Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK: ಪಾಕ್ ವಿರುದ್ಧ ಗೆದ್ದ ಹೊರತಾಗಿ ವಿಶಿಷ್ಟ ದಾಖಲೆ ಬರೆದ ಕೊಹ್ಲಿ-ಪಾಂಡ್ಯ ಜೋಡಿ

T20 World Cup: Virat Kohli And Hardik Pandya Pair Write Unique Record Apart From Winning Against Pakistan

ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಸಿಡಿದೆದ್ದು ತಂಡವನ್ನು ಗೆಲುವಿನ ಗಡಿ ತಲುಪಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಆದರೆ ಭಾನುವಾರ, ಅಕ್ಟೋಬರ್ 23ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿದ ರೀತಿಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.

ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡರು. ಮಾತ್ರವಲ್ಲದೇ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಗಳಿಸಲು ಭಾರತ ತಂಡಕ್ಕೆ ನೆರವಾದರು.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ನಾಲ್ಕು ವಿಕೆಟ್‌ಗಳ ಜಯದಲ್ಲಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಡಿಮೆ (ಟಿ20) ಸ್ವರೂಪದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿತು. ಇದು ಪಾಕಿಸ್ತಾನ ವಿರುದ್ಧ ಭಾರತದ ಮತ್ತೊಂದು ದಾಖಲೆಯಾಗಿದೆ.

78 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ

78 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ

ಪಾಕಿಸ್ತಾನ ವಿರುದ್ಧದ ತಮ್ಮ ಸೂಪರ್-12 ಪಂದ್ಯದಲ್ಲಿ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ 78 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟದೊಂದಿಗೆ, ಕೊಹ್ಲಿ ಮತ್ತು ಪಾಂಡ್ಯ ಜೋಡಿ, 2012ರ ಡಿಸೆಂಬರ್‌ನಲ್ಲಿ ಬದ್ಧ ಎದುರಾಳಿಗಳ ವಿರುದ್ಧ ನಾಲ್ಕನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟವನ್ನು ಹೊಂದಿದ್ದ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಮಧ್ಯಮ ಕ್ರಮಾಂಕದ ಜೋಡಿಯ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.

ಐಸಿಸಿ ಟಿ20 ವಿಶ್ವಕಪ್‌ 2022ರ ಸೂಪರ್ 12 ಪಂದ್ಯದ ಪಾಕಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಭಾರತ ಎರಡು ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಮುಂದಿನ ಪಂದ್ಯ ನೆದರ್ಲ್ಯಾಂಡ್ಸ್ ವಿರುದ್ಧ ಗುರುವಾರ, ಅಕ್ಟೋಬರ್ 27ರಂದು ಸಿಡ್ನಿಯಲ್ಲಿ ನಡೆಯಲಿದೆ.

ಭಾರತದ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ (3/30)

ಭಾರತದ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ (3/30)

ಇನ್ನು ಭಾನುವಾರದ ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 159/8 ಕಲೆ ಹಾಕಿತು. ಶಾನ್ ಮಸೂದ್ (52) ಮತ್ತು ಇಫ್ತಿಕರ್ ಅಹ್ಮದ್ (51) ಅರ್ಧಶತಕಗಳನ್ನು ಗಳಿಸಿದರು. ಆದರೆ ಪಾಕಿಸ್ತಾನ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಶಾನ್ ಮಸೂದ್ ಮತ್ತು ಇಫ್ತಿಕರ್ ಅಹ್ಮದ್ ನಡುವಿನ 76 ರನ್‌ಗಳ ಜೊತೆಯಾಟವು ಪಾಕಿಸ್ತಾನಕ್ಕೆ ದೊಡ್ಡ ಜೊತೆಯಾಟವಾಗಿತ್ತು.

ಭಾರತದ ಪರ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ (3/30) ಮತ್ತು ಅರ್ಷದೀಪ್ (3/32) ಮಿಂಚಿದರು. ಉನ್ನುಳಿದಂತೆ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.

ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್

ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್

160 ರನ್ ಬೆನ್ನಟ್ಟಿದ ಭಾರತ ಆರಂಭಿಕ ಏಳು ಓವರ್‌ಗಳಲ್ಲಿ 31/4ಕ್ಕೆ ಕುಸಿದಿತ್ತು. ಅಲ್ಲಿಂದೀಚೆಗೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 113 ರನ್‌ಗಳ ಅಮೋಘ ಜೊತೆಯಾಟದೊಂದಿಗೆ ಪಂದ್ಯವನ್ನು ಮರಳಿ ಭಾರತದ ತೆಕ್ಕೆಗೆ ಪಡೆದುಕೊಂಡರು. ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಕೊನೆಯ ಹಂತದಲ್ಲಿ ಔಟಾದರು. ಆದರೆ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್ ಗಳಿಸಿ ಭಾರತ ತಂಡವನ್ನು ನಾಲ್ಕು ವಿಕೆಟ್‌ಗಳ ಗೆಲುವಿಗೆ ಕಾರಣರಾದರು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಾಗಿದ್ದಾಗ ರವಿಚಂದ್ರನ್ ಅಶ್ವಿನ್ ಗೆಲುವಿನ ರನ್ ಬಾರಿಸಿದರು.

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಪ್ರದರ್ಶನಕ್ಕಾಗಿ ವಿರಾಟ್ ಕೊಹ್ಲಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದರು. ಇದೇ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ 1000 ರನ್ ದಾಟಿದ ಮತ್ತು 50 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರನಾದರು.

Story first published: Monday, October 24, 2022, 8:48 [IST]
Other articles published on Oct 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+