'ಖಾಸಗಿತನಕ್ಕೆ ಆಕ್ರಮಣ': ಹೋಟೆಲ್ ಕೋಣೆಯ ವಿಡಿಯೋ ಲೀಕ್ ಆಗಿದ್ದಕ್ಕೆ ವಿರಾಟ್ ಕೊಹ್ಲಿ ಗರಂ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022ರ ಸಂದರ್ಭದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೋಮವಾರ (ಅಕ್ಟೋಬರ್ 31) ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡ ವೀಡಿಯೊವನ್ನು ಪೋಸ್ಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ವಿರಾಟ್ ಕೊಹ್ಲಿಯ ಹೋಟೆಲ್ ಕೋಣೆಯ ಒಳಭಾಗವನ್ನು ತೋರಿಸುತ್ತದೆ.

ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಸೋಮವಾರ ಪರ್ತ್‌ನಲ್ಲಿದ್ದಾಗ ಅವರು ಅನುಭವಿಸಿದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ ಮತ್ತು ಕೊಹ್ಲಿ ತಮಗಾದ ಅನುಭವವನ್ನು "ಭಯಾನಕ' ಎಂದು ಲೇಬಲ್ ನೀಡಿದ್ದಾರೆ.

ವಿರಾಟ್ ಕೊಹ್ಲಿ ಇಲ್ಲದಾಗ ಹೋಟೆಲ್ ಕೋಣೆಗೆ ಪ್ರವೇಶಿಸಿದ ಸಿಬ್ಬಂದಿಯೊಬ್ಬರು, ತಮ್ಮ ಖಾಸಗಿ ಕೋಣೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಯಿತು ಮತ್ತು ಕೊಹ್ಲಿಯ ಎಲ್ಲಾ ಪರಿಕರಗಳು ಮತ್ತು ವಾರ್ಡ್‌ರೋಬ್‌ಗಳನ್ನು ಪ್ರದರ್ಶಿಸಲಾಗಿದೆ.

T20 World Cup 2022: ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಠಿಣ; ಗ್ರೂಪ್ 2ರ ಅಂಕಪಟ್ಟಿT20 World Cup 2022: ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಠಿಣ; ಗ್ರೂಪ್ 2ರ ಅಂಕಪಟ್ಟಿ

ಹೋಟೆಲ್ ಕೋಣೆಯ ವಿಡಿಯೋ ಲೀಕ್ ಆಗಿದ್ದಕ್ಕೆ ಗರಂ ಆಗಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇದು ಭಯಾನಕವೆನಿಸುತ್ತದೆ ಮತ್ತು ಪ್ರತಿಯೊಬ್ಬರ ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳಿಗೆ ವಿನಂತಿಸಿದ ಅವರು, ತಮ್ಮ ಮನರಂಜನೆಯ "ಸರಕು' ಎಂದು ಪರಿಗಣಿಸಬೇಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

"ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ತುಂಬಾ ಸಂತೋಷ ಮತ್ತು ಉತ್ಸುಕರಾಗುತ್ತಾರೆ. ಅವರನ್ನು ಭೇಟಿ ಮಾಡಲು ಉತ್ಸುಕರಾಗುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ಅದನ್ನು ಯಾವಾಗಲೂ ಪ್ರಶಂಸಿಸುತ್ತೇನೆ. ಆದರೆ ಇಲ್ಲಿರುವ ಈ ವೀಡಿಯೊ ಭಯಾನಕವಾಗಿದೆ ಮತ್ತು ಇದು ನನ್ನ ಗೌಪ್ಯತೆಯ ಬಗ್ಗೆ ತುಂಬಾ ಮತಿಭ್ರಮಣೆಯಾಗಿದೆ," ಎಂದು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

"ಹೋಟೆಲ್‌ನ ನನ್ನ ಸ್ವಂತ ಕೋಣೆಯಲ್ಲಿ ನಾನು ಗೌಪ್ಯತೆಯನ್ನು ಹೊಂದಲು ಸಾಧ್ಯವಾಗದಿದ್ದರೆ, ನಾನು ವೈಯಕ್ತಿಕ ಸ್ಥಳವನ್ನು ಎಲ್ಲಿ ನಿರೀಕ್ಷಿಸಬಹುದು? ಈ ರೀತಿಯ ಮತಿಭ್ರಮಣೆ ಮತ್ತು ಖಾಸಗಿತನದ ಸಂಪೂರ್ಣ ಆಕ್ರಮಣದಿಂದ ನನಗೆ ಸರಿಯೆನಿಸುವುದಿಲ್ಲ. ದಯವಿಟ್ಟು ಆಟಗಾರರ ಗೌಪ್ಯತೆಯನ್ನು ಗೌರವಿಸಿ ಮತ್ತು ಆಟಗಾರರನ್ನು ಮನರಂಜನೆ ಸರಕಾಗಿ ಪರಿಗಣಿಸಬೇಡಿ," ಎಂದು ವಿನಂತಿಸಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿಯ ಹೋಟೆಲ್ ಕೋಣೆಯ ವಿಡಿಯೋ ಲೀಕ್ ಮಾಡಿದ್ದಕ್ಕೆ ಅವರ ಪತ್ನಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಆಘಾತಕ್ಕೊಳಗಾಗಿದ್ದಾರೆ.

ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "ಕೆಲವು ಘಟನೆಗಳನ್ನು ಅನುಭವಿಸಿದ್ದೇನೆ, ಅಲ್ಲಿ ಅಭಿಮಾನಿಗಳು ಈ ಹಿಂದೆ ಯಾವುದೇ ಸಹಾನುಭೂತಿ ಅಥವಾ ಅನುಗ್ರಹವನ್ನು ತೋರಿಸಲಿಲ್ಲ. ಆದರೆ ಇದು ನಿಜವಾಗಿಯೂ ಕೆಟ್ಟ ವಿಷಯ. ಮನುಷ್ಯನ ಸಂಪೂರ್ಣ ಅವಮಾನ ಮತ್ತು ಖಾಸಗಿತನದ ಉಲ್ಲಂಘನೆ," ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್ ಕೂಡ ಕಾಮೆಂಟ್ ಮಾಡಿದ್ದು, "ಇದು ಹಾಸ್ಯಾಸ್ಪದ, ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು @ಕ್ರೌನ್‌ಪರ್ತ್ ಆಗಿತ್ತು," ಎಂದು ಸಿಡಿಮಿಡಿಗೊಂಡಿದ್ದಾರೆ.

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 82, 62 ಮತ್ತು 12 ಸ್ಕೋರ್‌ಗಳನ್ನು ದಾಖಲಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿಯ ಒಟ್ಟು ಮೊತ್ತವು ಈಗ 156 ಆಗಿದೆ.

160 ರನ್‌ಗಳ ಕಠಿಣ ಬೆನ್ನಟ್ಟುವ ಮೂಲಕ ತಂಡವನ್ನು ಗೆಲುವಿನೊಂದಿಗೆ ಅಜೇಯ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪ್ರದರ್ಶನ ನಿಜಕ್ಕೂ ವಿಶೇಷವಾಗಿತ್ತು. ಕಳೆದ ತಿಂಗಳು ಏ‍ಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಶತಕವನ್ನು ದಾಖಲಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Monday, October 31, 2022, 13:08 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X