ಬೂಮ್ರಾಗೆ ಬದಲಿಯಾಗಿ ಆ ಆಟಗಾರನನ್ನು ಆಯ್ಕೆ ಮಾಡುತ್ತಿದ್ದೆ: ಅಚ್ಚರಿಯ ಹೆಸರು ಹೇಳಿದ ಪಾಕ್ ದಿಗ್ಗಜ

ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲು ಸಜ್ಜಾಗಿರುವ ಟೀಮ್ ಇಂಡಿಯಾಗೆ ಅನುಭವಿ ವೇಹಗಿ ಜಸ್ಪ್ರೀತ್ ಬೂಮ್ರಾ ಗಾಯಾಳಾಗಿರುವುದು ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಆ ಸ್ಥಾನಕ್ಕೆ ಬಿಸಿಸಿಐ ಈವರೆಗೂ ಯಾರನ್ನೂ ಅಧಿಕೃತವಾಗಿ ಆಯ್ಕೆ ಮಾಡಿಲ್ಲ. ಮೀಸಲು ಆಟಗಾರರಾಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಯ ಈ ಪೈಕಿ ಯಾರಾದರೂ ಬೂಮ್ರಾಗೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಯವ ಸಾಧ್ಯತೆಯಿದೆ.
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಜಸ್ಪ್ರಿತ್ ಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ ಎಂದು ಅಚ್ಚರಿಯ ಹೆಸರು ಉಲ್ಲೇಖಿಸಿದ್ದಾರೆ. ವಾಸಿಂ ಅಕ್ರಮ್ ಉಲ್ಲೇಖಿಸಿದ ಆ ಆಟಗಾರ ಬೇರೆ ಯಾರೂ ಅಲ್ಲ ಯುವ ವೇಗಿ ಉಮ್ರಾನ್ ಮಲಿಕ್. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಉಮ್ರಾನ್ ಮಲಿಕ್ ಬಳಿಕ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ಭರವಸೆ ಮೂಡಿಸಿದ್ದರು.
"ನೀವು ಆ ಆತನ ಆಟವನ್ನು ನೋಡಿದ್ದೀರಾ? ಅತ್ಯಂತ ವೇಗವಾಗಿ ಬೌಲಿಂಗ್ ದಾಳಿ ನಡೆಸಬಲ್ಲ ಆಟಗಾರ ಆತ. ಭಾರತ ಆತನನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿತ್ತು. ಆದರೆ ಅಲ್ಲಿ ಆತನಿಗೆ ಯಶಸ್ಸು ದೊರೆಯಲಿಲ್ಲ. ಇದು ಟಿ20 ಮಾದರಿಯಲ್ಲಿ ಸಾಮಾನ್ಯ. ಆದರೆ ನೀವು ಆತನಿಗೆ ಬೆಂಬಲವನ್ನು ನೀಡಬೇಕಾಗಿತ್ತು. ನಾನು ಥಿಂಕ್ ಟ್ಯಾಂಕ್‌ನಲ್ಲಿದ್ದರೆ ಆತನನ್ನು ಯಾವಾಗಲೂ ತಂಡದಲ್ಲಿರಲು ಬಯಸಿತ್ತಿದ್ದೆ. ಆತ ಹೆಚ್ಚು ಆಡಿದಂತೆ ಅನುಭವ ಪಡೆದುಕೊಳ್ಳುತ್ತಾನೆ. ಟಿ20 ಮಾದರಿಯಲ್ಲಿ ಈ ಅನುಭವ ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ ವಾಸಿಂ ಅಕ್ರಮ್.
"ದುರದೃಷ್ಟವಶಾತ್ ಟಿ20 ಮಾದರಿ ಬೌಲರ್‌ಗಳಿಗೆ ಹೇಳಿ ಮಾಡಿಸಿದ್ದಲ್ಲ. ಆದರೆ ಈ ಕಾಲಕ್ಕೆ ಇದು ಅಗತ್ಯವಾಗಿರುವ ಮಾದರಿಯಾಗಿದೆ. ಸಾಕಷ್ಟು ಮನರಂಜೆನ ನೀಡುತ್ತಿದ್ದು ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಇಂಥಾ ಸಂದರ್ಬದಲ್ಲಿ ಬೌಲರ್‌ಗಳು ಕೆಲವೊಮ್ಮೆ ಹೊಡೆಸಿಕೊಳ್ಳುತ್ತಾರೆ. ಅದು ಆಗಾಗ ನಡೆಯಬಹುದು" ಎಂದಿದ್ದಾರೆ ವಾಸಿಂ ಅಕ್ರಮ್.
ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹರ್ ಬದಲಿಗೆ ಮೀಸಲು ಆಟಗಾರನಾಗಿ ಸೇರಿಕೊಂಡಿರುವ ಮೊಹಮ್ಮದ್ ಸಿರಾಜ್ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಅವರು ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಬೂಮ್ರಾ ಗಾಯಗೊಂಡಿರುವ ಕಾರಣ ಶಮಿ ಭಾರತದ ಆಡುವ ಬಳಗವನ್ನು ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ ಶ್ರೇಯಸ್ ಐಯ್ಯರ್ ಹಾಗೂ ರವಿ ಬಿಷ್ಣೋಯ್ ಆಸ್ಟ್ರೇಲಿಯಾಗೆ ಪ್ರಯಾಣಿಸದೆ ಅಚ್ಚರಿ ಮೂಡಿಸಿದ್ದಾರೆ. ಈ ಇಬ್ಬರು ಆಟಗಾರರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭಾಗವಹಿಸಲು ತಮ್ಮ ತಮ್ಮ ರಾಜ್ಯ ತಂಡಗಳನ್ನು ಸೇರಿಕೊಂಡಿದ್ದಾರೆ.
ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications