IND Vs SA: ಇದು ಬೆಂಗಳೂರು ಪಿಚ್ ಅಲ್ಲ : ದಿನೇಶ್ ಕಾರ್ತಿಕ್ ಆಟಕ್ಕೆ ಮಾಜಿ ಬ್ಯಾಟರ್ ಟೀಕೆ

ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳ ಸೋಲನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ಬ್ಯಾಟರ್ ಗಳ ವೈಫಲ್ಯದಿಂದ ಕೇವಲ 134 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ 19.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ತಲುಪಿತು.
ಭಾರತದ ಬ್ಯಾಟಿಂಗ್ ಪ್ರದರ್ಶನ ತೀರಾ ಕಳಪೆಯಾಗಿತ್ತು, ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್ ಕೂಡ ದಕ್ಷಿಣ ಆಫ್ರಿಕಾ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಲಿಲ್ಲ. ಭಾರತ ತಂಡದಲ್ಲಿ ಫಿನಿಷರ್ ಪಾತ್ರ ವಹಿಸುವ ದಿನೇಶ್ ಕಾರ್ತಿಕ್ 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದರು.
ದಿನೇಶ್ ಕಾರ್ತಿಕ್ ಆಟದ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆಸ್ಟ್ರೇಲಿಯಾ ಮತ್ತು ಬೌನ್ಸಿ ಟ್ರ್ಯಾಕ್‌ಗಳಲ್ಲಿ ಆಡಿದ ಅನುಭವವಿರುವುದರಿಂದ ದಿನೇಶ್ ಕಾರ್ತಿಕ್ ಬದಲಾಗಿ ರಿಷಬ್ ಪಂತ್ ಮೊದಲ ಪಂದ್ಯದಿಂದಲೇ ಆಡಬೇಕಿತ್ತು ಎಂದು ಭಾರತದ ಮಾಜಿ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಪಂತ್‌ಗೆ ಅವಕಾಶ ನೀಡಿ
ಮೊದಲ ಪಂದ್ಯದಿಂದಲೇ ಪಂತ್‌ಗೆ ಅವಕಾಶ ನೀಡಬೇಕಿತ್ತು. ರಿಷಬ್ ಪಂತ್ ಅಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಈ ಪರಿಸ್ಥಿತಿಗಳಲ್ಲಿ ಹೇಗೆ ಪ್ರದರ್ಶನ ನೀಡಬೇಕೆಂದು ಅವರಿಗೆ ತಿಳಿದಿದೆ. ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾದಲ್ಲಿ ಕೊನೆಯದಾಗಿ ಯಾವಾಗ ಆಡಿದ್ದರು, ಅವರು ಯಾವಾಗ ಅಂತಹ ಬೌನ್ಸಿ ಪಿಚ್‌ಗಳಲ್ಲಿ ಆಡಿದ್ದರು ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.
ಇದು ಬೆಂಗಳೂರಿನ ವಿಕೆಟ್ ಅಲ್ಲ, ನಾನು ಇಂದಿಗೂ ಹೇಳಿದ್ದೇನೆ, ಹೂಡಾ ಬದಲಿಗೆ ಆದರೂ ರಿಷಬ್ ಪಂತ್‌ಗೆ ಅವಕಾಶ ನೀಡಬೇಕಿತ್ತು, ಪಂತ್ ಇಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರ ಗಬ್ಬಾ ಇನ್ನಿಂಗ್ಸ್ ಒಂದು ದಂತಕಥೆ, ಎಂದು ಸೆಹ್ವಾಗ್ ಹೇಳಿದರು.
T20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗ

ನಾನು ಸಲಹೆ ಮಾತ್ರ ನೀಡಬಲ್ಲೆ
"ನಾನು ಅವರಿಗೆ ಸಲಹೆಯನ್ನು ಮಾತ್ರ ನೀಡಬಲ್ಲೆ, ಇದು ಮ್ಯಾನೇಜ್‌ಮೆಂಟ್‌ನ ನಿರ್ಧಾರ. ಕಾರ್ತಿಕ್ ಫಿಟ್ ಆಗಿದ್ದರೆ, ಅವರು ಮತ್ತೆ ಆತನನ್ನು ಆಯ್ಕೆ ಮಾಡುತ್ತಾರೆ. ಆದರೆ ನನ್ನ ಪ್ರಕಾರ, ರಿಷಬ್ ಪಂತ್ ಆರಂಭದಿಂದಲೂ ಪ್ಲೇಯಿಂಗ್ XI ನಲ್ಲಿರಬೇಕಿತ್ತು" ಎಂದು ಹೇಳಿದರು.
ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಬೆನ್ನುನೋವಿನಿಂದ ಗಾಯಗೊಂಡಿದ್ದಾರೆ ಮತ್ತು ಮುಂದಿನ ಪಂದ್ಯದ ವೇಳೆಗೆ ಅವರು ಫಿಟ್ ಆಗುವ ಬಗ್ಗೆ ಖಚಿತವಿಲ್ಲ.

ಬಾಂಗ್ಲಾ ವಿರುದ್ಧದ ಪಂದ್ಯ ನಿರ್ಣಾಯಕ
ಟೀಂ ಇಂಡಿಯಾ 3 ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ಗ್ರೂಪ್ 2 ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಸೂಪರ್ 12 ಹಂತದಲ್ಲಿ ಭಾರತಕ್ಕೆ ಇನ್ನು ಎರಡು ಪಂದ್ಯಗಳು ಮಾತ್ರ ಇದ್ದು, ಮುಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಸೆಮಿಫೈನಲ್ ಹಾದಿ ಸುಲಭವಾಗಲಿದೆ.
ಬುಧವಾರ ಅಡಿಲೇಡ್ ಓವಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮುಂದಿನ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಥವಾ ದೀಪಕ್ ಹೂಡಾ ಬದಲಿಗೆ ರಿಷಬ್ ಪಂತ್ ಅವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications