
ಮೊಹಮ್ಮದ್ ಶಮಿ ಭಾರತ ತಂಡದ ಭಾಗವಾಗಬೇಕಿತ್ತು
ಇನ್ನು ಉಮ್ರಾನ್ ಮಲಿಕ್, ಶುಬ್‌ಮನ್ ಗಿಲ್ ಮತ್ತು ಮೊಹಮ್ಮದ್ ಶಮಿ ಭಾರತ ತಂಡದ ಭಾಗವಾಗಬೇಕಿತ್ತು ಎಂದು ವೆಂಗ್‌ಸರ್ಕರ್ ಹೇಳಿದ್ದು, ಟಿ20 ವಿಶ್ವಕಪ್‌ಗಾಗಿ ಮೂವರು ಅದ್ಭುತ ಐಪಿಎಲ್ ಋತುವನ್ನು ಹೊಂದಿದ್ದಾರೆ ಎಂದರು.
ಐಪಿಎಲ್ ಟ್ರೋಫಿಯನ್ನು ತಮ್ಮ ಉದ್ಘಾಟನಾ ಋತುವಿನಲ್ಲಿ ಗುಜರಾತ್ ಟೈಟನ್ಸ್ ಗೆಲ್ಲುವಲ್ಲಿ ಮೊಹಮ್ಮದ್ ಶಮಿ ಮತ್ತು ಶುಬ್‌ಮನ್ ಗಿಲ್ ಪ್ರಮುಖರಾಗಿದ್ದರು, ಆದರೆ ಉಮ್ರಾನ್ ಮಲಿಕ್ ಅವರು ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ತಮ್ಮ ವೇಗದ ಪೇಸ್‌ನಿಂದ ಪ್ರಭಾವಿತರಾದರು.

ಸೂರ್ಯಕುಮಾರ್ 13 ಟಿ20 ಪಂದ್ಯಗಳಲ್ಲಿ 340 ರನ್
"ನಾನು ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್ ಮತ್ತು ಶುಬ್‌ಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತಿದ್ದೆ. ಅವರಿಗೆ ಟಿ20 ಪಂದ್ಯಗಳಲ್ಲಿ ದೀರ್ಘಾವಧಿಯ ಅವಕಾಶ ನೀಡುತ್ತಿದ್ದೆ, ಏಕೆಂದರೆ ಅವರೆಲ್ಲರೂ ಅದ್ಭುತ ಐಪಿಎಲ್ ಋತುವನ್ನು ಹೊಂದಿದ್ದರು," ಎಂದು ದಿಲೀಪ್ ವೆಂಗ್‌ಸರ್ಕರ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸೂರ್ಯಕುಮಾರ್ ಯಾದವ್ ಅವರು ವ್ಯಾಪಕ ಶ್ರೇಣಿಯ ಶಾಟ್‌ಗಳನ್ನು ಹೊಂದಿದ್ದಾರೆ ಮತ್ತು 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಿಂದ 13 ಟಿ20 ಪಂದ್ಯಗಳಲ್ಲಿ 340 ರನ್ ಮತ್ತು 28 ಏಕದಿನ ಪಂದ್ಯಗಳಲ್ಲಿ 811 ರನ್ ಗಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ನಂ.5ರಲ್ಲಿ ಬ್ಯಾಟಿಂಗ್ ಮಾಡಬೇಕು
"ಯಾರು ಯಾವ ಸಂಖ್ಯೆಯಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದರ ಕುರಿತು ನಾನು ನಿಜವಾಗಿಯೂ ಪ್ರತಿಕ್ರಿಯಿಸಲಾರೆ. ಇದು ತಂಡದ ಚಿಂತಕರ ಚಾವಡಿ, ಕೋಚ್, ನಾಯಕ ಮತ್ತು ಉಪನಾಯಕನಿಗೆ ಬಿಟ್ಟದ್ದು. ಆದರೆ ನಂ.4ಕ್ಕೆ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ನಂ.5ಕ್ಕೆ ಬ್ಯಾಟಿಂಗ್ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಅವರು ಉತ್ತಮ ಫಿನಿಶರ್ ಆಗಬಹುದು," ಎಂದು ಮಾಜಿ ಕ್ರಿಕೆಟಿಗ ವೆಂಗ್‌ಸರ್ಕರ್ ಹೇಳಿದರು.
"ಟಿ20 ಪಂದ್ಯಗಳು ಟೆಸ್ಟ್ ಕ್ರಿಕೆಟ್‌ನಂತಲ್ಲ, ಅಲ್ಲಿ ನಿಮಗೆ ಕೆಲವು ಸ್ಥಾನಗಳಲ್ಲಿ ನಿರ್ದಿಷ್ಟ ಬ್ಯಾಟರ್‌ಗಳು ಬೇಕಾಗುತ್ತವೆ. ಈ ಸ್ವರೂಪದಲ್ಲಿ, ಯಾರು ಬೇಕಾದರೂ, ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು. ನಿಮಗೆ ನೆಲೆಗೊಳ್ಳಲು ಸಮಯವಿಲ್ಲ. ಪ್ರತಿಯೊಬ್ಬರು ಬಾಲ್ ಒಂದರಿಂದ ಬೌಲರ್‌ಗಳನ್ನು ದಂಡಿಸಲು ಪ್ರಾರಂಭಿಸಬೇಕು ಎಂದು," ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ತಿಳಿಸಿದರು.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಶ್‌ದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು - ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ದೀಪಕ್ ಚಹಾರ್.


Click it and Unblock the Notifications
