
ಸ್ಟಾರ್ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಂ ಇಂಡಿಯಾ
ಭಾರತದ ಸ್ಟಾರ್ ಪವರ್ ಬಗ್ಗೆ ಯಾರಿಗೂ ಅನುಮಾನವಿಲ್ಲ. ಭಾರತ ಬೃಹತ್ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ರೋಹಿತ್ ಶರ್ಮಾ ನಾಯಕತ್ವದ ಶ್ರೇಷ್ಠತೆಯನ್ನು ಭಾರತವೂ ನಿರೀಕ್ಷಿಸುತ್ತಿದೆ. ಆದರೆ ರೋಹಿತ್ ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನ ಅಷ್ಟೊಂದು ಚೆನ್ನಾಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಡಕೌಟ್ ಆದ್ರು. ಇದೀಗ ಟಿ20 ವಿಶ್ವಕಪ್ ಆರಂಭವಾಗಲಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಲ್ಯಾನ್ಸ್ ಕ್ಲೂಸ್ನರ್ ರೋಹಿತ್ ಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಆತುರಕ್ಕೆ ಬೀಳಬಾರದು!
''ರೋಹಿತ್‌ಗೆ ವೇಗವಾಗಿ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ. ಏಕೆಂದರೆ ಅವನು ಸಾಕಷ್ಟು ವೇಗವಾಗಿರುತ್ತಾನೆ. ಆಕ್ರಮಣಕಾರಿ ಮತ್ತು ನೈಸರ್ಗಿಕ ಸ್ವಭಾವದವರು. ಆದ್ದರಿಂದ ಯಾವುದನ್ನೂ ಬದಲಾಯಿಸಬೇಕಾಗಿಲ್ಲ. ಅವನ ಬಳಿ ಏನಿದೆ, ಅವನು ಹಾಗೆಯೇ ಮುಂದುವರಿಯುವುದು ಉತ್ತಮ. ಆದರೆ ಮ್ಯಾಚ್ ವಿನ್ನರ್ ಪಾತ್ರದಲ್ಲಿರುವ ರೋಹಿತ್ ಹುಷಾರಾಗಿರಬೇಕು. ಅವರು ಪವರ್‌ಪ್ಲೇನಲ್ಲಿ ತ್ವರಿತವಾಗಿ ರನ್ ಗಳಿಸುವ ಆಟಗಾರರಲ್ಲಿ ಒಬ್ಬರು" ಎಂದು ಕ್ಲೂಸ್ನರ್ ಹೇಳಿದರು.
IPL 2023: ಸಿಎಸ್‌ಕೆ ಸಹವಾಸ ಬೇಡ ಎನ್ನುತ್ತಿರುವುದ್ಯಾಕೆ ಜಡೇಜಾ? ಮಿನಿ ಹರಾಜಿಗೆ ಬರುತ್ತಾರ ಸ್ಟಾರ್ ಆಲ್ ರೌಂಡರ್

ರೋಹಿತ್ ತಮ್ಮ ಹಳೆಯ ಶೈಲಿಯನ್ನು ಮುಂದುವರಿಸಬೇಕು
ರೋಹಿತ್‌ಗೆ ಹಳೆಯ ಶೈಲಿಯಲ್ಲೇ ಮುಂದುವರಿಯುವಂತೆ ಕ್ಲೂಸ್ನರ್ ಸಲಹೆ ನೀಡಿದರು. ಕಳೆದ 20-25 ಪಂದ್ಯಗಳಲ್ಲಿ ಹೆಚ್ಚು ಸ್ಥಿರತೆಯೊಂದಿಗೆ ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈಗಿನ ದಾಳಿಯ ಶೈಲಿಯನ್ನು ಮುಂದುವರಿಸಬೇಕು ಎಂಬುದು ನನ್ನ ಸಲಹೆ. ಮೊದಲು ಏನು ಮಾಡಿದ್ದರೂ ಅದನ್ನು ಮುಂದುವರಿಸಬೇಕು. "ರೋಹಿತ್ ಇರುವಾಗ, ರನ್ ಗಳಿಸಲು ಭಾರತವು ಇನ್ನೊಬ್ಬ ಆಟಗಾರನನ್ನು ಹುಡುಕುವ ಅಗತ್ಯವಿಲ್ಲ" ಎಂದು ಕ್ಲೂಸ್ನರ್ ಸೇರಿಸಿದರು.
"ಹೆಸರು ನೆನಪಿಟ್ಟುಕೊಳ್ಳಿ": ಲಂಕಾ ವಿರುದ್ಧ ಗೆದ್ದ ನಮೀಬಿಯಾ ಉಲ್ಲೇಖಿಸಿದ ಸಚಿನ್ ಮಾಡಿದ ಟ್ವೀಟ್ ವೈರಲ್

