T20 World Cup: ಈ ಬೌಲರ್ ವಿರುದ್ಧ ಟೀಂ ಇಂಡಿಯಾ ಬ್ಯಾಟರ್ ರನ್ ಗಳಿಸಬೇಕು ಎಂದ ಗೌತಮ್ ಗಂಭೀರ್

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಲು ದಿನಗಣನೆ ಆರಂಭವಾಗಿದೆ. ಏಷ್ಯಾಕಪ್‌ನಲ್ಲಿ ಸೂಪರ್-4 ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿದ್ದ ಟೀಂ ಇಂಡಿಯಾ ಟೂರ್ನಿಯಿಂದಲೇ ಹೊರಬಿದ್ದಿತ್ತು.
2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಭರ್ಜರಿ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಎರಡು ಪಂದ್ಯಗಳಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಸಿದ್ಧತೆ ನಡೆಸುತ್ತಿದೆ. ಅತ್ಯುತ್ತಮ ಬೌಲಿಂಗ್ ವಿಭಾಗವನ್ನು ಹೊಂದಿರುವ ಪಾಕಿಸ್ತಾನವನ್ನು ಸೋಲಿಸುವುದು ಸುಲಭವಲ್ಲ.
ಶಾಹಿನ್ ಶಾ ಅಫ್ರಿದಿ ಭಾರತದ ಬ್ಯಾಟರ್ ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿರುವುದರಿಂದ ಭಾರತದ ಬ್ಯಾಟಿಂಗ್ ಪಡೆ ಅದಕ್ಕೆ ಸಿದ್ಧವಾಗಬೇಕಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪಾಕಿಸ್ತಾನದ ವಿರುದ್ಧದ ಪಂದ್ಯದ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದ್ದಾರೆ.
ಅಕ್ಟೋಬರ್ 23 ರಂದು ಎಂಸಿಜಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲು ಸಿದ್ಧವಾಗುತ್ತಿರುವ ಟೀಂ ಇಂಡಿಯಾ, ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ರಕ್ಷಣಾತ್ಮಕ ಆಟ ಆಡಬಾರದು ಎಂದು ಗೌತಮ್ ಗಂಭಿರ್ ಸಲಹೆ ನೀಡಿದ್ದಾರೆ.

ಭಾರತದ ಸೋಲಿಗೆ ಕಾರಣವಾಗಿದ್ದ ಶಾಹೀನ್ ಅಫ್ರಿದಿ
2021ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಶಾಹೀನ್ ಶಾ ಅಫ್ರಿದಿ ಮಾರಕ ಬೌಲಿಂಗ್ ದಾಳಿಯಿಂದಾಗಿ ಪಾಕಿಸ್ತಾನ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಜಯ ಗಳಿಸಿತ್ತು.
ಭಾರತದ ವಿರುದ್ಧ ಮತ್ತೊಂದು ಜಯಕ್ಕಾಗಿ ಪಾಕಿಸ್ತಾನ ಎದುರು ನೋಡುತ್ತಿದೆ. ಇತ್ತ, ಭಾರತ ಕಳೆದ ವಿಶ್ವಕಪ್‌ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸುವ ಸಿದ್ಧತೆಯಲ್ಲಿದೆ.
ಮಹಿಳಾ ಏಷ್ಯಾಕಪ್ 2022: ಪಾಕ್ ವಿರುದ್ಧ 1ರನ್‌ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರು

ಭಾರತದ ಆರಂಭಿಕ ಬ್ಯಾಟರ್ ಗಳಿಗೆ ಸಲಹೆ
ಗೌತಮ್ ಗಂಭೀರ್ ಶಾಹೀನ್ ವಿರುದ್ಧ ಅಗ್ರ ಕ್ರಮಾಂಕವು ಏಕೆ ಧನಾತ್ಮಕವಾಗಿರಬೇಕು ಎಂದು ವಿವರಿಸಿದರು. ರೋಹಿತ್ ಶರ್ಮಾ ಮತ್ತು ತಂಡ ವೇಗಿಗಳ ಬೌಲಿಂಗ್ ಎದುರಿಸಲು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
"ಶಾಹೀನ್ ಅಫ್ರಿದಿ ವಿಷಯಕ್ಕೆ ಬಂದರೆ, ಆತನ ವಿರುದ್ಧ ರಕ್ಷಣಾತ್ಮಕ ಆಟ ಆಡಲು ನೋಡಬಾರದು. ಆತನ ಬೌಲಿಂಗ್‌ನಲ್ಲಿ ರನ್ ಗಳಿಸಲು ನೋಡಬೇಕು. ಆತನ ವಿರುದ್ಧ ರಕ್ಷಣಾತ್ಮವಾಗಿ ಆಡಿದರೆ, ಅವರ ಮನೋಬಲ ಹೆಚ್ಚಾಗಲಿದೆ. ಆದರೆ, ಆತನ ಬೌಲಿಂಗ್‌ನಲ್ಲೇ ರನ್ ಗಳಿಸಿದರೆ ಉಳಿದ ಬೌಲರ್ ಮೇಲೆ ಕೂಡ ಒತ್ತಡ ಬೀಳುತ್ತದೆ" ಎಂದು ಗೌತಮ್ ಗಂಭಿರ್ ಹೇಳಿದರು.

ಟಿ20 ಮಾದರಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಬೆಲೆಯಿಲ್ಲ
ಟಿ20 ಕ್ರಿಕೆಟ್‌ನಲ್ಲಿ ನೀವು ಬದುಕಲು ಸಾಧ್ಯವಿಲ್ಲ. ಶಾಹೀನ್ ಅಫ್ರಿದಿ ಹೊಸ ಚೆಂಡಿನೊಂದಿಗೆ ಅಪಾಯಕಾರಿ ಎಂದು ನನಗೆ ತಿಳಿದಿದೆ, ಆದರೆ ಭಾರತವು ತಮ್ಮ ಅಗ್ರ 3 ಅಥವಾ 4 ರಲ್ಲಿ ಗುಣಮಟ್ಟವನ್ನು ಪಡೆದುಕೊಂಡಿದೆ, ಖಂಡಿತವಾಗಿಯೂ ಶಾಹೀನ್ ಶಾ ಆಫ್ರಿದಿಯನ್ನು ಎದುರಿಸಬಹುದು ಎಂದು ಹೇಳಿದರು.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಶಾಹೀನ್ ಶಾ ಅಫ್ರಿದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಟಕ್ಕೆ ಮರಳಲು ಕಾತರರಾಗಿದ್ದಾರೆ. ಎಡಗೈ ವೇಗದ ಬೌಲರ್ ಆಗಿರುವ ಶಾಹೀನ್ ಅಫ್ರಿದಿಯನ್ನು ಎದುರಿಸಲು ಭಾರತದ ಆಟಗಾರರು ಕೂಡ ಸಜ್ಜಾಗುತ್ತಿದ್ದಾರೆ.
ಅಕ್ಟೋಬರ್ 23ರಂದು ಎಂಸಿಜಿಯಲ್ಲಿ ಉಭಯ ತಂಡಗಳು ನಡುವೆ ರೋಚಕ ಹಣಾಹಣಿಯನ್ನಂತು ನಿರೀಕ್ಷಿಸಬಹುದಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications