T20 World Cup: ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್‌ರನ್ನು ಹೇಗೆ ಔಟ್ ಮಾಡಬೇಕು ಎಂದು ತಿಳಿಸಿದ ಇರ್ಫಾನ್ ಪಠಾಣ್

ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಪ್ರಸ್ತುತ ವಿಶ್ವದ ಇಬ್ಬರು ಅತ್ಯುತ್ತಮ ಟಿ20 ಬ್ಯಾಟರ್‌ಗಳು. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಗೆಲುವು ಸಾಧಿಸಬೇಕು ಎಂದರೆ, ಈ ಆರಂಭಿಕ ಜೋಡಿಯ ಪ್ರದರ್ಶನ ನಿರ್ಣಾಯಕವಾಗಿದೆ.
ಆದ್ದರಿಂದ, ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಗಮನ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಪ್ರದರ್ಶನದ ಮೇಲೆ ಇರುತ್ತದೆ. ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್, ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಬಾಬರ್ ಮತ್ತು ರಿಜ್ವಾನ್ ಅವರ ವಿರುದ್ಧ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದರ ಕುರಿತು ಮಾತನಾಡಿದ್ದಾರೆ.
"ಇಬ್ಬರೂ ಬ್ಯಾಟರ್ ಗಳಿಗೆ ಯಾವುದೇ ಅವಕಾಶ ನೀಡಬೇಡಿ, ವಿಶೇಷವಾಗಿ ರಿಜ್ವಾನ್, ಏಕೆಂದರೆ ಅವನು ಪವರ್‌ಪ್ಲೇನಲ್ಲಿ ಹೆಚ್ಚಿನ ರನ್ ಗಳಿಸಲು ನೋಡುವ ಬ್ಯಾಟರ್. ಬಾಬರ್ ಅಜಂ ರನ್ ಗಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಆ ಸಂದರ್ಭಗಳ ಬಗ್ಗೆ ನಮ್ಮ ಬೌಲರ್ ಗಳು ತಿಳಿದಿರಬೇಕು, ಆರಂಭದಲ್ಲೇ ಒತ್ತಡ ಹೇರುವ ಬಗ್ಗೆ ವಿಕೆಟ್ ಪಡೆಯಲು ಚಿಂತಿಸಬೇಕು" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಉತ್ತಮ ಲಯದೊಂದಿಗೆ ಬೌಲಿಂಗ್ ಮಾಡಬೇಕು
"ಮೊದಲನೆಯದಾಗಿ, ಉತ್ತಮ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಬೌಲಿಂಗ್ ಮಾಡಬೇಕು. ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡಿದಾಗ ಬ್ಯಾಟರ್‌ಗಳಿಗೆ ಹೆಚ್ಚಿನ ರನ್ ಗಳಿಸುವುದು ಕಷ್ಟವಾಗುತ್ತದೆ. ರಿಜ್ವಾನ್ ಬ್ಯಾಟಿಂಗ್ ಮಾಡುವಾಗ ಆದಷ್ಟು ಕೆಳಗಡೆ ಬೌಲಿಂಗ್ ಮಾಡಲು ಪ್ರಯತ್ನಿಸಬೇಕು, ಆತನಿಗೆ ನೀವು ರನ್ ಗಳಿಸಲು ಅವಕಾಶ ನೀಡದಿದ್ದರೆ, ಬೇಗನೆ ವಿಕೆಟ್ ಪಡೆಯಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಬಾಬರ್ ಅಜಮ್ ವಿಷಯಕ್ಕೆ ಬಂದಾಗ, ಬೌಲರ್ ಅವನನ್ನು ಎಲ್‌ಬಿಡಬ್ಲ್ಯೂನಿಂದ ಔಟ್ ಮಾಡಬೇಕಾಗಿದೆ, ಆದರೆ ನಮ್ಮ ಬೌಲರ್ ಗುರಿ ಅವನ ಮುಂಭಾಗದ ಕಾಲಿನ ಮೇಲೆ ಇರಬಾರದು, ಅದು ಅವನ ಕಾಲಿನ ಹಿಂದೆ ಇರಬೇಕು. ಅರ್ಷದೀಪ್ ಮತ್ತು ಭುವನೇಶ್ವರ್ ಕುಮಾರ್ ಇನ್ ಸ್ವಿಂಗ್ ಬೌಲಿಂಗ್ ಮೂಲಕ ಬಾಬರ್ ಅಜಂರನ್ನು ಔಟ್ ಮಾಡಲು ಅವಕಾಶವಿದೆ" ಎಂದು ಪಠಾಣ್ ಹೇಳಿದ್ದಾರೆ.

ಪವರ್‌ಪ್ಲೇ ವೇಳೆ ಸ್ಪಿನ್ ಬೌಲಿಂಗ್
ಪಾಕಿಸ್ತಾನ ತಂಡ ಸ್ಪಿನ್ ಬೌಲಿಂಗ್‌ಗೆ ಉತ್ತಮವಾಗಿ ಆಡಲ್ಲ ಎಂದು ತಿಳಿದಿದೆ. ಆದ್ದರಿಂದ ರೋಹಿತ್ ಶರ್ಮಾ, ಪವರ್‌ಪ್ಲೇ ವೇಳೆ, ಸ್ಪಿನ್ ಬೌಲಿಂಗ್ ಮಾಡಿಸುವ ಬಗ್ಗೆಯೂ ಆಲೋಚಿಸಬಹುದು. ಕನಿಷ್ಠ ಒಂದು ಓವರ್ ಸ್ಪಿನ್ ಮಾಡಿದರೆ, ವಿಕೆಟ್ ಪಡೆಯುವ ಸಾಧ್ಯತೆ ಇರುತ್ತದೆ ಎಂದು ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಇತ್ತೀಚೆಗೆ ಏಷ್ಯಾಕಪ್‌ನ ಫೈನಲ್‌ಗೆ ಪ್ರವೇಶಿಸಿದರೆ, ಭಾರತವು ಸೂಪರ್ 4 ಹಂತದಿಂದ ಹೊರಬಿತ್ತು. ಶ್ರೀಲಂಕಾ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications