India vs Australia Warm-Up Match : ಶಮಿ, ಹರ್ಷಲ್ ಮ್ಯಾಜಿಕ್, ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಚಾಂಪಿಯನ್ನರಾದ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್ ಗಳಲ್ಲಿ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶಿಸಿತು.
ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿದರು.
ಉಪನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್‌ರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತು.
187 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಸುಲಭವಾಗಿ ಜಯ ಸಾಧಿಸುವ ಹಂತದಲ್ಲಿತ್ತು. ಆದರೆ ಕೊನೆಯ ಮೂರು ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 6 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರವಾಗಿ ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ ಕೊನೆಯ ಎರಡು ಓವರ್ ಗಳಲ್ಲಿ ಮ್ಯಾಜಿಕ್ ಮಾಡಿದರು.

ರಾಹುಲ್, ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಆಸರೆಯಾದರು. ಉಪನಾಯಕ ಕೆಎಲ್ ರಾಹುಲ್ 33 ಎಸೆತಗಳಲ್ಲಿ6 ಬೌಂಡರಿ 3 ಸಿಕ್ಸರ್ ಸಹಿತ 57 ರನ್ ಗಳಿಸಿದರು. ಅತ್ಯುತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೂಡ, 33 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 50 ರನ್ ಗಳಿಸಿದರು.
ಉಳಿದಂತೆ ನಾಯಕ ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 19 ರನ್, ದಿನೇಶ್ ಕಾರ್ತಿಕ್ 20 ರನ್ ಗಳಿಸಿದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 2 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ತಲಾ 6 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು. ಆಸ್ಟ್ರೇಲಿಯಾ ಪರವಾಗಿ ಕೇನ್ ರಿಚರ್ಡ್ಸನ್ 4 ಓವರ್ ಗಳಲ್ಲಿ 30 ರನ್ ನೀಡಿ 4 ವಿಕೆಟ್ ಪಡೆದರು.
ಪಾಕ್ ವಿರುದ್ಧ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಪ್ರಮುಖ ಸಲಹೆ ನೀಡಿದ ದ.ಆಫ್ರಿಕಾ ದಿಗ್ಗಜ

ನಾಯಕನ ಆಟವಾಡಿದ ಫಿಂಚ್
187 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೆಲಿಯಾ ತಂಡಕ್ಕೆ ನಾಯಕ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದಿ ಇವರಿಬ್ಬರೂ, ಸುಲಭವಾಗಿ ರನ್ ಚೇಸ್ ಮಾಡುವ ಮುನ್ಸೂಚನೆ ನೀಡಿದರು. 7.3 ಓವರ್ ಗಳಲ್ಲಿ ಮೊದಲನೇ ವಿಕೆಟ್‌ಗೆ 78 ರನ್ ಕಲೆ ಹಾಕಿದರು. ಮಿಚೆಲ್ ಮಾರ್ಷ್ 18 ಎಸೆತಗಳಲ್ಲಿ 35 ರನ್ ಗಳಿಸಿದರು.
ಫಾರ್ಮ್‌ಗೆ ಮರಳಿದ ನಾಯಕ ಆರನ್ ಫಿಂಚ್ ಅರ್ಧಶತಕ ಗಳಿಸಿದರು. 54 ಎಸೆತಗಳಲ್ಲಿ 76 ರನ್ ಗಳಿಸಿದರು. ಹರ್ಷಲ್ ಪಟೇಲ್ ಅದ್ಭುತ ಬೌಲಿಂಗ್ ಮೂಲಕ ಅವರನ್ನು ಬೌಲ್ಡ್ ಮಾಡಿದರು. ಮ್ಯಾಕ್ಸ್‌ವೆಲ್ 23 ರನ್ ಗಳಿಸಿ ಔಟಾದರು. ಸುಲಭವಾಗಿ ಗೆಲ್ಲುತ್ತದೆ ಎಂದು ಭಾವಿಸಿದ್ದ ಪಂದ್ಯವನ್ನು ಆಸ್ಟ್ರೇಲಿಯಾ ಅಂತಿಮ ಹಂತದಲ್ಲಿ ಕೈಚೆಲ್ಲಿತು.

ಕೊನೆಯ ಮೂರು ಓವರ್ ಗಳಲ್ಲಿ 7 ವಿಕೆಟ್ ಪತನ
17ನೇ ಓವರ್ ವರೆಗು ಆಸ್ಟ್ರೇಲಿಯಾ ತಂಡದ ಜಯ ಖಚಿತ ಎನ್ನುವಂತಾಗಿತ್ತು. 18 ಎಸೆತಗಳಲ್ಲಿ 29 ರನ್ ಬೇಕಿತ್ತು. ಆದರೆ ಕೊನೆಯ ಮೂರು ಓವರ್ ಗಳಲ್ಲಿ ಭಾರತದ ಬೌಲರ್ ಗಳು ಮ್ಯಾಜಿಕ್ ಮಾಡಿದರು. 18ನೇ ಓವರ್ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ 13 ರನ್ ಬಿಟ್ಟುಕೊಟ್ಟರು ಒಂದು ವಿಕೆಟ್ ಪಡೆದರು.
19ನೇ ಓವರ್ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ ಓವರ್ ನ ಮೊದಲನೇ ಎಸೆತದಲ್ಲಿ ನಾಯಕ ಆರನ್ ಫಿಂಚ್‌ರನ್ನು ಬೌಲ್ಡ್ ಮಾಡಿದರು. ಎರಡನೇ ಎಸೆತದಲ್ಲಿ ರನ್ ಕದಿಯಲು ಹೋಗಿ ವಿರಾಟ್ ಕೊಹ್ಲಿ ಅದ್ಭುತ ಫಿಲ್ಡಿಂಗ್‌ನಿಂದ ಟಿಮ್ ಡೇವಿಡ್ ರನೌಟ್ ಆದರು. ಹರ್ಷಲ್ ಪಟೇಲ್ ಕೇವಲ 5 ರನ್ ಬಿಟ್ಟುಕೊಟ್ಟರು.
ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ಜಯಕ್ಕೆ 11 ರನ್ ಬೇಕಿತ್ತು ಆಗ ತಮ್ಮ ಮೊದಲನೇ ಓವರ್ ಬೌಲಿಂಗ್ ಮಾಡಿದ ಶಮಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೊನೆಯ ಓವರ್ ನಲ್ಲಿ ಕೇವಲ 4 ರನ್ ನೀಡಿ ಮೂರು ವಿಕೆಟ್ ಪಡೆದರು. ಒಂದು ರನೌಟ್ ಮಾಡಿದರು. ಕೊನೆಯ ನಾಲ್ಕು ಎಸೆತಗಳಲ್ಲಿ ಆಸ್ಟ್ರೇಲಿಯಾದ ನಾಲ್ಕು ವಿಕೆಟ್‌ಗಳ ಪತನಗೊಂಡವು. ಅಂತಿಮವಾಗಿ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯ ಸಾಧಿಸಿತು.
19.3ನೇ ಓವರ್ ನಲ್ಲಿ ಪಾಟ್ ಕಮಿನ್ಸ್ ಸಿಕ್ಸರ್ ಹೊಡೆಯುವ ಯತ್ನ ಮಾಡಿದರು. ಆದರೆ, ಕೊಹ್ಲಿ ಒಂದೇ ಕೈನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications