T20 World Cup: ಭಾರತ-ಪಾಕಿಸ್ತಾನ ಪಂದ್ಯ ನೋಡಿ ಆಸ್ಟ್ರೇಲಿಯಾ ಆಟಗಾರ ಹೇಳಿದ್ದೇನು ಗೊತ್ತಾ?

ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 2022 ರ ಟಿ 20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾದ ವಿರುದ್ದ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟರು.
ಈ ಪಂದ್ಯದ ಬಗ್ಗೆ ಅಭಿಮಾನಿಗಳಿಂದ ಮೊದಲಾಗಿ ಲೆಜೆಂಡ್ ಕ್ರಿಕೆಟರ್ ವರೆಗೆ ಹಲವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಇದು ಶ್ರೇಷ್ಠ ಪಂದ್ಯಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಕೂಡ ಈ ಬಗ್ಗೆ ಮಾತನಾಡಿದ್ದು, ಭಾರತ-ಪಾಕಿಸ್ತಾನ ಪಂದ್ಯವನ್ನು ಹಾಡಿ ಹೊಗಳಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಪಂದ್ಯ ಎಂದು ಮಿಚೆಲ್ ಮಾರ್ಷ್ ಹೇಳಿದ್ದಾರೆ. ಇನ್ನೂ ಮೂರು ವಾರಗಳ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಇಂತಹ ಪಂದ್ಯಗಳನ್ನು ನಿರೀಕ್ಷೆ ಮಾಡುತ್ತೇನೆ ಎಂದು ಹೇಳಿದ್ದಾರೆ.
"ಭಾರತ-ಪಾಕಿಸ್ತಾನ ಪಂದ್ಯದಲ್ಲೇ ವಿಶ್ವಕಪ್ ಅನ್ನು ನಿಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ. ಅದಕ್ಕಿಂತ ಉತ್ತಮ ಪಂದ್ಯವನ್ನು ನಾವು ನೋಡುವುದು ಕಷ್ಟ. ಅದ್ಭುತವಾದ ಮೂರು ವಾರಗಳು ಇನ್ನೂ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಯಾವಾಗಲೂ ರೋಚಕವಾಗಿ ಇರುತ್ತದೆ. ನಾನು ಏನನ್ನು ಊಹಿಸಲು ಸಾಧ್ಯವಿಲ್ಲ. ಜನರ ಗುಂಪಿನ ಭಾಗವಾಗಲು ಇಷ್ಟಪಡುತ್ತೇನೆ" ಎಂದು ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾದ ಪಂದ್ಯದ ಮುನ್ನಾದಿನದ ಪತ್ರಿಕಾಗೋಷ್ಠಿಯಲ್ಲಿ ಮಾರ್ಷ್ ಹೇಳಿದರು.

ಕೊಹ್ಲಿ ಆಟಕ್ಕೆ ಮನಸೋತ ಮಾರ್ಷ್
ಟಿ20 ಪಂದ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ವಿರಾಟ್ ಕೊಹ್ಲಿ ಬಗ್ಗೆ ಮಾರ್ಷ್ ಪ್ರಶಂಸೆ ವ್ಯಕ್ತಪಡಿಸಿದರು, ಅಸಾಧ್ಯವಾದ ಸಂದರ್ಭಗಳಲ್ಲಿ ಭಾರತವು 160 ರನ್‌ಳ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದರು.
"ವಿರಾಟ್ ಕೊಹ್ಲಿ ಆಟ ಅದ್ಭುತ, ಅವರ ವೃತ್ತಿಜೀವನದ ಬಗ್ಗೆ ಯೋಚಿಸಿದಾಗ ವಿರಾಟ್ ಕೊಹ್ಲಿ ರನ್‌ಗಳ ಕೊರತೆಯನ್ನು ಅನುಭವಿಸಿದ್ದರು. ಆದರೆ, ಈ ವಿಶ್ವಕಪ್‌ನಲ್ಲಿ ಅವರು ಮರೆಯಲಾಗದ ಇನ್ನಿಂಗ್ಸ್ ಆಡಿದ್ದಾರೆ. ಇದು ನಂಬಲಾಗದ ಇನ್ನಿಂಗ್ಸ್, ನಂಬಲಾಗದ ಪಂದ್ಯ, ಮುಂದಿನ ಪಂದ್ಯಗಳಲ್ಲಿ ಅವರು ಇದೇ ರೀತಿ ಆಟವನ್ನು ಮುಂದುವರೆಸುವ ವಿಶ್ವಾಸವಿದೆ" ಎಂದು ಮಾರ್ಷ್ ಹೇಳಿದ್ದಾರೆ.
India Vs Pakistan : ಭಾರತದ ಗೆಲುವಿಗೆ ಇವರ ಕೊಡುಗೆಯೂ ದೊಡ್ಡದು ಎಂದ ಮಾಜಿ ಕ್ರಿಕೆಟರ್

ನ್ಯೂಜಿಲೆಂಡ್ ವಿರುದ್ಧ ಸೋತ ಆಸ್ಟ್ರೇಲಿಯಾ
ಸೂಪರ್ 12 ಸುತ್ತಿನ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ಚಾಂಪಿಯನ್ ಆಸ್ಟ್ರೇಲಿಯಾ ತಂಡ ಕಿವೀಸ್ ಮುಂದೆ ಮಂಡಿಯೂರಿತು. ಕಳೆದ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದ ನ್ಯೂಜಿಲೆಂಡ್ ತನ್ನ ಸೇಡು ತೀರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 200 ರನ್ ಗಳಿಸಿತು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರು ಆಸ್ಟ್ರೇಲಿಯಾ ಈ ಮೊತ್ತದ ಸನಿಹ ಕೂಡ ಬರಲು ಸಾಧ್ಯವಾಗಲಿಲ್ಲ. 111 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 89 ರನ್‌ಗಳಿಂದ ಸೋಲನುಭವಿಸಿತು.

ಶ್ರೀಲಂಕಾ ವಿರುದ್ಧ ಗೆಲ್ಲುತ್ತಾ ಆಸ್ಟ್ರೇಲಿಯಾ?
ಮೊದಲನೇ ಪಂದ್ಯದಲ್ಲಿ ಮುಖಭಂಗ ಅನುಭವಿಸಿರುವ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಬೇಕಾದರೆ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಶ್ರೀಲಂಕಾ ತಂಡಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಸಾಕಷ್ಟು ಬಲಿಷ್ಠವಾಗಿದೆ. ಅತ್ಯುತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಪಡೆಯನ್ನು ಹೊಂದಿದೆ.
ಶ್ರೀಲಂಕಾ ಸೂಪರ್ 12 ಸುತ್ತಿನ ತನ್ನ ಮೊದಲನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸುಲಭದ ಜಯ ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಏಷ್ಯಾಕಪ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿರುವ ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ಕೂಡ ಜಯ ಗಳಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications