Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಏಷ್ಯಾಕಪ್‌ 2022: ಪಾಕ್‌ ವಿರುದ್ಧ 1ರನ್‌ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರು

Srilanka women

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ವನಿತೆಯರು 1ರನ್‌ಗಳ ರೋಚಕ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಮಹಿಳೆಯರು ಕೂದಲಂಚಿನಡಿಯಲ್ಲಿ ಫೈನಲ್ ಸ್ಥಾನ ಕಳೆದುಕೊಂಡಿದ್ದಾರೆ.

ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಒಂದು ರನ್ ನಿಂದ ಸೋತಿದೆ. ಸಸ್ಪೆನ್ಸ್ ಥ್ರಿಲ್ಲರ್ ಅನ್ನು ನೆನಪಿಸುವ ಈ ಕಡಿಮೆ ಸ್ಕೋರಿಂಗ್ ಆಟದಲ್ಲಿ, ಶ್ರೀಲಂಕಾ ರೋಚಕ ಗೆಲುವಿನೊಂದಿಗೆ ಇದೇ ತಿಂಗಳ 15 ರಂದು ಭಾರತದ ವಿರುದ್ಧ ಫೈನಲ್ ಅನ್ನು ಆಡಲಿದೆ.

ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಥಾಯ್ಲೆಂಡ್ ವಿರುದ್ಧ 74 ರನ್ ಗಳಿಂದ ಗೆದ್ದು ಫೈನಲ್ ತಲುಪಿತು. ಆದ್ರೆ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಕೊನೆಯ ಎಸೆತದಲ್ಲಿ ಮೂರು ರನ್ ಗಳಿಸಲು ವಿಫಲವಾಗಿ ಸೋಲನ್ನ ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿ 122 ರನ್ ಕಲೆಹಾಕಿದ ಶ್ರೀಲಂಕಾ

ಮೊದಲು ಬ್ಯಾಟಿಂಗ್ ಮಾಡಿ 122 ರನ್ ಕಲೆಹಾಕಿದ ಶ್ರೀಲಂಕಾ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 122 ರನ್ ಗಳಿಸಿತು. ಲಂಕಾ ತಂಡದ ಪರ ಹರ್ಷಿತಾ ಸಮರವಿಕ್ರಮ (41 ಎಸೆತಗಳಲ್ಲಿ ಬೌಂಡರಿ ಸೇರಿದಂತೆ 35) ಮತ್ತು ಅನುಷ್ಕಾ ಸಂಜೀವನಿ (21 ಎಸೆತಗಳಲ್ಲಿ 4, ಸಿಕ್ಸರ್ ಸಹಿತ 26) ಗರಿಷ್ಠ ಸ್ಕೋರರ್‌ಗಳಾಗಿದ್ದರು. ಆದ್ರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪಾಕ್ ಬೌಲರ್ ಗಳ ಪೈಕಿ ನಸ್ರಾ ಸಂಧು (3/17) ಮೂರು ವಿಕೆಟ್ ಪಡೆದರು. ಸಾದಿಯಾ ಇಕ್ಬಾಲ್, ನಿದಾ ದಾರ್ ಮತ್ತು ಅನ್ವರ್ ತಲಾ ಒಂದು ವಿಕೆಟ್ ಪಡೆದರು.

