
ಆರ್ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಮೇಯಪ್ಪನ್
ಐಪಿಎಲ್ 2020 ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಬ್ಬರು ಸ್ಥಳೀಯ ಬೌಲರ್‌ಗಳನ್ನು ತಮ್ಮ ಬ್ಯಾಟರ್‌ಗಳಿಗೆ ತರಬೇತಿ ನೆಟ್‌ಗಳಲ್ಲಿ ಸಹಾಯ ಮಾಡಲು ನೇಮಿಸಿಕೊಂಡರು. ಅವರಲ್ಲಿ ಒಬ್ಬರು ಅಂದಿನ ಯುಎಇ ನಾಯಕ ಅಹ್ಮದ್ ರಜಾ ಮತ್ತು ಎರಡನೆಯವರು ಕಾರ್ತಿಕ್ ಮೇಯಪ್ಪನ್.
20 ನೇ ವಯಸ್ಸಿನಲ್ಲಿಯೇ, ಮೇಯಪ್ಪನ್ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜರಿಗೆ ಬೌಲಿಂಗ್ ಮಾಡುವ ಸುವರ್ಣ ಅವಕಾಶವನ್ನು ಪಡೆದರು. ಅವರು ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಹಾಲ್ ಮತ್ತು ಆಡಮ್ ಝಂಪಾ ಜೊತೆ ನೆಟ್ಸ್‌ನಲ್ಲಿ ಸಮಯ ಕಳೆದರು.
ಟಿ20 ವಿಶ್ವಕಪ್‌ನಲ್ಲಿ ಮಿಂಚಬಲ್ಲ 5 ಬ್ಯಾಟರ್‌ಗಳು ಇವರು: ಭವಿಷ್ಯ ನುಡಿದ ನ್ಯೂಜಿಲೆಂಡ್ ದಿಗ್ಗಜ

2021ರಲ್ಲಿ ಸಿಎಸ್‌ಕೆ ತಂಡಕ್ಕೆ ನೆಟ್ ಬೌಲರ್
ಯುಎಇ 2021 ರಲ್ಲಿ ಐಪಿಎಲ್‌ನ ಎರಡನೇ ಹಂತಕ್ಕೆ ಆತಿಥ್ಯ ವಹಿಸಿತ್ತು. ಆ ಋತುವಿನ ವಿಜೇತರಾದ ಚೆನ್ನೈ ಸೂಪರ್ ಕಿಂಗ್ಸ್, ಪಂದ್ಯಾವಳಿಗೆ ತಮ್ಮ ನೆಟ್ ಬೌಲರ್‌ಗಳಲ್ಲಿ ಒಬ್ಬರಾಗಿ ಕಾರ್ತಿಕ್ ಮೇಯಪ್ಪನ್‌ರನ್ನು ನೇಮಿಸಿಕೊಂಡಿದ್ದರು.
ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಮೇಯಪ್ಪನ್‌ಗೆ ಸುವರ್ಣಾವಕಾಶ ಸಿಕ್ಕಿತು. ಕಾರ್ತಿಕ್ ಮೇಯಪ್ಪನ್ ಮುಂದೊಂದು ದಿನ ಐಪಿಎಲ್‌ನಲ್ಲಿ ಆಡುವ ಗುರಿ ಹೊಂದಿದ್ದಾರೆ.

ಮೇಯಪ್ಪನ್‌ಗೆ ಐಪಿಎಲ್‌ನಲ್ಲಿ ಆಡುವ ಆಸೆ
ಐಪಿಎಲ್ 2020 ರ ನಂತರ ಖಲೀಜ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಮೇಯಪ್ಪನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಲೆಗ್ ಸ್ಪಿನ್ನರ್ ಐಪಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
"ಐಪಿಎಲ್‌ನಲ್ಲಿ ಆಡುವುದು ನನ್ನ ಕನಸಾಗಿದೆ. ನಾನು ಹೆಚ್ಚಿನದಲ್ಲಿ ಸಾಧಿಸಲು ಬಯಸುತ್ತೇನೆ. ಮುಂಬರುವ ವರ್ಷಗಳಲ್ಲಿ ನಾನು ಐಪಿಎಲ್ ತಂಡದ ಭಾಗವಾಗಲು ಬಯಸುತ್ತೇನೆ. ನಾನು ನೆಟ್ ಬೌಲರ್ ಆಗಬಾರದು" ಎಂದು ಹೇಳಿದ್ದರು. ಟಿ20 ವಿಶ್ವಕಪ್‌ನಲ್ಲಿ ಅವರ ಬೌಲಿಂಗ್ ಪ್ರದರ್ಶನವನ್ನು ಪರಿಗಣಿಸಿ ಮುಂಬರುವ ಹರಾಜಿನಲ್ಲಿ 10 ಐಪಿಎಲ್ ತಂಡಗಳಲ್ಲಿ ಯಾರಾದರೂ ಅವರನ್ನು ಸಹಿ ಮಾಡುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

ಆಡಿದ ಮೊದಲನೇ ಪಂದ್ಯದಲ್ಲಿ ಪ್ರಶಸ್ತಿ
ಕಾರ್ತಿಕ್ ಮೇಯಪ್ಪನ್ ಕಳೆದ ವರ್ಷ ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ತಮ್ಮ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ನೀಲ್ ರಾಕ್ ಮತ್ತು ಮಾರ್ಕ್ ಅಡೈರ್ ಅವರನ್ನು ಔಟ್ ಮಾಡಿದ್ದರು.
ಮೇಯಪ್ಪನ್ ಮಾಂತ್ರಿಕ್ ಬೌಲಿಂಗ್ ಪ್ರದರ್ಶನದಿಂದ ಯುಎಇ 54 ರನ್‌ಗಳಿಂದ ಪಂದ್ಯವನ್ನು ಗೆದ್ದಿತ್ತು, ತಾವು ಆಡಿದ ಚೊಚ್ಚಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.


Click it and Unblock the Notifications












