ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ: ಥಾಯ್ಲೆಂಡ್ ವಿರುದ್ಧ ಮಿಂಚಿದ ಶಫಾಲಿ ವರ್ಮಾ ಹೇಳಿಕೆ

Women Asia cup: Shafali Verma said more confident about my game after match winning performence

ಮಹಿಳಾ ಏಷ್ಯಾ ಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮಿಂಚಿದ ಭಾರತದ ವನಿತೆಯರ ತಂಡ 74 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಶಫಾಲಿ ವರ್ಮಾ 42 ರನ್‌ಗಳನ್ನು ಗಳಿಸಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು. ತನ್ನ ಇಂದಿನ ಈ ಪ್ರದರ್ಶನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದಿದ್ದಾರೆ ಶಫಾಲಿ ವರ್ಮಾ.

ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮಾ ಅವರಿಂದ ಬಂದ 42 ರನ್‌ಗಳ ಬಳಿಕ ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಮಿಂಚಿದರು. ಥಾಯ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಮೂರು ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಭಾರತ ಈ ಪಂದ್ಯವನ್ನು 74 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

ಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆ

ಇನ್ನು ಈ ಪಂದ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಶಫಾಲಿ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು "ಈ ಗೆಲುವಿನೊಂದಿಗೆ ಸಾಕಷ್ಟು ಆತ್ಮವಿಶ್ವಾಸ ಬಂದಿದೆ. ಪಿಚ್ ಬ್ಯಾಟಿಂಗ್‌ಗೆ ಉತ್ತಮವಾತ್ತು. ಸ್ಮೃತಿ ಹಾಗೂ ಜಮಿಮಾ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾನು ಹೆಚ್ಚು ಜೊತೆಯಾಟವನ್ನು ಪಡೆಯುವ ಅಗತ್ಯವಿದೆ. ಫೈನಲ್ ಪಂದ್ಯಕ್ಕೆ ಹವಾಮಾನ ಉತ್ತಮವಾಗಿ ಸಾಥ್ ನೀಡಲಿದೆ ಎಂದು ಭಾವಿಸುತ್ತೇವೆ. ನನ್ನ ಆಟದ ಬಗ್ಗೆ ನನಗೆ ಈಗ ಹೆಚ್ಚು ಆತ್ಮವಿಶ್ವಾಸ ಮೂಡಿದ್ದು ಮತ್ತಷ್ಟು ಹೆಚ್ಚು ಪರಿಶ್ರಮ ಪಡುತ್ತೇನೆ" ಎಂದಿದ್ದಾರೆ ಶಫಾಲಿ ವರ್ಮ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 148 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಶಫಾಲಿ ವರ್ಮಾ 28 ಎಸೆತಗಳಲ್ಲಿ 42 ರನ್ ಗಳಿಸಿ ಮಿಂಚಿದರು. ಉಳಿದಂತೆ ನಾಯಕಿ ಹರ್ಮನ್ 36 ರನ್‌ಗಳ ಕೊಡುಗೆ ನೀಡಿದರೆ ಜಮಿಮಾ 27 ರನ್‌ಗಳನ್ನು ಗಳಿಸಿದರು.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಥಾಯ್ಲೆಂಡ್ ತಂಡದ ಪರವಾಗಿ ಯಾರಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ. ನಾಯಕಿ ನರುಮೋಲ್ ಚಾಯ್‌ವಾಯ್ ಹಾಗೂ ನಟ್ಟಾಯ ಬೂಚಾತಮ್ ತಲಾ 21 ರನ್‌ಗಳ ಕೊಡುಗೆ ನೀಡಿದರು. ಉಳಿದಂತೆ ಯಾರು ಕೂಡ ಎರಡಂಕಿ ದಾಟಲು ವಿಫಲವಾದ ಕಾರಣ 9 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್‌ಗಳಲ್ಲಿ 74 ರನ್‌ಗಳನ್ನು ಗಳಸಿಲಷ್ಟೇ ಶಕ್ತವಾಯಿತು.

BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!

ಇತ್ತಂಡಗಳ ಆಡುವ ಬಳಗ
ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಕಿರಣ್ ನವಗಿರೆ, ದಯಾಳನ್ ಹೇಮಲತಾ

ಥಾಯ್ಕೆಂಡ್ ಆಡುವ ಬಳಗ: ನನ್ನಪತ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಯೆಮೊಲ್ ಚೈವಾಯ್ (ನಾಯಕಿ), ಚನಿದಾ ಸುತ್ತಿರುಯಾಂಗ್, ಸೊರ್ನರಿನ್ ಟಿಪ್ಪೊಚ್, ಫನ್ನಿತಾ ಮಾಯಾ, ರೋಸೆನನ್ ಕಾನೋಹ್, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ತಿಪತ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಂ
ಬೆಂಚ್: ಬಂತಿದಾ ಲೀಫತ್ತನಾ, ಸುನಿದಾ ಚತುರೋಂಗ್ರಟ್ಟನಾ, ಅಫಿಸರ ಸುವಾಂಚೊನ್ರಾತಿ, ಸುವನನ್ ಖಿಯಾಟೊ, ಸುಲೀಪೋರ್ನ್ ಲಾವೋಮಿ

Story first published: Thursday, October 13, 2022, 16:46 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X