Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK : ಆತನ ಬೌಲಿಂಗ್ ಎದುರಿಸಲು ರೋಹಿತ್, ರಾಹುಲ್‌ಗೆ ಸಚಿನ್ ನೀಡಿದ ಸಲಹೆ ಏನು ಗೊತ್ತಾ?

T20 World Cup: Sachin Tendulkar Give Tips To KL Rahul And Rohit Sharma Ahead Of India-Pakistan Match

ಶಾಹೀನ್ ಶಾ ಆಫ್ರಿದಿ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಎಲ್ಲರ ಗಮನ ಈ ಬೌಲರ್ ಮೇಲಿದೆ. ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಆರಂಭಿಕರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾರನ್ನು ಬೇಗನೆ ಔಟ್ ಮಾಡಿದ್ದರು, ನಂತರ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದರು.

ಆಸ್ಟ್ರೇಲಿಯಾದ ಪಿಚ್‌ಗಳು ವೇಗಿಗಳಿಗೆ ಅನುಕೂಲಕರವಾಗಿದ್ದು, ಶಾಹೀನ್ ಅಫ್ರಿದಿ ಮತ್ತಷ್ಟು ಮಾರಕವಾಗುವ ಸಾಧ್ಯತೆ ಇದೆ. ಈ ಬೆನ್ನಲ್ಲೇ, ಭಾರತದ ಕ್ರಿಕೆಟ್ ದಂತಕಥೆ, ಶಾಹೀನ್ ಅಫ್ರಿದಿಯನ್ನು ಎದುರಿಸುವ ಬಗ್ಗೆ ರೋಹಿತ್ ಶರ್ಮಾ ಮತ್ತು ಕೆಎಲ್‌ ರಾಹುಲ್‌ಗೆ ಸಲಹೆ ನೀಡಿದ್ದಾರೆ.

ಸಚಿನ್ ತಾವು ಕ್ರಿಕೆಟ್ ಆಡುವ ಸಮಯದಲ್ಲಿ ವಾಸೀಂ ಅಕ್ರಮ್ ವಿರುದ್ಧ ಹೇಗೆ ಆಡುತ್ತಿದ್ದರು ಎನ್ನುವುದ ಉದಾಹರಣೆ ನೀಡಿದ್ದಾರೆ. ಅಕ್ರಮ್ ಸಾರ್ವಕಾಲಿಕ ಶ್ರೇಷ್ಠ ಎಡಗೈ ವೇಗದ ಬೌಲರ್ ವಿರುದ್ಧ ಆಡಲು ಯಾವ ತಂತ್ರ ಬಳಸುತ್ತಿದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ವಾಸೀಂ ಅಕ್ರಂ ಬೌಲಿಂಗ್‌ನಲ್ಲಿ ನಾನು ಯಾವಾಗಲು ನೇರವಾಗಿ ಆಡಲು ಪ್ರಯತ್ನಿಸುತ್ತಿದ್ದೆ ಎಂದು ಹೇಳಿದ್ದಾರೆ.

T20 World Cup: Sachin Tendulkar Give Tips To KL Rahul And Rohit Sharma Ahead Of India-Pakistan Match

ಶಾಹೀನ್ ಅಫ್ರಿದಿ ಆಕ್ರಮಣಕಾರಿ ಬೌಲರ್

"ಶಾಹೀನ್ ಆಕ್ರಮಣಕಾರಿ ಬೌಲರ್ ಮತ್ತು ಅವರು ವಿಕೆಟ್‌ಗಳನ್ನು ಪಡೆಯಲು ನೋಡುತ್ತಾರೆ. ಅವರು ಚೆಂಡನ್ನು ಸ್ವಿಂಗ್ ಮಾಡಲು ಯೋಚಿಸುತ್ತಾರೆ. ವೇಗದ ಸಹಾಯದಿಂದ ಗಾಳಿಯಲ್ಲಿ ಮತ್ತು ಪಿಚ್‌ನ ಹೊರಗಡೆ ಬ್ಯಾಟರ್ ಗಳಿಗೆ ತೊಂದರೆ ಕೊಡುತ್ತಾರೆ. ಆದ್ದರಿಂದ ಅವನ ಬೌಲಿಂಗ್‌ನಲ್ಲಿ ನೇರವಾಗಿ ಆಡುವ ತಂತ್ರ ಇರಬೇಕು, ಅಡ್ಡ ಬ್ಯಾಟ್‌ನಲ್ಲಿ ಆಡಬಾರದು" ಎಂದು ಸಲಹೆ ನೀಡಿದರು.

ಚೆಂಡನ್ನು ಎಕ್ಸ್‌ಪ್ರೆಸ್ ವೇಗದಲ್ಲಿ ಬಲಗೈ ಆಟಗಾರರಿಗೆ ಮರಳಿ ತರುವುದು ಮತ್ತು ವೇಗದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಳ್ಳುವುದು ಅವರ ದೊಡ್ಡ ಶಕ್ತಿಯಾಗಿದೆ. ಅವರು ಉತ್ತಮ ಶಾರ್ಟ್ ಬಾಲ್ ಅನ್ನು ಹೊಂದಿದ್ದಾರೆ, ಅದು ಬ್ಯಾಟರ್‌ಗಳನ್ನು ಆಡಲು ಉತ್ತೇಜಿಸಬಹುದು ಮತ್ತು ಬ್ಯಾಟರ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಬಹುದು ಎಂದು ಹೇಳಿದರು.

"ಆತುರವಾಗಿ ಅವರ್ ಎಸೆತಗಳನ್ನು ಹೊಡೆಯಲು ಮುಂದಾಗಬಾರದು, ಆದಷ್ಟು ಮುಂಭಾಗದಲ್ಲಿ ಆಡಲು ಪ್ರಯತ್ನಿಸಬೇಕು" ಎಂದು ಅವರು ಹೇಳಿದರು. ಇನ್ನಿಂಗ್ಸ್ ಆರಂಭದಲ್ಲಿ ವೇಗಿಗಳಿಗೆ ಪಿಚ್ ನೆರವಾಗುತ್ತದೆ, ಆದ್ದರಿಂದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಎಚ್ಚರಿಕೆಯಿಂದ ಆಡಬೇಕು. ಕೆಲವು ಎಸೆತಗಳನ್ನು ಎದುರಿಸಿದ ನಂತರ ಬಾಲ್ ಬ್ಯಾಟ್‌ಗೆ ಸುಲಭವಾಗಿ ಬರಲಿದೆ ಆಮೇಲೆ, ರನ್ ಗಳಿಸುವ ಬಗ್ಗೆ ಚಿಂತಿಸಬಹುದು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

Story first published: Saturday, October 22, 2022, 20:45 [IST]
Other articles published on Oct 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+