T20 World Cup 2022: ಟೂರ್ನಿ ಆರಂಭಕ್ಕೆ ಮುನ್ನ ರೋಹಿತ್ ಶರ್ಮಾಗೆ ಶುರುವಾಯ್ತು ಹೊಸ ಚಿಂತೆ

ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಭಾರತಕ್ಕೆ ಬೌಲಿಂಗ್ ವಿಭಾಗದ್ದೇ ದೊಡ್ಡ ಸಮಸ್ಯೆಯಾಗಿತ್ತು. ಬುಮ್ರಾ ಗಾಯಗೊಂಡು ಹೊರಗುಳಿದ ಬಳಿಕ, ಬೌಲಿಂಗ್ ದುರ್ಬಲವಾಗಿದೆ ಎನ್ನುವ ಚಿಂತೆ ಕಾಡುತ್ತಿತ್ತು. ಆದರೆ, ಭಾರತ ಬ್ಯಾಟಿಂಗ್ ಸಾಕಷ್ಟು ಬಲವಾಗಿತ್ತು.
ಆಸ್ಟ್ರೇಲಿಯಾದಲ್ಲಿ ಕಠಿಣ ತರಬೇತಿ ಬಳಿಕ, ವೆಸ್ಟರ್ನ್ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನಾಡಿದೆ. ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಬೌಲಿಂಗ್ ನೆರವಿನಿಂದ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ನಿಂದ ಸೋಲನುಭವಿಸಿದೆ.
ಅದರಲ್ಲೂ, ತಂಡದಲ್ಲಿ ಸ್ಥಾನ ಪಡೆಯಲು ಭಾರಿ ಪೈಪೋಟಿ ಇರುವ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಕೂಡ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದೇ ನಾಯಕ ರೋಹಿತ್ ಶರ್ಮಾಗೆ ಈಗ ಹೊಸ ಸಮಸ್ಯೆಯಾಗಿದೆ. ಟೀಂ ಇಂಡಿಯಾದ ಪಾಲಿಗೆ ಫಿನಿಶರ್ ಪಾತ್ರವನ್ನು ನಿರ್ವಹಿಸುವ ದಿನೇಶ್ ಕಾರ್ತಿಕ್ ಎರಡು ಪಂದ್ಯಗಳಲ್ಲಿ ವಿಫಲರಾದರು. ಇನ್ನು ಎರಡೂ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ ರಿಷಬ್ ಪಂತ್ ರನ್ ಗಳಿಸುವ ಪರದಾಡಿದ್ದಾರೆ.

ಇಬ್ಬರಿಂದಲೂ ನೀರಸ ಬ್ಯಾಟಿಂಗ್ ಪ್ರದರ್ಶನ
ಭಾರತದ ಎರಡನೇ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳ ಅಂತರದಿಂದ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ರಿಷಬ್ ಪಂತ್ 11 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಔಟಾದರು.
ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ ಕೇವಲ 10 ರನ್ ಮಾತ್ರ ಗಳಿಸುವ ಮೂಲಕ ನಿರಾಸೆ ಅನುಭವಿಸಿದರು. ಎರಡೂ ವಿಕೆಟ್‌ಕೀಪರ್ ಬ್ಯಾಟರ್‌ನ ನೀರಸ ಪ್ರದರ್ಶನಗಳು ಈಗ ರೋಹಿತ್ ಶರ್ಮಾ ಚಿಂತೆಯನ್ನು ಹೆಚ್ಚಿಸಿವೆ.
ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ: ಥಾಯ್ಲೆಂಡ್ ವಿರುದ್ಧ ಮಿಂಚಿದ ಶಫಾಲಿ ವರ್ಮಾ ಹೇಳಿಕೆ

ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿಲ್ಲ ಪಂತ್
ಎಡಗೈ ಬ್ಯಾಟರ್ ರಿಷಬ್ ಪಂತ್ ಭಾರತದ ಉತ್ತಮ ಬ್ಯಾಟರ್ ಎನ್ನುವುದರಲ್ಲಿ ಸಂಶಯವಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಇನ್ನಿಂಗ್ಸ್‌ಗಳು ಸಾಕಷ್ಟು ಉತ್ತಮವಾಗಿರುತ್ತದೆ. ಆದರೆ, ಟಿ20 ಮಾದರಿಯಲ್ಲಿ ಪಂತ್ ಉತ್ತಮ ರನ್ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಏಷ್ಯಾಕಪ್‌ನಲ್ಲಿ ಕೂಡ ಪಂತ್ ಉತ್ತಮ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಪಂತ್ ವಿಫಲರಾದರು. ವೆಸ್ಟರ್ನ್ ಆಸ್ಟ್ರೆಲಿಯಾ ವಿರುದ್ಧದ ಮೊದಲ ಎರಡು ಅಭ್ಯಾಸ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದರೂ ಪಂತ್ ರನ್ ಗಳಿಸುವಲ್ಲಿ ವಿಫಲರಾದರು. 2022ರಲ್ಲಿ ಆಡಿದ 15 ಟಿ20 ಪಂದ್ಯಗಳಲ್ಲಿ ಪಂತ್ ಒಂದು ಅರ್ಧಶತಕವನ್ನೂ ಗಳಿಸಿಲ್ಲ.

ರನ್ ಗಳಿಸದ ದಿನೇಶ್ ಕಾರ್ತಿಕ್
ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಕೂಡ ಆಸ್ಟ್ರೇಲಿಯಾದಲ್ಲಿ ಎರಡೂ ಅಭ್ಯಾಸ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.
ಟೀಂ ಇಂಡಿಯಾದ ಫಿನಿಷರ್ ಆಗಿರುವ ದಿನೇಶ್ ಕಾರ್ತಿಕ್ ಎರಡನೇ ಅಭ್ಯಾಸ ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 10 ರನ್ ಮಾತ್ರ ಗಳಿಸಿದರು. ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಸುವರ್ಣ ಅವಕಾಶವನ್ನು ಪಡೆದುಕೊಳ್ಳಲು ವಿಫಲರಾದರು. 46 ರನ್‌ಗಳನ್ನು ತ್ವರಿತವಾಗಿ ಗಳಿಸಿದ ನಂತರ, ಅವರು ಅಜಾಗರೂಕ ಸ್ವೀಪ್ ಶಾಟ್ ಆಡುವಾಗ ಔಟಾದರು.

ವಿಶ್ವಕಪ್‌ಗೆ ಮುನ್ನ ಎರಡು ಅಭ್ಯಾಸ ಪಂದ್ಯಗಳು
ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಬದಲಿಗೆ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್, ಅತ್ಯುತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಾಗಿದೆ.
ಟೀಂ ಇಂಡಿಯಾ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ತನ್ನ ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ಆತ್ಮವಿಶ್ವಾಸ ಪಡೆದುಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications