ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಗೆಲ್ಲು 148 ರನ್‌ಗಳ ಸವಾಲು ನೀಡಿದ ಅಫ್ಘಾನಿಸ್ತಾನ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಅದ್ಭುತವಾದ ಹೋರಾಟವನ್ನು ನೀಡಿದೆ. ಆರಂಭಿಕ ಆಘಾತದ ಮಧ್ಯೆಯೂ ಅಫ್ಘಾನಿಸ್ತಾನ ಪಾಕಿಸ್ತಾನದ ಬೌಲಿಂಗ್ ದಾಳಿಗೆ ಸಮರ್ಥ ಉತ್ತರ ನೀಡಿದ್ದು 147 ರನ್‌ಗಳನ್ನು ಗಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಉತ್ತಮ ಮೊತ್ತದ ಗುರಿಯನ್ನು ನಿಗದಿಪಡಿಸಿದೆ.
ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅಫ್ಘಾನಿಸ್ತಾನದ ಆರಂಭಿಕರು ನಾಯಕನ ನಿರ್ಧಾರವನ್ನು ಸಮರ್ಥಿಸುವ ಪ್ರದರ್ಶನ ನೀಡಲು ವಿಫಲವಾದರು. 7 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ 13 ರನ್‌ಗಳಿಸಿದ್ದಾಗ ಇಬ್ಬರು ಆರಂಭಿಕರನ್ನು ಕೂಡ ಕಳೆದುಕೊಂಡಿತು. ನಂತರ ಅಸ್ಘರ್ ಅಫ್ಘನ್ ಹಾಗೂ ಗರ್ಬಾಜ್ ಕೂಡ ಹೆಚ್ಚಿನ ರನ್‌ಗಳ ಕೊಡುಗೆ ನೀಡಲು ವಿಫಲವಾದರು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನ 39 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ನಂತರ ಬ್ಯಾಟಿಂಗ್‌ಗೆ ಇಳಿದ ಕರೀಮ್ ಜನತ್ 15 ರನ್ ಹಾಗೂ ನಜೀಬುಲ್ಲಾ 22 ರನ್‌ಗಳ ಕೊಡುಗೆ ನೀಡಿದರು. ನಂತರ 7ನೇ ವಿಕೆಟ್‌ಗೆ ಜೊತೆಯಾನ ನಾಯಕ ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನೈಬ್ ಜೋಡಿ ಅಫ್ಘಾನಿಸ್ತಾನ ತಂಡ ಗೌರವಯುತ ಮೊತ್ತ ಪೇರಿಸಲು ಕಾರಣವಾದರು. ಈ ಜೋಡಿ 43 ಎಸೆತಗಳಲ್ಲಿ 71 ರನ್‌ಗಳ ಅದ್ಭುತ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಅಫ್ಘಾನಿಸ್ತಾನ ತಂಡ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಲು ಶಕ್ತವಾಯಿತು. ನಾಯಕ ನಬಿ ಹಾಗೂ ನೈಬ್ ಇಬ್ಬರೂ ತಲಾ 35 ರನ್‌ಗಳ ಕೊಡುಗೆ ನೀಡಿದರು. ಅದರಲ್ಲೂ ಗುಲ್ಬದಿನ್ ನೈಬ್ 25 ಎಸೆತಗಳಲ್ಲಿ 35 ರನ್ ಬಾರಿಸಿ ಮಿಂಚಿದರು.
ಪಾಕಿಸ್ತಾನದ ಪರವಾಗಿ ಬೌಲಿಂಗ್‌ನಲ್ಲಿ ಇಮದ್ ವಾಸಿಮ್ 2 ವಿಕೆಟ್ ಪಡೆದು ಮಿಂಚಿದರೆ ಶಾಹೀನ್ ಅಫ್ರಿದಿ, ಇಮ್ದ್ ವಾಸಿಮ್, ಹ್ಯಾರಿಸ್ ರವೂಫ್, ಹಸನ್ ಅಲಿ ಹಾಗೂ ಶದಬ್ ಖಾನ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಪಾಕಿಸ್ತಾನ ಪ್ಲೇಯಿಂಗ್ XI : ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಬೆಂಚ್: ಮೊಹಮ್ಮದ್ ನವಾಜ್, ಹೈದರ್ ಅಲಿ, ಸರ್ಫರಾಜ್ ಅಹ್ಮದ್, ಮೊಹಮ್ಮದ್ ವಾಸಿಂ ಜೂನಿಯರ್
ಅಫ್ಘಾನಿಸ್ತಾನ ಪ್ಲೇಯಿಂಗ್ XI : ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಸ್ಗರ್ ಅಫ್ಘಾನ್, ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಮ್ ಜನತ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹ್ಮಾನ್
ಬೆಂಚ್: ಹಶ್ಮತುಲ್ಲಾ ಶಾಹಿದಿ, ಉಸ್ಮಾನ್ ಘನಿ, ಫರೀದ್ ಅಹ್ಮದ್, ಹಮೀದ್ ಹಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications