For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

T20 world cup: Here is the list of major players who missed world cup team

ಟಿ20 ವಿಶ್ವಕಪ್‌ನ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಯುಎಇನಲ್ಲಿ ಈ ಬಾರಿಯ ವಿಶ್ವಕಪ್ ನಡೆಯುತ್ತಿರುವ ಕಾರಣ ಈ ಅಂಶವನ್ನು ಮುಖ್ಯವಾಗಿ ಪರಿಗಣಿಸಿ ತಂಡದ ಆಯ್ಕೆ ಮಾಡಿರುವುದು ಸ್ಪಷ್ಟವಾಗುತ್ತದೆ. 15 ಆಟಗಾರರ ತಂಡವನ್ನು ಪ್ರಕಟ ಮಾಡಲಾಗಿದ್ದು ಇದರಲ್ಲಿ ಕೆಲ ಅಚ್ಚರಿಯ ಹೆಸರುಗಳು ಕೂಡ ಕಾಣಿಸಿಕೊಂಡಿದೆ. ಇನ್ನು ಕೆಲ ಪ್ರಮುಖ ಆಟಗಾರರು ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸುವ ತಂಡದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಟೀಮ್ ಇಂಡಿಯಾ ಸಾಕಷ್ಟು ಅದ್ಭುತ ಪ್ರತಿಭೆಗಳನ್ನು ಹೊಂದಿದೆ. ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಎದುರಾಗಿದೆ. ಪ್ರಮುಖ ಆಟಗಾರರಿಗೂ ಕೂಡ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಪ್ರತಿಸ್ಪರ್ಧೆ ಎದುರಾಗುತ್ತಿದೆ. ಈ ಪ್ರತಿ ಸ್ಪರ್ಧೆಯಲ್ಲಿ ಕೆಲ ಆಟಗಾರರು ಹಿಂದುಳಿದ ಕಾರಣದಿಂದಾಗಿ ಅನಿವಾರ್ಯವಾಗಿ ವಿಶ್ವಕಪ್‌ನಂತಾ ಮಹತ್ವದ ವೇದಿಕೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅಸಾಧ್ಯವಾಗಿದೆ.

ಹಾಗಾದರೆ ಅಂತಾ ಪ್ರಮುಖ ಆಟಗಾರರು ಯಾರು? ಮುಂದೆ ಓದಿ

ಆರಂಭಿಕ ಆಟಗಾರ ಶಿಖರ್ ಧವನ್‌ಗೆ ಇಲ್ಲ ಸ್ಥಾನ

ಆರಂಭಿಕ ಆಟಗಾರ ಶಿಖರ್ ಧವನ್‌ಗೆ ಇಲ್ಲ ಸ್ಥಾನ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ಪ್ರಮುಖ ಆಟಗಾರರಲ್ಲಿ ಶಿಖರ್ ಧವನ್ ಹಾಗೂ ಯುಜುವೇಂದ್ರ ಚಾಹಲ್ ಅಗ್ರಗಣ್ಯರು. ಶಿಖರ್ ಧವನ್ ಐಪಿಎಲ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ. ಕಳೆದ ಶ್ರೀಲಂಕಾದಲ್ಲಿ ನಡೆದ ಸರಣಿಯಲ್ಲಿ ಭಾರತೀಯ ತಂಡವನ್ನು ಧವನ್ ಮುನ್ನಡೆಸಿದ್ದರು. ಈ ತಂಡ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ ಈ ಪ್ರವಾಸದಲ್ಲಿ ಧವನ್ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೂರನೇ ಆರಂಭಿಕನಾಗಿ ಅಗತ್ಯ ಸಂದರ್ಭಗಳಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರದೊಂದಿಗೆ ಶಿಖರ್ ಧವನ್ ಈ ತಂಡದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ.

ವಿಶ್ವಕಪ್ ತಂಡದಿಂದ ಹೊರಬಿದ್ದ ಚಾಹಲ್

ವಿಶ್ವಕಪ್ ತಂಡದಿಂದ ಹೊರಬಿದ್ದ ಚಾಹಲ್

ಇನ್ನು ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕಳೆದ ಕೆಲ ವರ್ಷಗಳಿಂದ ತಂಡದ ಖಾಯಂ ಸ್ಪಿನ್ನರ್ ಆಗಿ ಮಿಂಚಿತ್ತಿದ್ದರು. ಆದರೆ ಇತ್ತೀಚೆಗೆ ಯುಜಿ ಕಳೆಗುಂದಿದಂತೆ ಕಂಡು ಬಂದಿದ್ದರು. ಈ ಬಾರಿಯ ಐಪಿಎಲ್‌ನ ಮೊದಲ ಹಂತದ ಪಂದ್ಯಗಳಲ್ಲಿಯೂ ಚಾಹಲ್ ಪರಿಣಾಮಕಾರಿಯಾಗಿರಲಿಲ್ಲ. ಬಳಿಕ ಶ್ರೀಲಂಕಾ ಪ್ರವಾಸದಲ್ಲಿಯೂ ಚಾಹಲ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಮತ್ತೊಂದೆಡೆ ವರುನ್ ಚಕ್ರವರ್ತಿ, ರಾಹುಲ್ ಚಾಹರ್ ಅವರಂತಾ ಆಟಗಾರರು ನೀಡುತ್ತಿದ್ದ ಪ್ರದರ್ಶನ ಈ ಸ್ಪರ್ಧೆಯಿಂದ ಚಾಹಲ್ ಹಿರಗುಳಿಯುವಂತೆ ಮಾಡಿದೆ. ಇನ್ನು ಅನುಭವಿ ಆರ್ ಅಶ್ವಿನ್‌ಗೆ ಕೂಡ ತಮಡದಲ್ಲಿ ಸ್ಥಾನ ನೀಡಲು ನಿರ್ಧರಿಸಿದ ಕಾರಣ ಚಾಹಲ್‌ಗೆ ಈ ತಂಡದಲ್ಲಿ ಸ್ಥಾನ ದೊರೆಯದಂತಾಯಿತು

ಸಂಜು ಸ್ಥಾನ ಆಕ್ರಮಿಸಿದ ಕಿಶನ್

ಸಂಜು ಸ್ಥಾನ ಆಕ್ರಮಿಸಿದ ಕಿಶನ್

ಇನ್ನು ಮತ್ತೊಂದೆಡೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಹವಣಿಸುತ್ತಿದ್ದ ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್‌ನ ತಂಡದಿಂದ ಹೊರಬಿದ್ದಿದ್ದಾರೆ. ಅಸ್ಥಿರ ಪ್ರದರ್ಶನ ಸಂಜು ಸ್ಯಾಮ್ಸನ್‌ಗೆ ಮುಳುವಾಗಿದೆ. ಈ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಇಶಾನ್ ಕಿಶನ್ ಟೀಮ್ ಇಂಡಿಯಾದ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.

ಸುಂದರ್, ನಟ್ಟುಗೆ ಮುಳುವಾದ ಗಾಯ

ಸುಂದರ್, ನಟ್ಟುಗೆ ಮುಳುವಾದ ಗಾಯ

ಇನ್ನು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯ ತಂಡದಲ್ಲಿ ಸ್ಥಾನ ಸಂಪಾದಿಸಿರುವ ವಾಶಿಂಗ್ಟನ್ ಸುಂದರ್ ಹಾಗೂ ಟಿ ನಟರಾಜನ್‌ಗೆ ಗಾಯದ ಸಮಸ್ಯೆ ಮುಳುವಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನ ಸಾಮರ್ಥ್ಯದಿಂದ ಮಿಂಚುತ್ತಿದ್ದ ವಾಶಿಂಗ್ಟನ್ ಸುಂದರ್ ಈ ಬಾರಿಯ ಇಂಗ್ಲೆಂಡ್ ಸರಣಿಯ ಆರಂಭಕ್ಕೂ ಮುನ್ನ ಗಾಯಕ್ಕೆ ಒಳಗಾಗಿದ್ದರು. ಬೆರಳಿನ ಗಾಯಕ್ಕೆ ತುತ್ತಾದ ಸುಂದರ್ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಾಸಾಗಿದ್ದಾರೆ. ಈ ಬಾರಿಯ ಐಪಿಎಲ್‌ನಿಂದರೂ ಇದೇ ಕಾರಣಕ್ಕೆ ವಾಶಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ.

ಮತ್ತೋರ್ವ ಯುವ ವೇಗಿ ಟಿ ನಟರಾಜನ್ 2020ರ ಐಪಿಎಲ್ ಆವೃತ್ತಿಯಲ್ಲಿ ನಿಡಿದ ಅಮೋಘ ಪ್ರದರ್ಶನ ಟೀಮ್ ಇಂಡಿಯಾದಲ್ಲಿ ಅವಕಾಶ ತೆರೆದಿಟ್ಟಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಮಾದರಿಯಲ್ಲಿಯೂ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು ಟಿ ನಟರಾಜನ್. ಆದರೆ ನಂತರ ನಟರಾಜನ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಭಾಗದಲ್ಲಿಯೂ ನಟರಾಜನ್ ಆರಂಭಿಕ ಕೆಲ ಪಂದ್ಯಗಳಲ್ಲಿ ಮಾತ್ರವೇ ಕಾಣಿಸಿಕೊಂಡು ಬಳಿಕ ಟೂರ್ನಿಯಿಂದ ಹೊರಗುಳಿದಿದ್ದರು. ಈ ಮಧ್ಯೆ ತಂಡಕ್ಕೆ ಭುವನೇಶ್ವರ್ ಕುಮಾರ್ ವಾಪಾಸಾಗಿದ್ದು ಸುಂದರ್‌ಗೆ ಅವಕಾಶ ಇಲ್ಲದಂತಾಯಿತು.

ಮತ್ತಷ್ಟು ಪ್ರಮುಖ ಆಟಗಾರರು

ಮತ್ತಷ್ಟು ಪ್ರಮುಖ ಆಟಗಾರರು

ಇನ್ನು ಇತ್ತೀಚಿನ ದಿನಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಸಿರಾಜ್ ಕೂಡ ಈ ಬಾರಿಯ ಟಿ20 ವಿಶ್ವಕಪ್‌ನ ತಂಡದಿಂದ ಹೊರಬಿದ್ದಿದ್ದಾರೆ. ಆಲ್‌ರೌಂಡರ್ ಕಥನಾಲ್ ಪಾಂಡ್ಯ ಕೂಡ ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದರು. ಆದರೆ ಅದು ಕೂಡ ಸಾಧ್ಯವಾಗಿಲ್ಲ. ಇವ ಜೊತೆಗೆ ಟೀಮ್ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಶಾರ್ದೂಲ್ ಠಾಕೂರ್ ಕೂಡ 15ರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮೀಸಲು ಆಟಗಾರನಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಠಾಕೂರ್ ಜೊತೆಗೆ ಶ್ರೇಯಸ್ ಐಯ್ಯರ್ ದೀಪಕ್ ಚಾಹರ್ ಕೂಡ ಮೀಸಲು ಆಟಗಾರರಾಗಿ ತಂಡದಲ್ಲಿ ಇರಲಿದ್ದಾರೆ.

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada
ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ

ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ , ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್

Story first published: Thursday, September 9, 2021, 10:06 [IST]
Other articles published on Sep 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+