T20 World Cup: ಮೊಹಮ್ಮದ್ ಶಮಿ ಅನುಭವ ತಂಡಕ್ಕೆ ಸಹಾಯಕ ಎಂದ ರಾಬಿನ್ ಉತ್ತಪ್ಪ

ಮೊಹಮ್ಮದ್ ಶಮಿ ಟೀಂ ಇಂಡಿಯಾದ 15 ಸದಸ್ಯರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಐಪಿಎಲ್ ಬಳಿಕ ಅವರು ಒಂದು ಪಂದ್ಯವನ್ನು ಕೂಡ ಆಡದಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಶಮಿ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್‌ಗೆ ಮುನ್ನ ಅವರು ಪಂದ್ಯಗಳನ್ನು ಆಡದಿರುವುದು ಟಿ20 ವಿಶ್ವಕಪ್‌ನಲ್ಲಿ ಅವರ ಆಟದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅವರು ಹೇಳಿದ್ದಾರೆ. ಶಮಿ ಅನುಭವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಕಡೆಗಣಿಸಿ ಜಸ್ಪ್ರೀತ್ ಬುಮ್ರಾ ಬದಲಿಗೆ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡಿರುವುದಾಗಿ ಬಿಸಿಸಿಐ ಶುಕ್ರವಾರ ಘೋಷಿಸಿತು. 32 ವರ್ಷದ ಅನುಭವಿ ಟಿ20 ಕ್ರಿಕೆಟಿಗನಾಗಿದ್ದರೂ, ಅವರು ನವೆಂಬರ್ 2021 ರಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿಲ್ಲ. ಆದರೂ, ಈ ಬಾರಿ ಐಪಿಎಲ್‌ನಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದ್ದರು.

ಶಮಿ ಅನುಭವ ಟೀಂ ಇಂಡಿಯಾಕ್ಕೆ ಸಹಾಯಕ
ಶಮಿ ಆಯ್ಕೆ ಬಗ್ಗೆ ಮಾತನಾಡಿರುವ ರಾಬಿನ್ ಉತ್ತಪ್ಪ, ವಿಶ್ವಕಪ್ ಆರಂಭಕ್ಕೆ ಮುನ್ನ ಇರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಶಮಿ ತನ್ನ ಲಯವನ್ನು ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ. ಆತನ ಅನುಭವ ಪ್ರಮುಖ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಲಿಗೆ ಕೆಲಸಕ್ಕೆ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯಾವಳಿಯು ಪ್ರಾರಂಭವಾಗುವ ಮೊದಲು ಅವರು ಒಂದೆರಡು ಅಭ್ಯಾಸ ಪಂದ್ಯಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಶಮಿಗೆ ತಮ್ಮ ಬೌಲಿಂಗ್ ಬಗ್ಗೆ ಸಾಕಷ್ಟು ಸ್ಪಷ್ಟತೆ ಇದೆ. ಅವರು ಬೌಲಿಂಗ್ ಸಿಬ್ಬಂದಿಯೊಂದಿಗೆ ಕುಳಿತುಕೊಂಡು ತಮ್ಮ ಯೋಜನೆಗಳ ಬಗ್ಗೆ ಚರ್ಚಿಸಿ ಸೂಕ್ತವಾಗಿ ಪ್ರದರ್ಶನ ನೀಡುತ್ತಾರೆ ಎಂದು ಉತ್ತಪ್ಪ ಹೇಳಿದ್ದಾರೆ.
ಟಿ20 ವಿಶ್ವಕಪ್ 2022: ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅಧಿಕೃತ ಆಯ್ಕೆ, ಅಂತಿಮ 15 ಆಟಗಾರರ ಸ್ಕ್ವಾಡ್ ಇಲ್ಲಿದೆ

ಬೇಗನೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ
ಶಮಿಗೆ ಸ್ಪಷ್ಟತೆಯ ಕೊರತೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ವಾಸ್ತವವಾಗಿ, ಅವರಂತಹವರಿಗೆ ಇದು ಸರಳವಾಗಿರುತ್ತದೆ. ಟಿ20 ಮಾದರಯಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಲು ಮುಂದಾಗುವುದಿಲ್ಲ. ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಲು ಯೋಜಿಸುತ್ತಾರೆ ಎಂದು ಉತ್ತಪ್ಪ ಹೇಳಿದ್ದಾರೆ.
ಅರ್ಷದೀಪ್ ಸಿಂಗ್ ಜೊತೆಗೆ ಹನ್ನೊಂದರಲ್ಲಿ ಶಮಿ ಅವರ ಮೊದಲ ಆಯ್ಕೆಯ ಬೌಲರ್‌ಗಳಲ್ಲಿ ಒಬ್ಬರಾಗುತ್ತಾರೆ ಎಂದು ಉತ್ತಪ್ಪ ಹೇಳಿದ್ದಾರೆ. ಆದರೆ ಭಾರತವು ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಡಗೈ ವೇಗದ ಬೌಲರ್ ಹೆಚ್ಚು ಪರಿಣಾಮಕಾರಿ
ಶಮಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಉತ್ತಪ್ಪ ಹೇಳಿದ್ದಾರೆ. ಎಷ್ಟು ವೇಗದ ಬೌಲರ್ ಜೊತೆ ಆಡಲು ನಿರ್ಧರಿಸುತ್ತೀರಿ ಎನ್ನುವದರ ಮೇಲೆ ಆಯ್ಕೆ ನಿಂತಿದೆ ಎಂದು ಭಾವಿಸುತ್ತಾರೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ, ಆದರೆ ಎಡಗೈ ಬೌಲರ್ ಹೆಚ್ಚಿನ ಪರಿಣಾಮ ಉಂಟು ಮಾಡುತ್ತಾರೆ ಎಂದು ಉತ್ತಪ್ಪ ಹೇಳಿದ್ದಾರೆ.
ಅರ್ಶ್ದೀಪ್ ಕೂಡ ಹೊಸ ಚೆಂಡಿನೊಂದಿಗೆ ಅಸಾಧಾರಣವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನಾನು ಅರ್ಷದೀಪ್ ಸಿಂಗ್, ಶಮಿ, ಭುವನೇಶ್ವರ್ ಆಡುವುದನ್ನು ನೋಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ಶಮಿ ಹೇಗೆ ಬೌಲಿಂಗ್ ಮಾಡಬೇಕು ಎಂದು ತಿಳಿಸಿದ ಉತ್ತಪ್ಪ
ಭಾರತವು ಶಮಿಯನ್ನು ಮೂರು ಹಂತಗಳಲ್ಲಿ ಬೌಲಿಂಗ್ ಮಾಡಲು ನೋಡುತ್ತದೆ ಎಂದು ಉತ್ತಪ್ಪ ಹೇಳಿದರು. ಪವರ್ ಪ್ಲೇನಲ್ಲಿ ಶಮಿ ಎರಡು ಓವರ್ ಮಾಡಬೇಕು, ಮಧ್ಯದದಲ್ಲಿ ಒಂದು ಓವರ್ ಮತ್ತು ಸ್ಲಾಗ್‌ನಲ್ಲಿ ಒಂದು ಓವರ್ ಮಾಡಬೇಕು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. 2022ರ ಐಪಿಎಲ್‌ನಲ್ಲಿ ಹೊಸ ಚೆಂಡಿನೊಂದಿಗೆ ಶಮಿ ಉತ್ತಮ ಪ್ರದರ್ಶನ ನೀಡಿರುವುದು ಇದಕ್ಕೆ ಕಾರಣವಾಗಿದೆ.
ಸ್ಲಾಗ್ ಓವರ್ ಗಳಲ್ಲಿ ಭುವಿ, ಹರ್ಷಲ್ ಬದಲಾಗಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್ ಮಾಡಿದರೆ ಉತ್ತಮವಾಗಿರುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ. ಟೀಂ ಇಂಡಿಯಾ ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲನೇ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications