ್ ಮತ್ತು ಗಾಯಕ ಡ್ರೇಕ್ ಅವರು ಶಾರುಖ್ ಖಾನ್ ಮಾಲೀಕತ್ವದ ತಂಡದ ಮೇಲೆ 2,50,000 ಯುಎಸ್ ಡಾಲರ್ ಬಾಜಿ ಕಟ್ಟಿದ್ದರು ಮತ್ತು ಬೆಟ್ಟಿಂಗ್ ಮೂಲಕ 1.7 ಕೋಟಿ ರೂಪಾಯಿ ಲಾಭ ಗಳಿಸಿದರು.

ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಡ್ರೇಕ್ 650,000 ಯುಎಸ್ ಡಾಲರ್ (5.4 ಕೋಟಿ ರೂಪಾಯಿ) ಬೃಹತ್ ಬೆಟ್ಟಿಂಗ್ ಕಟ್ಟಿದ್ದಾರೆ. ಭಾರತ ಗೆಲ್ಲುತ್ತದೆ ಎಂದು ಅವರು ಬೆಟ್ಟಿಂಗ್ ಕಟ್ಟಿದ್ದು, ಭಾರತ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆದ್ದರೆ 910,000 ಯುಎಸ್ ಡಾಲರ್ (7.6 ಕೋಟಿ ರೂಪಾಯಿ) ಪಡೆಯುತ್ತಾರೆ.

ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿರುವ ಸ್ಕ್ರೀನ್‌ಶಾಟ್ ಅನ್ನು ಡ್ರೇಕ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

T20 World Cup 2024 Canadian Singer Drake Bets Rs 5 4 crore On India vs Pakistan Match

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ, ಆಲ್‌ರೌಂಡರ್ ಇಮಾದ್ ವಾಸಿಮ್ ಅವರು ಆಡಲು ಫಿಟ್ ಆಗಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಭಾನುವಾರದ ಹಣಾಹಣಿಗೆ ಮುಂಚಿತವಾಗಿ ಪಾಕಿಸ್ತಾನ ತಂಡಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡಲಾಗಿದೆ.

ಇಮಾದ್ ವಾಸಿಮ್ ಅವರು ಪಾಕಿಸ್ತಾನ ತಂಡದ ಆರಂಭಿಕ ಪಂದ್ಯದಿಂದ ಹೊರಗುಳಿಯಬೇಕಾಯಿತು ಮತ್ತು ಡಲ್ಲಾಸ್‌ನಲ್ಲಿ ಯುಎಸ್ಎ ವಿರುದ್ಧ ಅವಮಾನಕರ ಸೋಲು ಅನುಭವಿಸಿತು.

ಸ್ಪಿನ್ ಆಲ್‌ರೌಂಡರ್ ಇಮಾದ್ ವಾಸಿಮ್ ಪಕ್ಕೆಲುಬಿನ ಗಾಯದಿಂದ ಇಂಗ್ಲೆಂಡ್‌ ವಿರುದ್ಧದ ಪಾಕಿಸ್ತಾನ ಟಿ20 ವಿಶ್ವಕಪ್-ಪೂರ್ವ ಸರಣಿಯ ಅಂತಿಮ ಪಂದ್ಯವನ್ನು ತಪ್ಪಿಸಿಕೊಂಡರು.

ಇನ್ನು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಅವರು 35 ವರ್ಷದ ಎಡಗೈ ಸ್ಪಿನ್ನರ್‌ಗೆ ಆಡಲು ಸಾಧ್ಯವಾಗುತ್ತದೆ ಎಂದು ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಅವರು ಲಭ್ಯರಾಗುತ್ತಾರೆ' ಎಂದು ಏಪ್ರಿಲ್‌ನಲ್ಲಿ ಪಾಕಿಸ್ತಾನ ತಂಡದ ಆಳ್ವಿಕೆಯನ್ನು ವಹಿಸಿಕೊಂಡ ದಕ್ಷಿಣ ಆಫ್ರಿಕಾದ ಆಟಗಾರ ಹೇಳಿದರು. ಇತರ ಆಟಗಾರರ ಫಿಟ್ನೆಸ್ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದ ಕಾರಣ, ಗ್ಯಾರಿ ಕರ್ಸ್ಟನ್ ಪಾಕಿಸ್ತಾನದ ಸಂಭಾವ್ಯ ತಂಡದ ಯಾವುದೇ ವಿವರಗಳನ್ನು ನೀಡಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನದ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಗೆಲುವಿನೊಂದಿಗೆ ಯುಎಸ್‌ಎ ವಿರುದ್ಧದ ಹೀನಾಯ ಸೋಲಿನ ನೋವಿನಿಂದ ಪುಟಿದೇಳಲು ಯಾರು ಮೈದಾನಕ್ಕಿಳಿದರೂ ಯಾವುದೇ ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ ಎಂದು ಕೋಚ್ ಹೇಳಿದರು.

Story first published: Sunday, June 9, 2024, 18:03 [IST]
Other articles published on Jun 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+