ಕೇವಲ 1ರನ್‌ ಅಂತರದಲ್ಲಿ ಮುಗ್ಗರಿಸಿದ ಪಾಕಿಸ್ತಾನ

ಕೇವಲ 1ರನ್‌ ಅಂತರದಲ್ಲಿ ಮುಗ್ಗರಿಸಿದ ಪಾಕಿಸ್ತಾನ

ಇನ್ನು ಶ್ರೀಲಂಕಾ ನೀಡಿದ್ದ 122ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲನ್ನ ಅನುಭವಿಸಿತು. ಬಿಸ್ಮಾ ಮರೂಫ್ (41 ಎಸೆತಗಳಲ್ಲಿ 4 ಬೌಂಡರಿ ಸಹಿತ 42) ಮತ್ತು ನಿದಾ ದಾರ್ (26 ಎಸೆತಗಳಲ್ಲಿ 26) ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 9 ರನ್‌ಗಳ ಅಗತ್ಯವಿದ್ದರೂ ಗಳಿಸಿದ್ದು ಮಾತ್ರ 6 ರನ್. ಕೊನೆಯ ಎಸೆತದಲ್ಲಿ ಪಾಕ್‌ಗೆ ಮೂರು ರನ್ ಅಗತ್ಯವಿದ್ದಾಗ ಒಂದು ರನ್‌ ಕಲೆಹಾಕಿ ಮತ್ತೊಂದು ರನ್ ಓಡುವಾಗ ನಿದಾದಾರ್ ರನೌಟ್‌ಗೆ ಬಲಿಯಾದ್ರು. ಪರಿಣಾಮ ಶ್ರೀಲಂಕಾ ಒಂದು ರನ್‌ಗಳ ರೋಚಕ ಗೆಲುವನ್ನ ಸಾಧಿಸುವಲ್ಲಿ ಯಶಸ್ವಿಯಾಯಿತು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪುರುಷರ ಏಷ್ಯಾ ಕಪ್ - 2022ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆದಿದ್ದು, ಅಂತಿಮ ಕದನದಲ್ಲಿ ಶ್ರೀಲಂಕಾ ಅನಿರೀಕ್ಷಿತ ಗೆಲುವಿನೊಂದಿಗೆ ಟ್ರೋಫಿ ಗೆದ್ದುಕೊಂಡಿದ್ದು ಇತಿಹಾಸ. ಮಹಿಳೆಯರ ಏಷ್ಯಾಕಪ್ ಸೆಮಿಸ್ ನಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾಯಿತು.

ಆದ್ರೆ ಫೈನಲ್‌ನಲ್ಲಿ ಭಾರತದೊಂದಿಗಿನ ಅಂತಿಮ ಕದನದಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಲಂಕಾ ಶಾಕ್ ನೀಡುತ್ತಾ ಅಥವಾ ಪಂದ್ಯ ಸೋಲುತ್ತಾ ಎಂಬುದು ಅಕ್ಟೋಬರ್ 15ರಂದು ತಿಳಿದುಬರಲಿದೆ.

ಮಹಿಳೆಯರ ಏಷ್ಯಾ ಕಪ್ ಇದುವರೆಗೆ ಏಳು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಇದು 8 ನೇ ಆವೃತ್ತಿಯಾಗಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 2004, 2005, 2006 ಮತ್ತು 2008ರಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ನಾಲ್ಕು ಫೈನಲ್‌ಗಳಲ್ಲೂ ಭಾರತ ಗೆದ್ದಿರುವುದು ಗಮನಾರ್ಹ.

ಸೋಲುವುದು ಹೇಗೆ ಎಂದು ಪಾಕಿಸ್ತಾನ ತಂಡವನ್ನು ನೋಡಿ ಕಲಿಯಿರಿ ಎಂದ ಅಭಿಮಾನಿಗಳು!

ಗೆದ್ದ ಬಳಿಕ ಭರ್ಜರಿ ಸ್ಟೆಪ್ಸ್ ಹಾಕಿದ ಶ್ರೀಲಂಕಾ ವನಿತೆಯರು

ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿದ ಬಳಿಕ ಶ್ರೀಲಂಕಾ ವನಿತೆಯರು ಶ್ರೀಲಂಕಾ ಗೀತೆಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಫೈನಲ್ ತಲುಪಿದ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ ವನಿತೆಯರು: ಮುನೀಬಾ ಅಲಿ (ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ನಶ್ರಾ ಸಂಧು, ತುಬಾ ಹಸನ್, ಸಾದಿಯಾ ಇಕ್ಬಾಲ್, ಐಮನ್ ಅನ್ವರ್

ಬೆಂಚ್: ಕೈನಾತ್ ಇಮ್ತಿಯಾಜ್, ಸದಾಫ್ ಶಮಾಸ್, ಡಯಾನಾ ಬೇಗ್, ಸಿದ್ರಾ ನವಾಜ್

ಶ್ರೀಲಂಕಾ ವನಿತೆಯರು: ಚಾಮರಿ ಅಥಾಪತ್ತು (ನಾಯಕಿ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಮಲ್ಶಾ ಶೆಹಾನಿ, ಓಷದಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ

ಬೆಂಚ್: ತಾರಿಕಾ ಸೆವ್ವಂಡಿ, ಮದುಶಿಕಾ ಮೆತ್ತಾನಂದ, ರಶ್ಮಿ ಸಿಲ್ವಾ, ಕೌಶಾನಿ ನುತ್ಯಾಂಗನಾ

Story first published: Thursday, October 13, 2022, 20:46 [IST]
Other articles published on Oct 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+