IND Vs BAN: ಬಾಂಗ್ಲಾ ವಿರುದ್ಧ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಆಡುವುದು ಪಕ್ಕಾ!

ಕಳೆದ ಮೂರು ಪಂದ್ಯಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ರಿಷಬ್ ಪಂತ್ ತಮ್ಮ ಈ ವಿಶ್ವಕಪ್‌ನಲ್ಲಿ ಮೊದಲನೇ ಪಂದ್ಯವನ್ನಾಡಲಿದ್ದಾರೆ. ಬಾಂಗ್ಲಾ ವಿರುದ್ಧ ಪಂತ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೇಳೆ ಕೀಪಿಂಗ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್‌ಗೆ ಬೆನ್ನು ನೋವು ಕಾಣಿಸಿಕೊಂಡಿತು, ಅವರು ಕೀಪಿಂಗ್ ಮುಂದುವರೆಸದೆ ಅರ್ಧದಲ್ಲೇ ಮೈದಾನದಿಂದ ಹೊರನಡೆದರು. ಅವರ ಬದಲಿಗೆ ರಿಷಬ್ ಪಂತ್ ವಿಕೆಟ್ ಕೀಪಿಂಗ್ ಮುಂದುವರೆಸಿದ್ದರು. ದಿನೇಶ್ ಕಾರ್ತಿಕ್ ಬೆನ್ನಿನ ಕೆಳಭಾಗಕ್ಕೆ ನೋವಾಗಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಬೌಲರ್ ಭುವನೇಶ್ವರ್ ಕುಮಾರ್, ದಿನೇಶ್ ಕಾರ್ತಿಕ್ ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದರು. ವೈದ್ಯರ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಾಂಗ್ಲಾ ವಿರುದ್ಧ ಕಣಕ್ಕಿಳಿಸದಿರಲೂ ಟೀಂ ಇಂಡಿಯಾ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ದಿನೇಶ್ ಕಾರ್ತಿಕ್‌ಗೆ ಫಿಸಿಯೋಥೆರಪಿಸ್ಟ್ ಸಹಾಯ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆಯಲ್ಲಿ ದಿನೇಶ್ ಕಾರ್ತಿಕ್ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಅದೇನು ಗಂಭೀರವಾಗಿಲ್ಲದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಅವಕಾಶ ಪಡೆದಿದ್ದರು.
ಆದರೆ, ಪಂದ್ಯದ ವೇಳೆ ಅವರು ಫಿಟ್ ಆಗಿದ್ದಂತೆ ಕಂಡು ಬರಲಿಲ್ಲ, ಬ್ಯಾಟಿಂಗ್ ಮಾಡುವಾಗಲೂ ದಿನೇಶ್ ಕಾರ್ತಿಕ್ ಪರದಾಡಿದರು. ನಂತರ ವಿಕೆಟ್ ಕೀಪಿಂಗ್ ಮಾಡುವಾಗ ಅದ್ಭುತ ಕ್ಯಾಚ್ ಕೂಡ ಪಡೆದರು. ಭುವನೇಶ್ವರ್ ಬೌಲಿಂಗ್‌ನಲ್ಲಿ ಬೌನ್ಸರ್ ಎಸೆತವನ್ನು ಎಗರಿ ಹಿಡಿಯುವ ವೇಳೆ ಕೆಳಕ್ಕೆ ಬಿದ್ದ ದಿನೇಶ್ ಕಾರ್ತಿಕ್ ಬೆನ್ನು ನೋವಿನಿಂದ ಬಳಲಿದರು. ನಂತರ, ಟೀಮ್ ಇಂಡಿಯಾ ಫಿಸಿಯೋಥೆರಪಿಸ್ಟ್ ಕಮಲೇಶ್ ಜೈನ್ ಸಹಾಯದಿಂದ ಮೈದಾನದಿಂದ ಹೊರನಡೆದರು.
'ಖಾಸಗಿತನಕ್ಕೆ ಆಕ್ರಮಣ': ಹೋಟೆಲ್ ಕೋಣೆಯ ವಿಡಿಯೋ ಲೀಕ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ ಗರಂ

ರಾಹುಲ್ ವೈಫಲ್ಯ ಕೂಡ ಪಂತ್ ಆಯ್ಕೆಗೆ ಕಾರಣ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಕಾಣಿಸಿಕೊಳ್ಳಲು ಮತ್ತೊಂದು ಕಾರಣವೆಂದರೆ ಆರಂಭಿಕ ಹಂತದಲ್ಲಿ ಭಾರತದ ಉಪನಾಯಕ ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಪ್ರದರ್ಶನ. ಕೆಎಲ್ ರಾಹುಲ್ ಮೂರು ಪಂದ್ಯಗಳಲ್ಲಿ ಎರಡಂಕಿ ರನ್ ಗಳಿಸಲು ಕೂಡ ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧ 4 ಮತ್ತು ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ 9 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ದಿನೇಶ್ ಕಾರ್ತಿಕ್ ಫಿನಿಷರ್ ಸ್ಥಾನಕ್ಕಾಗಿ ಸೀಮಿತವಾಗಿದ್ದರಿಂದ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆದರೆ, ಈಗ ಕೆಎಲ್ ರಾಹುಲ್ ವೈಫಲ್ಯ, ದಿನೇಶ್ ಕಾರ್ತಿಕ್ ಬೆನ್ನು ನೋವು ಪಂತ್ ತಂಡದಲ್ಲಿ ಅವಕಾಶ ಪಡೆಯಲು ಕಾರಣವಾಗಿದೆ.

ಎರಡನೇ ಸ್ಥಾನದಲ್ಲಿದೆ ಟೀಂ ಇಂಡಿಯಾ
ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಸೂಪರ್ 12 ಗ್ರೂಪ್ 2 ರಲ್ಲಿ ಐದು ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೆ ಜಿಗಿಯುತ್ತದೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳು ತಲಾ ನಾಲ್ಕು ಅಂಕಗಳನ್ನು ಗಳಿಸಿವೆ. ಭಾರತ ತಂಡದ ರನ್ ರೇಟ್ +0.844 ಇರುವುದರಿಂದ ಎರಡನೇ ಸ್ಥಾನದಲ್ಲಿದೆ. ಅದಕ್ಕಾಗಿಯೇ ಬುಧವಾರದ ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಪ್ರಮುಖವಾಗಿದೆ.
ಪ್ರಮುಖ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧ ಗೆದ್ದರೆ ಭಾರತದ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ಬಾಂಗ್ಲಾದೇಶದ ನಂತರ ಭಾನುವಾರ ಟೀಂ ಇಂಡಿಯಾ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications