ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India Vs Pakistan : ಭಾರತದ ಗೆಲುವಿಗೆ ಇವರ ಕೊಡುಗೆಯೂ ದೊಡ್ಡದು ಎಂದ ಮಾಜಿ ಕ್ರಿಕೆಟರ್

India Vs Pakistan: Former Indian Cricketer Madan Lal Praises Team India Bowling Effort

ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆದ 2022 ರ ಐಸಿಸಿ ಟಿ 20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಯ ಅಜೇಯ 82 ರನ್‌ಗಳ ನೆರವಿನಿಂದ ಭಾರತವು ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ವಿರಾಟ್ ಕೊಹ್ಲಿ ಆಟದ ಬಗ್ಗೆ ಇಡೀ ಜಗತ್ತೇ ಕೊಂಡಾಡುತ್ತಿದೆ. ಕೊಹ್ಲಿ ಆರ್ಭಟದ ನಡುವೆಯೂ, ಭಾರತದ ಮಾಜಿ ಕ್ರಿಕೆಟರ್ ಮದನ್‌ ಲಾಲ್ ಭಾರತೀಯ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ: ICC ಟೂರ್ನಿಯಲ್ಲಿ ಈತನಿಗಿಲ್ಲ ಸರಿಸಾಟಿ!

ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಂತರ, ನಾಯಕನ ನಿರೀಕ್ಷೆಯಂತೆ ಭಾರತದ ಬೌಲರ್‌ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಅರ್ಷದೀಪ್ ಸಿಂಗ್, ತಮ್ಮ ಮೊದಲ ಎಸೆತದಲ್ಲೇ ಪಾಕಿಸ್ತಾನದ ನಾಯಕ ಬಾಬರ್ ಅಜಮ್‌ರನ್ನು ಔಟ್ ಮಾಡಿದರು, ಎರಡನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್‌ರನ್ನು ಔಟ್ ಮಾಡಿದರು.

ಭಾರತದ ಆರನೇ ಬೌಲರ್ ಆಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಧ್ಯದಲ್ಲಿ ಕೆಲವು ನಿರ್ಣಾಯಕ ವಿಕೆಟ್ ಗಳನ್ನು ಕಬಳಿಸಿ ಪಾಕಿಸ್ತಾನದ ರನ್ ಗಳಿಕೆಗೆ ಕಡಿವಾಣ ಹಾಕಿದರು.

ವಿಶ್ವಕಪ್ ಮೊದಲ ಪಂದ್ಯದಲ್ಲೇ ಅರ್ಶ್‌ದೀಪ್ ಮಿಂಚು

ವಿಶ್ವಕಪ್ ಮೊದಲ ಪಂದ್ಯದಲ್ಲೇ ಅರ್ಶ್‌ದೀಪ್ ಮಿಂಚು

ಅರ್ಶ್‌ದೀಪ್ ಸಿಂಗ್ ತಮ್ಮ ಮೊದಲ ಎರಡು ಓವರ್ ಗಳಲ್ಲಿ ಪಾಕಿಸ್ತಾದ ಆರಂಭಿಕರಾದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್‌ರನ್ನು ಔಟ್ ಮಾಡುವ ಮೂಲಕ ಆಘಾತ ನೀಡಿದರೆ. ನಂತರ ತಮ್ಮ ಮೂರನೇ ಓವರ್ ನಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಆಸಿಫ್ ಅಲಿಯನ್ನು ಬೌನ್ಸರ್ ಮೂಲಕ ಔಟ್ ಮಾಡಿದರು.

ಹಿರಿಯ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಭಾರತವು ಈ ನಿರ್ಣಾಯಕ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನವನ್ನು 159 ರನ್‌ಗಳಿಗೆ ನಿರ್ಬಂಧಿಸಿತು.

IND vs PAK: ಪಾಕ್ ವಿರುದ್ಧ ಗೆದ್ದ ಹೊರತಾಗಿ ವಿಶಿಷ್ಟ ದಾಖಲೆ ಬರೆದ ಕೊಹ್ಲಿ-ಪಾಂಡ್ಯ ಜೋಡಿ

ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ

ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ

ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಭಾರತೀಯ ಬೌಲರ್‌ಗಳು ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದರ ಕುರಿತು ಭಾರತದ 1983 ರ ವಿಶ್ವಕಪ್ ವಿಜೇತ ತಾರೆ ಮದನ್ ಲಾಲ್ ವಿವರಣೆ ನೀಡಿದ್ದಾರೆ.

"ನಮ್ಮ ಬೌಲಿಂಗ್ ಘಟಕವು ಯಾವಾಗಲೂ ತಮ್ಮ ಸ್ಟಾಂಡರ್ಡ್‌ ಅನ್ನು ಹೆಚ್ಚಿಸಿದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವಾಗ ಭಾರತ ಬೌಲರ್ ಗಳು ಅಸಾಧಾರಣರಾಗಿದ್ದಾರೆ. ಭಾರತೀಯ ವಿಕೆಟ್‌ಗಳಲ್ಲಿ ಬೌಲಿಂಗ್ ಮತ್ತು ಆಸ್ಟ್ರೇಲಿಯಾ ಬೌಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಆದರೂ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶನ

ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶನ

ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ, ಒಂದು ವರ್ಷದ ಬಳಿಕ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅವರು ಕೊನೆಯ ಬಾರಿಗೆ ಟಿ20 ವಿಶ್ವಕಪ್‌ನ ಹಿಂದಿನ ಆವೃತ್ತಿಯಲ್ಲಿ ಭಾರತದ ಪರ ಆಡಿದ್ದರು.

ಪವರ್‌ಪ್ಲೇಯಲ್ಲಿ ಪಾಕಿಸ್ತಾನದ ಇಬ್ಬರು ಬ್ಯಾಟರ್ ಔಟಾದ ನಂತರ, ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ 76 ರನ್‌ಗಳ ಜೊತೆಯಾಟ ಆಡಿದರು. ಇಫ್ತಿಕರ್ ಅವರು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದಾಗ ಭಾರತೀಯ ಸ್ಪಿನ್ನರ್‌ಗಳಿಗೆ ಬೆದರಿಕೆ ಹಾಕಿದರು, ಮೂರು ಸಿಕ್ಸರ್ ಅಕ್ಷರ್ ಪಟೇಲ್ ಓವರ್‌ನಲ್ಲಿ ಬಂದವು. ಆ ದೊಡ್ಡ ಹಿಟ್‌ಗಳೊಂದಿಗೆ ಹೆಚ್ಚಿನ ರನ್ ಗಳಿಸಲು ನೋಡುತ್ತಿದ್ದ ಇಫ್ತಿಕರ್ ಅಹ್ಮದ್‌ರನ್ನು ಶಮಿ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.

ಬೌಲರ್ ಪುನರಾಗಮನ ಮಾಡುವುದು ಕಷ್ಟ

ಬೌಲರ್ ಪುನರಾಗಮನ ಮಾಡುವುದು ಕಷ್ಟ

ನಾಲ್ಕು ಓವರ್‌ಗಳಲ್ಲಿ ಶಮಿ 25ಕ್ಕೆ 1 ವಿಕೆಟ್‌ ಪಡೆದಿದ್ದರೂ, ಶಮಿ ಇನ್ನೂ ತಮ್ಮ ವೇಗಕ್ಕೆ ಮರಳಿಲ್ಲ ಎಂದು ಮದನ್ ಲಾಲ್ ಹೇಳಿದ್ದಾರೆ. ಬೌಲರ್‌ಗೆ ಪುನರಾಗಮನ ಮಾಡುವುದು ಎಷ್ಟು ಕಷ್ಟ ಎಂದು ಮದನ್ ಲಾಲ್ ವಿವರಿಸಿದ್ದಾರೆ.

"ಮೊಹಮ್ಮದ್ ಶಮಿ ಸ್ವಲ್ಪ ನಿಧಾನಗತಿಯಲ್ಲಿದ್ದರು ಎಂದು ನಾನು ಭಾವಿಸುತ್ತೇನೆ. ಇಫ್ತಿಕರ್ ಅಹ್ಮದ್ ವಿಕೆಟ್ ಪಡೆಯಲು ಉತ್ತಮ ಎಸೆತವನ್ನು ಬೌಲ್ ಮಾಡಿದರು ಮತ್ತು ಅದು ನಿರ್ಣಾಯಕ ವಿಕೆಟ್ ಆಗಿತ್ತು. ನೀವು ಬಹಳ ಸಮಯದ ನಂತರ ಆಟವನ್ನು ಆಡುತ್ತಿದ್ದರೆ, ನಂತರ ಪ್ರವೇಶಿಸಲು ಸಮಯ ತೆಗೆದುಕೊಳ್ಳುತ್ತದೆ." ಎಂದು ಅವರು ಹೇಳಿದರು. ಭಾರತವು ಟಿ20 ವಿಶ್ವಕಪ್‌ನ ಗ್ರೂಪ್ 2 ಸೂಪರ್ 12 ಹಂತದ ತನ್ನ ಮುಂದಿನ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 27 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ.

Story first published: Monday, October 24, 2022, 17:00 [IST]
Other articles published on Oct 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X