
ಯುಜಿ ಫಾರ್ಮ್- ಆಡಿಸಬೇಕೋ ಬೇಡವೋ?
ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ನೈಜ ಪ್ರದರ್ಶನ ನಿಡಲು ವಿಫಲವಾಗುತ್ತಿದ್ದಾರೆ. ಕಳೆದ ವರ್ಷದ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ಯುಜಿ ಬಳಿಕ ಐಪಿಎಲ್‌ನಲ್ಲಿ ಮಿಂಚಿ ತಂಡಕ್ಕೆ ವಾಪಾಸಾಗಿದ್ದರು. ಆದರೆ ಮತ್ತೆ ಚಾಹಲ್ ಪ್ರದರ್ಶನ ಕಳವಳಕಾರಿಯಾಗಿದೆ. ಏಷ್ಯಾ ಕಪ್‌ನಲ್ಲಿಯೂ ಚಾಹಲ್ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವಲ್ಲಿ ವಿಫಲವಾಗಿದ್ದರು. ಮಧ್ಯಮ ಓವರ್‌ಗಳಲ್ಲಿ ಚಾಹಲ್ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಟೀಮ್ ಇಂಡಿಯಾ ಈಗ ದೊಡ್ಡ ಗೊಂದಲದಲ್ಲಿ ಸಿಲುಕಿಕೊಂಡಿದೆ. ಅನುಭವಿ ಬೌಲರ್‌ಗೆ ಬೆಂಬಲವಾಗಿ ನಿಲ್ಲಬೇಕೋ ಅಥವಾ ವಿಶ್ವಕಪ್ ವೇದಿಕೆಯಲ್ಲಿ ಆರ್ ಅಶ್ವಿನ್‌ಗೆ ಆಡುವ ಅವಕಾಶ ನೀಡಬೇಕೋ ಎಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ.

ಅಕ್ಷರ್ ಪಟೇಲ್ ಮೇಲೆ ನಂಬಿಕೆ ತೋರಿಸಬಹುದಾ?
ರವೀಂದ್ರ ಜಡೇಜಾ ವಿಶ್ವಕಪ್‌ನಿಂದ ಹೊರಬಿದ್ದಿರುವ ಕಾರಣ ಮಧ್ಯಮ ಓವರ್‌ನಲ್ಲಿ ಭಾರತ ತಂಡಕ್ಕೆ ಎಡಗೈ ದಾಂಡಿಗರ ಕೊರತೆ ಕಾಡುತ್ತಿದೆ. ಏಷ್ಯಾ ಕಪ್‌ನ ಸೂಪರ್ 4 ಹಂತದಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ಬೌಲರ್‌ಗಳಾದ ಶದಬ್ ಖಾನ್ ಹಾಗೂ ಮೊಹಮ್ಮದ್ ಸವಾಜ್ ವಿರುದ್ಧ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಭಾರತದ ಈ ಪ್ರಯೋಗ ವಿಫಲವಾದ ಕಾರಣ ಸೋಲು ಅನುಭವಿಸಬೇಕಾಯಿತು. ಇದೀಗ ವಿಶ್ವಕಪ್‌ನಲ್ಲಿ ಭಾರತ ಶದಬ್ ಹಾಗೂ ನವಾಜ್ ಜೋಡಿಯನ್ನು ಎದುರಿಸುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಭಾರತದ ಟಾಪ್ 5ನಲ್ಲಿ ಎಡಗ ದಾಂಡಿಗರೇ ಇಲ್ಲದಿರುವ ಕಾರಣ ಈಗ ಭಾರತಕ್ಕೆ ಆಶಾದಾಯವಾಗಿ ಕಾಣಿಸುತ್ತಿರುವುದು ಆಲ್‌ರೌಂಡರ್ ಅಕ್ಷರ್ ಪಟೇಲ್. ಆದರೆ ಅಗತ್ಯವಿರುವ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಸುವಷ್ಟು ಧೈರ್ಯವನ್ನು ತೋರಿಸಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಡೆತ್ ಓವರ್ ಸಮಸ್ಯೆಗೆ ಇದೆಯಾ ಪರಿಹಾರ?
ಭಾರತದ ಪಾಲಿಗೆ ಈಗ ದೊಡ್ಡಮಟ್ಟದಲ್ಲಿ ಕಳವಳ ಮೂಡಿಸಿರುವುದು ತಂಡದ ಡೆತ್ ಓವರ್ ಬೌಲಿಂಗ್ ಸಮಸ್ಯೆ. ತಂಡದ ಅನುಭವಿ ಆಟಗಾರ ಜಸ್ಪ್ರೀತ್ ಬೂಮ್ರಾ ವಿಶ್ವಕಪ್‌ನಿಮದ ಹೊರಬಿದ್ದಿರುವು ಈ ವಿಚಾರದಲ್ಲಿ ಭಾರತಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡಿದೆ. ಯುವ ಆಟಗಾರ ಅರ್ಶ್‌ದೀಪ್ ಸಿಂಗ್ ಸದ್ಯ ಭಾರತಕ್ಕೆ ಭರವಸೆಯಂತೆ ಕಾಣಿಸುತ್ತಿದ್ದರೂ ಅವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುವವರು ಯಾರು ಎಂಬುದು ಕುತೂಹಲ ಮೂಡಿಸಿದೆ. ಹರ್ಷಲ್ ಪಟೇಲ್ ದುಬಾರಿಯಾಗಿತ್ತಿದ್ದು ಭುವಿ ಕೂಡ ಲಯವನ್ನು ಕಳೆದುಕೊಂಡಿದ್ದಾರೆ. ಇನ್ನು ಬೂಮ್ರಾ ಬದಲಿಗೆ ಸೇರ್ಪಡೆಯಾಗಿರುವ ಶಮಿ ಪವರ್‌ಪ್ಲೇ ಬೌಲಿಂಗ್‌ನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿಕೊಂಡಿರುವ ಬೌಲರ್. ಹೀಗಾಗಿ ಭಾರತ ತಂಡಕ್ಕೆ ಡೆತ್ ಓವರ್ ದೊಡ್ಡ ಸವಾಲಾಗುವುದರಲ್ಲಿ ಅನುಮಾನವಿಲ್ಲ ಇದಕ್ಕೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಟೀಮ್ ಇಂಡಿಯಾ ಸಂಪೂರ್ಣ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್


Click it and Unblock the Notifications