ರೋಹಿತ್ ಶರ್ಮಾ ಬ್ಯಾಟಿಂಗ್ ನಿರ್ಣಾಯಕವಾಗಿರಲಿದೆ!
ರೋಹಿತ್ ಶರ್ಮಾ ಫಾರ್ಮ್, ಟೀಂ ಇಂಡಿಯಾ ಉತ್ತಮ ಆರಂಭ ನೀಡುವಲ್ಲಿ ಪ್ರಮುಖ ಪಾತ್ರಹಿಸಲಿದೆ. ರೋಹಿತ್ ಶರ್ಮಾ ಅವರ ಫಾರ್ಮ್ ಭಾರತಕ್ಕೆ ನಿರ್ಣಾಯಕವಾಗಿದೆ. ಓಪನಿಂಗ್‌ನಲ್ಲಿ ರೋಹಿತ್ ವೇಗದಲ್ಲಿ ರನ್ ಗಳಿಸಿದರು, ಆದರೆ ರಾಹುಲ್ ತಮ್ಮ ನೆಲದಲ್ಲಿ ನಿಂತು ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಇವರಿಬ್ಬರ ಜೊತೆಯಾಟ ಇತ್ತೀಚಿನ ಯಾವುದೇ ಪಂದ್ಯಗಳಲ್ಲಿ ಕ್ಲಿಕ್ ಆಗಿಲ್ಲ. ಗಾಯದ ವಿರಾಮದ ನಂತರ ರಾಹುಲ್ ಫಾರ್ಮ್‌ಗೆ ಮರಳಿದ್ದಾರೆ. ಆದರೆ ದೊಡ್ಡ ಸ್ಟ್ರೈಕ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಪವರ್‌ಪ್ಲೇನಲ್ಲಿ ರೋಹಿತ್ ಅವರ ಪ್ರದರ್ಶನ ನಿರ್ಣಾಯಕ ಅಂಶವಾಗಿದೆ.

ವಿದೇಶಿ ಪಿಚ್‌ನಲ್ಲಿ ಮಿಂಚಬಲ್ಲ ಸೂಪರ್ ಸ್ಟಾರ್ ಹಿಟ್‌ಮ್ಯಾನ್
ವಿದೇಶಿ ಪಿಚ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ರೋಹಿತ್, ಇಂಗ್ಲೆಂಡ್‌ನಲ್ಲಿ 2019 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಗಳಿಸಿದರು. ಟಿ-20 ವಿಶ್ವಕಪ್‌ನಲ್ಲೂ ರೋಹಿತ್ ಈ ಅಮೋಘ ಪ್ರದರ್ಶನ ಮುಂದುವರಿಸಬೇಕು. ಒಂದು ವೇಳೆ ರೋಹಿತ್ ಹಿನ್ನಡೆಅನುಭವಿಸಿದ್ರೆ, ಖಂಡಿತವಾಗಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಭರವಸೆಗೆ ದೊಡ್ಡ ಹಿನ್ನಡೆಯಾಗಲಿದೆ.


Click it and Unblock the Notifications












